
ಶಿವಮೊಗ್ಗ : ಆಗಸ್ಟ್ ೦೩ :: ನಗರದ ಕೋಟೆ ಆಂಜನೇಯ ದೇವಸ್ಥಾನದ ಸುತ್ತಮುತ್ತ ಭಿಕ್ಷೆ ಬೇಡಿ ಜೀವಿಸುತ್ತಿದ್ದ ಸುಮಾರು ೬೫ ವರ್ಷದ

ಮಹಿಳೆ ಜು.೨೯ ರಂದು ಅಸ್ವಸ್ಥಳಾಗಿ ದೇವಸ್ಥಾನದ ಮುಂದಿನ ಫುಟ್‌ಪಾತ್ ಮೇಲೆ ಮಲಗಿದ್ದನ್ನು ಕಂಡ ಸಾರ್ವಜನಿಕರು ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿರುತ್ತಾರೆ.

ಈಕೆಯ ಚಹರೆ ಸುಮಾರು ೫.೪ ಅಡಿ ಎತ್ತರೆ, ತೆಳ್ಳನೆಯ ಮೈಕಟ್ಟು, ಕೋಲುಮುಖ, ಕಪ್ಪು ಮೈಬಣ್ಣ ಹೊಂದಿದ್ದು,

ಎಡಗೈ ಮುಂಗೈನಲ್ಲಿ ಕಪ್ಪು ಮಚ್ಚೆ ಇರುತ್ತದೆ. ಮೈಮೇಲೆ ಗುಲಾಬಿ ಬಣ್ಣದ ಸೀರೆ ಕಪ್ಪು ಜಾಕೇಟ್ ಧರಿಸಿರುತ್ತಾರೆ.

ಈಕೆಯ ವಾರಸ್ಸುದಾರರು ಪತ್ತೆಯಾದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ