ಹೊಸನಗರ: ಹೊಸನಗರ ತಾಲ್ಲೂಕಿನ ಹೊಸಹಳ್ಳಿ ಹರೀಶ ಬಿನ್ ನಾಗಪ್ಪನವರ ವಾಸದ ಮನೆ, ಹರಸಾಳು ಗ್ರಾಮದಲ್ಲಿ ಮನೆ ಕುಸಿತ, ಮಾವಿನಕೊಪ್ಪ ಗ್ರಾಮದ ಜಯಲಕ್ಷ್ಮೀ ಗೋವಿಂದಪ್ಪನವರ ಮನೆ ಕುಸಿತ, ಬರವೆ ಗ್ರಾಮದ ರತ್ನಮ್ಮ

ಕೋಂ ತಿಮ್ಮಪ್ಪನವರ ಮನೆ ಕುಸಿತ, ಕಚಿಗೆಬೈಲು ಗ್ರಾಮದ ಗಾಯಿತ್ರಿ ಕೋಂ ದೇವರಾಜ ಮನೆ ಕುಸಿತ, ಹರಿದ್ರಾವತಿ ಹಳೇ ಬಾಣಿಗ ಲವಪ್ಪ ಬಿನ್ ಶಿವಪ್ಪನವರ

ಕೊಟ್ಟಿಗೆ ಹಾನಿ, ಬಾಣಿಗ ಗ್ರಾಮದ ಸರ್ಕಾರಿ ಶಾಲೆಯ ಬಾವಿ ಕುಸಿತ, ಬೇಳೂರು ಗ್ರಾಮದ ಬಿ.ಜಿ ಲೋಕಪ್ಪ ಗೌಡ ಬಿನ್ ಗಂಗೆಗೌಡರವರ ಮನೆ ಗೋಡೆ ಕುಸಿತ, ಕರಿಮನೆ ಶೇಷಪ್ಪ ಬಿನ್ ಹೂವಪ್ಪನವರ ಮನೆ ಕುಸಿತ, ಕಿಳಂದೂರು ಗ್ರಾಮದ ರಾಮಕೃಷ್ಣ ಬಿನ್ ತಿಮ್ಮಪ್ಪ ಗೌಡರ ಮನೆಯ ಸಮೀಪ ಧರೆ ಕುಸಿತ, ಮೂಡುಗೊಪ್ಪ ಗ್ರಾಮದ ಮಂಜುಳ ಬಿನ್ ಜಯಕುಮಾರ್‌ರವರ ಮನೆಯ ಗೋಡೆ ಕುಸಿತ, ಮೂಡುಗೊಪ್ಪ ಗ್ರಾಮದ

ಹಿರೇಮಠದ ನಾಗರತ್ನ ಕೋಂ ಮುತ್ತಣ್ಣನವರ ಮನೆಯ ಗೋಡೆ ಕುಸಿತ, ಚಿಕ್ಕಜೇನಿ ಗ್ರಾಮದ ಶೇಖರರವರ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿ, ಮಾರುತಿಪುರ ಗ್ರಾಮದ ಕೃಷ್ಣರವರ ಜಮೀನಿನ ಮೇಲೆ ಹಳ್ಳ ಹರಿದು ತೋಟ ಸಂಪೂರ್ಣ ನಾಶ, ಮಾರುತಿಪುರ ರಸ್ತೆ ಸಂಪೂರ್ಣ ಹಾನಿ, ಮುತ್ತುರು ಗ್ರಾಮದ ಕೆರೆದಂಡೆ ಒಡೆದು ರಾಜುರವರ ಖಾತೆ ಜಮೀನಿಗೆ ಮರಳು ಬಂದು ಸೇರಿದ್ದು ಜಮೀನು ಸಂಪೂರ್ಣ ನಾಶವಾಗಿದೆ ಒಟ್ಟರೇ ಹೊಸನಗರ ತಾಲ್ಲೂಕಿನಲ್ಲಿ ಮಳೆಯ ಅಬ್ಬರಕ್ಕೆ ಜನರು ತರ್ತರಿಸಿ ಹೋಗಿದ್ದಾರೆ.


ತಹಶೀಲ್ದಾರ್, ಗ್ರಾಮ ಆಡಳಿತಾದಿಕಾರಿ ಆಪ್ರ ಶಾಸಕರು ಬೇಟಿ ಪರಿಶೀಲನೆ: ಹೊಸನಗರ ತಾಲ್ಲೂಕಿನಲ್ಲಿ ಸುಮಾರು ಅಂದಾಜು ೩೫ಮನೆಗಳು ೫ಕೊಟ್ಟಿಗೆಗಳು ಗದ್ದೆ, ತೋಟ, ಸಂಪೂರ್ಣ ಹಾಳಾಗಿದ್ದು ಹೊಸನಗರ ತಹಶೀಲ್ದಾರ್ ರಶ್ಮೀ ಹಾಲೇಶ್ ಆಯಾಯ ಭಾಗದ ಗ್ರಾಮ

ಆಡಳಿತಾಧಿಕಾರಿ ಕೌಶಿಕ್, ನವೀನ್, ಸಿದ್ದಪ್ಪ ಲೋಹಿತ್, ದೀಪು ಇನ್ನೂ ಮುಂತಾದವರು ಜೊತೆಗೆ ರೆವಿನ್ಯೋ ಇನ್ಸ್‌ಪೇಕ್ಟರ್ ರೇಣುಕಯ್ಯ ತಾಲ್ಲೂಕು ಕಛೆರಿಯ ಸಿಬ್ಬಂದಿಗಳು ಇವರ ಜೊತೆಗೆ ಶಾಸಕ ಬೇಳೂರು ಗೋಪಾಲಕೃಷ್ಣರವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಗಗ್ಗ ಬಸವರಾಜ್ ಇನ್ನೂ ಮುಂತಾದವರು ಸ್ತಳ ಪರಿಶೀಲಿಸಿ ನೊಂದವರಿಗೆ ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ.


ಚಿತ್ರ: ಹಾನಿಯಾದ ಮನೆಗೆ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ತಂಡ ಬೆಟಿ ನೀಡಿರುವುದು.
ಚಿತ್ರ: ಗ್ರಾಮ ಲೆಕ್ಕಾಧಿಕಾರಿ ನವೀನ್‌ರವರು ಹಾನಿಯಾದ ಮನೆಗೆ ಬೇಟಿ ನೀಡಿರುವುದು.
ಹೆಚ್.ಎಸ್.ನಾಗರಾಜ್

By admin

ನಿಮ್ಮದೊಂದು ಉತ್ತರ

error: Content is protected !!