• ಶಿವಮೊಗ್ಗದ ಹಿರಿಮೆಯ ನಟನಂ ಬಾಲನಾಟ್ಯ ಕೇಂದ್ರವು ಭಾರತೀಯ ಸಂಸ್ಕೃತಿಯ ಉಳಿಸುವ ನಿಟ್ಟಿನಲ್ಲಿ ಸಾಗುತ್ತ ಬಂದಿದ್ದು, ಭರತನಾಟ್ಯವನ್ನು ಮುಂದಿನ ಪೀಳಿಗೆಗೂ ಉಳಿಸುವ ಕೆಲಸವನ್ನು ಮಾಡುತ್ತಿದೆ. ಇದರ ಜೊತೆಗೆ ಜಾನಪದ ನೃತ್ಯಗಳಿಗೂ ಆದತೆ ನೀಡುತ್ತಿದೆ. ಅಷ್ಟೇ ಅಲ್ಲದೆ, ಪರಿಸರದ ಬಗ್ಗೆ ಕಾಳಜಿ, ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿದೆ. ಇದರ ರೂವಾರಿಯಾದ ವಿದ್ವಾನ್ ಎಸ್.ಕೇಶವಕುಮಾರ್ ಫಿಳೈ ಅವರಿಗೆ ಅತ್ಯುನ್ನತವೆಂಬ ಗೌರವ ಡಾಕ್ಟರೇಟ್ ದೊರೆತಿದು ತನ್ನಿಮ್ಮಿತ್ತ ಅವರ ಸ್ಥೂಲ ಪರಿಚಯದ ಲೇಖನ- ತುಂಗಾತರಂಗ ದಿನಪತ್ರಿಕೆ

  • ಸೇವಾ ಸಾಧನೆಗಳು
    ಮಕ್ಕಳಿಂದ ದೂರವಾಗುತ್ತಿರುವ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಗುರಿಯಾಗಿದೆ. ಈ ನಿಟ್ಟಿನಲ್ಲಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಕ್ಕಳ ಮನಸ್ಸಿನಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಹಾಗೂ ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗಾಗಿ ಶಿವಮೊಗ್ಗದ ವಿದ್ವಾನ್ ಎಸ್. ಕೇಶವಕುಮಾರ್ ಪಿಳೈ ೧೯೮೯ ರಲ್ಲಿ ಸರ್ಕಾರದಿಂದ ನೊಂದಣಿ ಮಾಡಿಸಿ ಸ್ಥಾಪನೆ ಮಾಡಿಕೊಂಡ ಸಂಸ್ಥೆಯೇ ಶಿವಮೊಗ್ಗದ ಹೆಮ್ಮೆಯ ನಟನಂ ಬಾಲ ನಾಟ್ಯ ಕೇಂದ್ರ(ರಿ.).
    ಭರತನಾಟ್ಯದಲ್ಲಿ ವಿದ್ವತ್, ಕರ್ನಾಟಕ ಸಂಗೀತದಲ್ಲಿ ಸೀನಿಯರ್, ಮೈಸೂರು ಯೂನಿವರ್ಸಿಟಿಯಲ್ಲಿ ಎಂ.ಡಾನ್ಸ್ ಹಾಗೂ ಕುವೆಂಪು ಯೂನಿವರ್ಸಿಟಿಯಲ್ಲಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಭರತನಾಟ್ಯ ಶಿಕ್ಷಣವನ್ನು ಮೂಲ ಉದ್ದೇಶವಾಗಿ ಇಟ್ಟುಕೊಂಡಿದ್ದರೂ ಕೂಡಾ ಜೊತೆಯಲ್ಲಿ ಕರ್ನಾಟಕದ ಪ್ರಸಿದ್ಧ ಜಾನಪದ ಕಲೆಗಳಾದ ಸುಗ್ಗಿ ಕುಣಿತ, ಲಂಬಾಣಿ ಕುಣಿತ, ಕೊರವಂಜಿ ನೃತ್ಯ, ಕೋಲಾಟ ಇತ್ಯಾದಿಗಳನ್ನು ಕೂಡಾ ಮಕ್ಕಳಿಗೆ ಕಲಿಸಿ ಅದರ ಮುಖಾಂತರ ಭಾರತದ ಸಾಂಸ್ಕೃತಿಕ ಹಾಗೂ ಜಾನಪದ ವೈಭವವನ್ನು ಅಳಿಸದಂತೆ ನೋಡಿಕೊಳ್ಳುತ್ತಿದ್ದಾರೆ. ಭರತನಾಟ್ಯ ಮತ್ತು ಜಾನಪದ ನೃತ್ಯವಲ್ಲದೆ ಪರಿಸರದ ಬಗ್ಗೆ ಕಾಳಜಿ, ವಿಶ್ವ ಭೂ ದಿನಾಚರಣೆ, ಆರೋಗ್ಯ ಮತ್ತು ಯೋಗಶಿಬಿರಗಳನ್ನು ನಡೆಸುತ್ತಿದ್ದೇವೆ. ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯ, ಹೊರದೇಶಗಳಲ್ಲಿ ಕಾರ್ಯಕ್ರಮ ನೀಡುವುದು ಇದರ ಧೈಯವಾಗಿದೆ. ಈ ಸಾಧನೆಯನ್ನು ಗಮನಿಸಿ ಕೇಂದ್ರ ಸರಕಾರದ ಮಕ್ಕಳಿಗಾಗಿ ಇರುವ ನೆಹರುರವರ ನ್ಯಾಷನಲ್ ಬಾಲಭವನ ನ್ಯೂ ದೆಹಲಿಯಿಂದ ೧೯೯೩ ರಲ್ಲಿ ಈ ಕೇಂದ್ರಕ್ಕೆ ಮಾನ್ಯತೆ ನೀಡಿದೆ.

  • ನಮ್ಮ ಸಂಸ್ಥೆಯು ಶಿವಮೊಗ್ಗ ಹಾಗೂ ಭದ್ರಾವತಿ, ಕಡೂರು ಒಟ್ಟು ೮ ಶಾಖೆಗಳನ್ನು ತೆರೆದು ನೃತ್ಯ ಕಲೆಯನ್ನು ಸುಮಾರು ೪೦೦ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆಯನ್ನು ಕರ್ನಾಟಕದಲ್ಲಿ ಅಲ್ಲದೆ ಹೊರರಾಜ್ಯಗಳಾದ, ಆಂಧ್ರ, ಗುಜರಾತ್, ರಾಜಸ್ಥಾನ, ದೆಹಲಿ, ಉತ್ತರಪ್ರದೇಶದ ಗೌತಮ ಬುದ್ಧನಗರ, ಮಧ್ಯಪ್ರದೇಶದ ರಾಜಧಾನಿಯಾದ ಭೂಪಾಲ್, ಡಿಯು ದ್ವೀಪ, ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ವಿಶಾಖಪಟ್ನಂ, ಇಚಿದೋರ್, ಗೋವಾ ಹಾಗೂ ಹೊರದೇಶಗಳಾದ ನೇಪಾಳ ಹಾಗೂ ಸಿಂಗಪೂರ್, ತಾಯ್‌ಲ್ಯಾಂಡ್, ಮಲೇಷಿಯಾ, ದುಬೈ ದೇಶಗಳಲ್ಲಿ ಕಾರ್ಯಕ್ರಮವನ್ನು ನೀಡಿ ಅತ್ಯಂತ ಉತ್ತಮ ಸಂಸ್ಥೆಯೆಂದು ಹೆಸರು ಗಳಸಿದೆ.
    ಭಾರತದ ಕೇಂದ್ರ ಸರ್ಕಾರದ ನ್ಯಾಷನಲ್ ಬಾಲಭವನ ನವದೆಹಲಿಯವರ ಕರೆಯ ಮೇರೆಗೆ ೧೯೯೩ರಿಂದ ಪ್ರತಿವರ್ಷ ನವೆಂಬರ್ ೧೪ ರಂದು ಮಕ್ಕಳ ದಿನಾಚರಣೆಯ ಅಂಗವಾಗಿ ನ್ಯಾಷನಲ್ ಬಾಲಭವನ ನವದೆಹಲಿಯಲ್ಲಿ ನಡೆಯುವ ಅಂತರರಾಷ್ಟ್ರ ಮಕ್ಕಳಮೇಳದಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಮಾಡಲಾಗುತ್ತದೆ. ಈ ಮೇಳದಲ್ಲಿ ಭಾರತದ ವಿದ್ಯಾರ್ಥಿಗಳಲ್ಲದೆ ಜಪಾನ್, ಜರ್ಮನ್, ಉಜ್‌ಬೇಕಿಸ್ತಾನ್, ಮಂಗೋಲಿಯ, ರಷ್ಯಾ, ನೇಪಾಳ, ಮಾರಿಷಿಯಸ್, ಕುವೈತ್, ಶ್ರೀಲಂಕ ರಾಷ್ಟ್ರಗಳಿಂದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ತಮ್ಮ ಕಲೆಯನ್ನು ಪ್ರಸ್ತುತ ಪಡಿಸುತ್ತಾರೆ. ಅವರ ಜೊತೆ ಇಲ್ಲಿನ ವಿದ್ಯಾರ್ಥಿಗಳು ನಮ್ಮ ಭಾರತದ ಕಲೆಯನ್ನು ಅವರೆದುರು ಪ್ರಸ್ತುತ ಪಡಿಸುತ್ತಾರೆ.
DOCTARAETE

  • ವಿಶೇಷ ಸಾಧನೆ

  • ೧೯೯೨ ರಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಸ್.ಬಂಗಾರಪ್ಪನವರ ಸಮ್ಮುಖದಲ್ಲಿ ನೃತ್ಯ, ದಿನಾಂಕ ೧೪-೧೧-೧೯೯೬ ರಂದು ಆಗಿನ ಭಾರತದ ಪ್ರಧಾನಿಗಳಾಗಿದ್ದ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ನೃತ್ಯ, ದಿನಾಂಕ ೨೦-೧೧-೧೯೯೯ ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ರಾಣಿ ಸತೀಶ್ ರವರ ಸಮ್ಮುಖದಲ್ಲಿ ನೃತ್ಯ, ದಿನಾಂಕ ೧೪-೧೧-೨೦೦೦ ರಂದು ಮಕ್ಕಳ ದಿನಾಚರಣೆಯ ಅಂಗವಾಗಿ ಭಾರತದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಮಂಡಿ ಶಸ್ತ್ರಚಿಕಿತ್ಸೆ ಆಗಿದ್ದ ಸಂದರ್ಭದಲ್ಲಿ ಅವರಿಗೆ ಮನರಂಜನೆಗಾಗಿ ಅವರ ಮನೆಯಂಗಳದಲ್ಲಿ ನೃತ್ಯ. ಈ ಕಾರ್ಯಕ್ರಮದಲ್ಲಿ ಡಾ. ಮುರಳಿಮನೋಹರಜೋಷಿ, ಸಮತಾ ಬ್ಯಾನರ್ಜಿ ಮತ್ತು ಹಲವಾರು ಗಣ್ಯರು ಭಾಗವಹಿಸಿದ್ದರು.
    ದಿನಾಂಕ ೧೪-೧೧-೨೦೦೧ ರಲ್ಲಿ ಈಗಿನ ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿಯವರ ಸಮ್ಮುಖದಲ್ಲಿ ನೃತ್ಯ, ದಿನಾಂಕ ೧೧-೦೫-೨೦೦೨ ರಂದು ಕೇಂದ್ರ ಉಕ್ಕು ಪ್ರಾಧಿಕಾರದ ಮಂತ್ರಿಗಳಾದ ಬ್ರಿಜ್ ಕಿಶನ್ ತ್ರಿಪಾಟಿರವರ ಸಮ್ಮುಖದಲ್ಲಿ ನೃತ್ಯ, ದಿನಾಂಕ ೧೪-೧೧-೨೦೦೨ ರಂದು ಭಾರತದ ಉಪರಾಷ್ಟ್ರಪತಿಗಳಾಗಿದ್ದ ಬೈರೂನ್‌ಸಿಂಗ್ ಶೇಖಾವತ್‌ರವರು ಹಾಗೂ ಡಾ. ಮುರಳಿ ಮನೋಹರಜೋಷಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಉಪ ಮುಖ್ಯಮಂತ್ರಿಗಳಾಗಿದ್ದ ಕೆ.ಎಸ್.ಈಶ್ವರಪ್ಪ, ತಮಿಳುನಾಡಿನ ಪಾಂಡಿಚೆರಿಯ ಮುಖ್ಯಮಂತ್ರಿಗಳಾದ ಎನ್. ರಂಗಸ್ವಾಮಿ ಹಾಗೂ ಗೋವಾದ ಉಪಮುಖ್ಯಮಂತ್ರಿಗಳಾದ ಚಂದ್ರಕಾಂತ ಕವಲೇಕರ್ ರವರ ಸಮ್ಮುಖದಲ್ಲಿ ನೃತ್ಯ ಕಾರ್ಯಕ್ರಮ ನಡೆಸಿ ಅವರಿಂದ ಮೆಚ್ಚುಗೆ ಪಡೆದಿದ್ದೇವೆ. ೨೦೧೩ ರಲ್ಲಿ ನಮ್ಮ ವಿದ್ಯಾರ್ಥಿಗಳಾದ ಅಧೀಶ್.ಎಸ್. ಮತ್ತು ಲಕ್ಷ್ಮೀಪ್ರಸಾದ್ ಕೆ ಆಚಾರ್‌ರವರು ರಾಷ್ಟ್ರಮಟ್ಟದ ಬಾಲಶ್ರೀ ಅವಾರ್ಡ್‌ಗಳನ್ನು ರಾಷ್ಟ್ರಪತಿಗಳಿಂದ ದೆಹಲಿಯಲ್ಲಿ ಪಡೆದಿದ್ದಾರೆ. ಇದಲ್ಲದೆ ನಮ್ಮ ವಿದ್ಯಾರ್ಥಿಗಳು ಪ್ರಸಿದ್ದ ಟಿ.ವಿ. ವಾಹಿನಿಗಳಾದ ಚಂದನದಲ್ಲಿ ಪ್ರಸಾರವಾಗುವ ಮಧುಮಧುರವೀ ಮಂಜುಳಗಾನಕಾರ್ಯಕ್ರಮದಲ್ಲಿ ಹಾಗೂ ಶಂಕರ ವಾಹಿನಿಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.

  • ಅಂತರರಾಜ್ಯ ಸಾಂಸ್ಕೃತಿಕ ವಿನಿಮಯ
    ನಮ್ಮ ಕೇಂದ್ರದಿಂದ ಪ್ರತಿವರ್ಷವೂ ಸರ್ಕಾರದ ಅಥವಾ ಯಾವುದೇ ಸಂಘ ಸಂಸ್ಥೆಯ ನೆರವು ಇಲ್ಲದೆ ಅಂತರರಾಜ್ಯ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮ ನಡೆಸುತ್ತಿರುವ ಸಂಸ್ಥೆ ಇದಾಗಿದೆ.. ದಿನಾಂಕ ೦೪-೦೧-೨೦೦೨ ರಿಂದ ೦೬-೦೧-೨೦೦೨ ರವರೆಗೆ ಡಿಯ್ಯು ದ್ವೀಪದ ೮ ವಿದ್ಯಾರ್ಥಿಗಳನ್ನು ಕರೆಸಿ ಸಾಂಸ್ಕೃತಿಕ ಸಮ್ಮಿಲನ ೩. ದಿನಾಂಕ : ೦೧-೦೧-೨೦೦೩ ೦೦೨ ೦೩-೦೧-೨೦೦೩ ೬ ವಿದ್ಯಾರ್ಥಿಗಳನ್ನು ಕರೆಸಿ ಕಾರ್ಯಕ್ರಮ ನಡೆಸಿದ್ದರು. ದಿನಾಂಕ ೩೧-೦೭-೨೦೦೪ ರಂದು ಡಿಯ್ಯು ದ್ವೀಪದ ತಂಡವನ್ನು ಕರೆಸಿ ಕಾರ್ಯಕ್ರಮವನ್ನು ನಡೆಸಿದ್ದು,. ದಿನಾಂಕ ೧೬-೦೨-೨೦೦೫ ರಿಂದ ೧೮-೦೨-೨೦೦೫ ರವರೆಗೆ ತಮಿಳುನಾಡಿನ ೭ ವಿದ್ಯಾರ್ಥಿಗಳನ್ನು ಕರೆಸಿ ಕಾರ್ಯಕ್ರಮ ನೀಡಿದ್ದಾರೆ.
    ಅಂತರರಾಷ್ಟ್ರಮಟ್ಟದ ಕಾರ್ಯಕ್ರಮ
    ೨೦೦೨ ರಿಂದ ೨೦೦೮ ರವರೆಗೆ ಪ್ರತಿ ವರ್ಷ ದೆಹಲಿಯಲ್ಲಿ ನಡೆದ ಅಂತರರಾಷ್ಟ್ರಮಟ್ಟದ ೭ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು. ೧೧.೦೩.೨೦೧೬ ರಿಂದ ೧೩.೦೩.೨೦೧೬ರಲ್ಲಿ ಆರ್ಟ್ ಆಫ್ ಲೀವಿಂಗ್‌ನ ಗುರುಗಳಾದ ಶ್ರೀ ರವಿಶಂಕರ್ ಗುರುಜಿಯವರು ದೆಹಲಿಯಲ್ಲಿ ನಡೆಸಿದ ವರ್ಲ್ಡ್ ಕಲ್ಟರ್ ಫೆಸ್ಟಿವಲ್ ಪ್ರತಿವರ್ಷ ಶಿವರಾತ್ರಿ ಪ್ರಯುಕ್ತ ಉತ್ತರ ಪ್ರದೇಶದ ವಾರಣಾಸಿ (ಕಾಶಿ)ಯ ಜಂಗಮವಾಣಿ ಮಠದಲ್ಲಿ ಉಚಿತ ನೃತ್ಯಸೇವಾ ಕಾರ್ಯಕ್ರಮ ನಡೆಸುತ್ತೇವೆ. ಹೊರರಾಜ್ಯಗಳಲ್ಲಿ ಭಾಗವಹಿಸಿದ್ದ ಅಂತರರಾಜ್ಯ ಸಾಂಸ್ಕೃತಿಕ ಸಮ್ಮಿಲನ ನಮ್ಮ ಕೇಂದ್ರದಿಂದ ಹೊರರಾಜ್ಯಗಳಾದ ಡೆಲ್ಲಿ, ರಾಜಸ್ಥಾನ, ಗುಜರಾತ್, ವಿಶಾಖಪಟ್ನಂ, ಡಿಯ್ಯು ದೀಪ. ಭೂಪಾಲ್, ಇಂಡೋರ್, ಗೋವಾಗಳಲ್ಲಿ ಒಟ್ಟು ೪೫ ಕಾರ್ಯಕ್ರಮಗಳನ್ನು ನೀಡಿದ್ದೇವೆ.
    ನಟನಂ ಕೇಂದ್ರದಿಂದ ಸೇವಾ ಕಾರ್ಯಕ್ರಮಗಳು
    ಸರ್ಕಾರಿ ಬಾಲಕಿಯರ ವಿದ್ಯಾರ್ಥಿನಿಲಯ, ಬಾಲರಾಜ್ ಅರಸ್ ರಸ್ತೆಯಲ್ಲಿ ೩ ತಿಂಗಳ ಉಚಿತ ಭರತನಾಟ್ಯ, ಜಾನಪದ ಕಲೆ, ಸಂಗೀತ ಕಲಿಸುವ ಶಿಬಿರವನ್ನು ದಿನಾಂಕ ೧೩-೧೨-೨೦೧೨ ರಂದು ಪ್ರಾರಂಭಿಸಿ ೦೧-೦೩-೨೦೦೩ ರಂದು ಸಮಾರೋಪ ಸಮಾರಂಭ ನಡೆಸಿಕೊಟ್ಟಿದ್ದೇವೆ. ಸರ್ಕಾರಿ ಪದವಿಪೂರ್ವ ಕಾಲೇಜು ಬಿ.ಹೆಚ್.ರಸ್ತೆಯಲ್ಲಿ ದಿನಾಂಕ ೦೨-೧೧-೨೦೦೨ ರಲ್ಲಿ ೬ ತಿಂಗಳ ಕಾಲ ಉಚಿತ ಭರತನಾಟ್ಯ, ಸಂಗೀತ ಶಿಬಿರವನ್ನು ಪ್ರಾರಂಭಿಸಿ ೦೧-೦೪-೨೦೦೩ ರಂದು ಸಮಾರೋಪ ಸಮಾರಂಭ ನಡೆಸಿದ್ದೇವೆ.
    ಸರ್ಕಾರದ ಶಿವಮೊಗ್ಗದ ’ರಿಮ್ಯಾಂಡ್ ಹೋಂನಲ್ಲಿ ಉಚಿತ ಭರತನಾಟ್ಯ, ಸಂಗೀತ, ಜಾನಪದ ನೃತ್ಯ ಶಿಬಿರಗಳನ್ನು ನಡೆಸಿ ಈವರೆಗೆ ಸುಮಾರು ೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ನೃತ್ಯ ಸಮಾರೋಪಗಳನ್ನು ನಡೆಸಿದ್ದೇವೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ೨೦೦೨ ನೇ ನವೆಂಬರ್ ೨೮ ರಂದು ಶಿವಮೊಗ್ಗ ಜಿಲ್ಲಾ ಕಾರಾಗೃಹದಲ್ಲಿರುವ ಖೈದಿಗಳಿಗೆ ಮನಪರಿವರ್ತನೆ ಮನರಂಜನೆಗಾಗಿ ಭಕ್ತ ಮಾರ್ಕಂಡೇಯ ಎಂಬ ನೃತ್ಯ ನಾಟಕವನ್ನು ನಡೆಸಿಕೊಟ್ಟಿದ್ದೇವೆ. ಕಿವುಡ ಮತ್ತು ಮೂಗ, ಅನಾಥ ಮಕ್ಕಳಿಗೆ ನೃತ್ಯ ಶಿಬಿರವನ್ನು ನಡೆಸಿದ್ದೇವೆ. ಆಶಾಕಿರಣ ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ದಿನಾಂಕ ೦೭-೦೪-೨೦೦೬ ರಿಂದ ೦೯-೦೪-೨೦೦೬ ರವರೆಗೆ ನೃತ್ಯ ಶಿಬಿರವನ್ನು ನಡೆಸಿಕೊಟ್ಟಿದ್ದಾರೆ. ದಿನಾಂಕ ೧೯-೦೩-೨೦೦೬ ರಂದು ಜೀವನ ಸಂಜೆ ವೃದ್ದಾಶ್ರಮದಲ್ಲಿ ಉಚಿತವಾಗಿ ಭರತನಾಟ್ಯ ಕಾರ್ಯಕ್ರಮವನ್ನು ನಡೆಸಿದ್ದು ವಿಶೇಷ.
    ಶಿವಮೊಗ್ಗ ಗೋಪಾಳ ಮಾತೃಛಾಯ ಅನಾಥಾಶ್ರಮದ ಅನಾಥ ಸುಮಾರು ೪೦ ವಿದ್ಯಾರ್ಥಿನಿಯರಿಗೆ ಮೂರು ತಿಂಗಳಕಾಲ ಉಚಿತ ಭರತನಾಟ್ಯ ಸಂಗೀತ ಕಲಿಕಾ ಶಿಬಿರವನ್ನು ರೋಟರಿಯವರ ಸಂಯುಕ್ತಾಶ್ರದಲ್ಲಿ ನಡೆಸಿದ್ದು, ನಟನಂ ಕೇಂದ್ರದಿಂದ ನೃತ್ಯದ ಜೊತೆಗೆ ಪರಿಸರ ಜ್ಞಾನವನ್ನು ಮೂಡಿಸುವುದಕ್ಕೋಸ್ಕರ ಪರಿಸರ ದಿನಾಚರಣೆ, ವಿಶ್ವ ಭೂ ದಿನಾರಣೆ, ವಿಶ್ವ ನೃತ್ಯ ದಿನಾಚರಣೆ, ವಿಶ್ವ ಯೋಗದಿನಾಚರಣೆ ಇನ್ನೂ ಮೂಂತಾದ ಕಾರ್ಯಕ್ರಮ ನಡೆಸುತ್ತಿದ್ದಾರೆ.
    ಈ ಸಂಸ್ಥೆಯ ಮೂಲಕ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳಿಗೆ ಸೇವಾ ರೂಪವಾಗಿ ನೃತ್ಯ ಸೇವೆಯನ್ನು ಸಲ್ಲಿಸಿದ್ದು ಅದರ ಮುಖಾಂತರ ಭಾರತದ ಮಾನವೀಯ ಮೌಲ್ಯಗಳಾದ ತ್ಯಾಗ, ಸೇವೆ, ಬಲಿದಾನ ಮುಂತಾದವುಗಳನ್ನು ಮುಂದುವರೆಸಿಕೊಂಡು ಬಂದಿದ್ದು, ಅಂಧರ, ಅಶಕ್ತರ, ವೃದ್ಧರ, ದಲಿತರ ಮಹಿಳೆಯರ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿ ಕೊಡಲಾಗಿದೆ. ಹೀಗಾಗಿ ಶಿವಮೊಗ್ಗದ ಜನತೆಯ ದೃಷ್ಟಿಯಲ್ಲಿ ಮಾತ್ರವಲ್ಲದೇ, ಭಾರತದಾದ್ಯಂತ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುತ್ತಿರುತ್ತೇನೆ. ಕೇಶವಕುಮಾರ್ ಅವರ ಈ ಸಾಧನೆಗಳನ್ನು ಗುರುತಿಸಿ ಕೊಲ್ಕತ್ತದ ಹಿಂದೂಸ್ಥಾನಿ ಆರ್ಟ್ಸ್ & ಮ್ಯೂಸಿಕ್ ಸೊಸೈಟಿ ಸಂಸ್ಥೆಯಿಂದ ವರದೇಶವಾದ ದುಬೈನಲ್ಲಿ ನಡೆದ ಭಾರತ ಸಂಸ್ಕೃತಿ ಯಾತ್ರಾ ಕಾರ್ಯಕ್ರಮದಲ್ಲಿ ನನಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿರುತ್ತಾರೆ.

  • ನಟನಂ ಬಾಲನಾಟ್ಯ ಕೇಂದ್ರದ ಅಧ್ಯಕ್ಷ ಹಾಗೂ ಕರ್ನಾಟಕ ಕಲಾ ಶ್ರೀ ವಿದ್ವಾನ್ ಎಸ್. ಕೇಶವಕುಮಾರ್ ಫಿಳೈ ಅವರಿಗೆ ಕೊಲ್ಕತ್ತಾದ ವೆಸ್ಟ್ ಬೆಂಗಾಲ್‌ನ ಹಿಂದೂಸ್ತಾನ್ ಆರ್ಟ್ಸ್ ಮತ್ತು ಮ್ಯೂಸಿಕ್ ಸೊಸೈಟಿರವರು ಭರತನಾಟ್ಯ ಕಲಾ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರ್ ಪದವಿ ನೀಡಿ ಸನ್ಮಾನಿಸಿದ್ದಾರೆ.
    ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿದ್ವಾನ್ ಎಸ್.ಕೇಶವಕುಮಾರ್ ಫಿಳೈ ಮಾಹಿತಿ ನೀಡಿ, ೩೮ ವರ್ಷಗಳಿಂದ ನಮ್ಮ ಕೇಂದ್ರದಿಂದ ಭರತ ನಾಟ್ಯವನ್ನು ಕಲಿಸುತ್ತಿದ್ದೇವೆ. ಸಾವಿರಾರು ಮಕ್ಕಳು ನಮ್ಮ ಸಂಸ್ಥೆಯಲ್ಲಿ ಕಲಿತು ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ನನ್ನ ೩೮ ವರ್ಷದ ಈ ಸೇವೆಯನ್ನು ಗುರುತಿಸಿ ಮ್ಯೂಸಿಕ್ ಸೊಸೈ ಟಿಯವರು ಡಾಕ್ಟರೇಟ್ ಪದವಿ ನೀಡಿರುವುದು ನನಗೆ ಸಂತಸ ತಂದಿದೆ ಎಂದರು.
    ಮೇ ೨೬ರಂದು ದುಬೈನಲ್ಲಿರುವ ಚಿಲ್ಡ್ರನ್ ಸಿಟಿ ಅಲ್ ಅಜಿಯಾಲ್ ರಂಗಮಂದಿರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗಣ್ಯರಾದ ಆಶೀಶ್‌ಕುಮಾರ್ ಸರ್ಕಾರ್, ಬಿಜೇಂದ್ರ ಸಿಂಗ್, ಟುಡು ಮಮು, ಸುದೀಂದ್ರ ಕುಮಾರ್, ಪಂಡಿತ್ ಪರಸನ್ನಜಿತ್ ಪೋದಾರ್ ಮುಂತಾದ ವರು ಹಾಜರಿದ್ದು ನನಗೆ ಅಭಿನಂದನೆ ಸಲ್ಲಿಸಿದರು ಎಂದರು.
    ಹೊರ ರಾಜ್ಯ ಮತ್ತು ಹೊರದೇಶಗಳಲ್ಲಿ ಕಾರ್ಯಕ್ರಮ ನೀಡಿರುವುದು ನಮ್ಮ ಹೆಮ್ಮೆಯಾಗಿದೆ. ದಿ.ಎಸ್.ಬಂಗಾರಪ್ಪ, ಮಾಜಿ ಪ್ರಧಾನಿಗಳಾದ ಹೆಚ್. ಡಿ.ದೇವೇಗೌಡ, ದಿ.ಅಟಲ್‌ಬಿಹಾರಿ ವಾಜಪೇಯಿ, ಮಾಜಿ ಸಚಿವೆ ರಾಣಿ ಸತೀಶ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಡಾ.ಮುರುಳಿ ಮನೋಹರ್ ಜೋಷಿ, ಬಿ.ಎಸ್.ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ಗಣ್ಯರ ಸಮ್ಮುಖ ದಲ್ಲಿ ಕಾರ್ಯಕ್ರಮಗಳನ್ನು ನೀಡಿದ ಹೆಮ್ಮೆ ನಮ್ಮ ದಾಗಿದೆ ಎಂದರು.
    ಕೇವಲ ನಮ್ಮ ಕೇಂದ್ರದಲ್ಲಿ ಕಲಿಯುವ ಮಕ್ಕಳಿ ಗಲ್ಲದೆ, ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯ ಗಳು, ರಿಮ್ಯಾಂಡ್ ಹೋಂ, ಕಾರಾಗೃಹದ ಖೈದಿಗಳಿಗೆ, ಆಶಾಕಿರಣ ಬುದ್ಧಿಮಾನ್ಯ ಮಕ್ಕಳ ಶಾಲೆ, ವೃದ್ಧಶ್ರಮ, ಅನಾಥಶ್ರಮ ಹೀಗೆ ವಿವಿಧ ಕಡೆಗಳಲ್ಲಿ ಉಚಿತವಾಗಿ ಭರತನಾಟ್ಯವನ್ನು ಕಲಿಸಿದ್ದೇವೆ. ಈ ಎಲ್ಲಾ ಹಿನ್ನಲೆಯನ್ನು ಗಮನಿಸಿ ಈ ಪ್ರಶಸ್ತಿ ಬಂದಿರುವುದು ನನಗೂ ಮತ್ತು ನಮ್ಮ ಸಂಸ್ಥೆಗೂ ಹೆಮ್ಮೆಯಾಗಿದೆ. ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಿದ, ಈಗ ಭರತನಾಟ್ಯ ಹೇಳಿಕೊಡುತ್ತಿರುವ ಎಲ್ಲಾ ಶಿಕ್ಷಕರಿಗೂ, ಪ್ರೋತ್ಸಾಹ ನೀಡುತ್ತಿರುವ ಪೋಷಕರಿಗೂ, ನನ್ನ ಆತ್ಮೀಯರಿಗೂ, ಅವಕಾಶ ಮಾಡಿಕೊಟ್ಟ ಎಲ್ಲಾ ಗಣ್ಯರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಶೇಖರ್, ಕುಮಾರಸ್ವಾಮಿ, ಚೇತನ್, ನಾಟ್ಯಶ್ರೀ, ವಂದನಾ, ಕಣ್ಣಗಿ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!