ಶಿವಮೊಗ್ಗ, ಜೂ.26
ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಹೋಬಳಿ ಕೇಸಲೂರು ಗ್ರಾಮದ ಒಂದು ಸಣ್ಣ ಹಳ್ಳಿಯಾದ ಕಡ್ತೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ
ಡಾ.ಆರತಿ ಕೃಷ್ಣ ರವರು ಸಾರಿಗೆ ಮತ್ತು ಮುಜರಾಯಿ ಸಚಿವರಿಗೆ ಅನುದಾನ ನೀಡಲು ಕೋರಿದ್ದು, ಮುಜರಾಯಿ ಇಲಾಖೆಯಿಂದ ರೂ.5 ಲಕ್ಷ ಸಹಾಯಧನ ಮಂಜೂರಾಗಿರುತ್ತದೆ.
ಉಪಾಧ್ಯಕ್ಷೆ ಡಾ.ಆರತಿ ಕೃಷ್ಣರವರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ದಾರಕ್ಕಾಗಿ ಸರ್ಕಾರದ ವತಿಯಿಂದ ಅನುದಾನ ಕೋರಿರುತ್ತಾರೆ. ಮಂಜೂರಾಗದ ಕಾರಣ
ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿ ಜೀರ್ಣೋದ್ದಾರ ಕಾರ್ಯ ಮಾಡಿರುತ್ತಾರೆ. ಮುಂದುವರೆದು ದೇವಸ್ಥಾನದ ಆವರಣಕ್ಕೆ ಇಂಟರ್‍ಲಾಕ್, ಟೈಲ್‍ಗಳ ಅವಶ್ಯಕತೆ ಇದ್ದು ಅಂದಾಜು
ರೂ.5 ಲಕ್ಷ ಸಹಾಯ ಧನವನ್ನು ಸರ್ಕಾರದ ವತಿಯಿಂದ ನೀಡಲು ಉಪಾಧ್ಯಕ್ಷರನ್ನು ಕೋರಿರುತ್ತಾರೆ. ಕೋರಿಕೆಗೆ ಸ್ಪಂದಿಸಿದ ಡಾ.ಆರತಿ ಕೃಷ್ಣರವರು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ
ಇವರಿಗೆ ಸದರಿ ಅನುದಾನ ನೀಡಲು ಕೋರಿದ್ದು ಮುಜರಾಯಿ ಇಲಾಖೆ ವತಿಯಿಂದ ರೂ. 5 ಲಕ್ಷಗಳನ್ನು ಮಂಜೂರು ಮಾಡಿರುತ್ತಾರೆ, ಮತ್ತು ಸದ್ಯದಲ್ಲೇ ಕಾಮಗಾರಿ ಪ್ರಾರಂಭವಾಗುವುದು ಎಂದು ಉಪಾಧ್ಯಕ್ಷರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.