ಚುನಾವಣೆಯಲ್ಲಿ ಪತ್ನಿ ಗೀತಾ ಪರ ಕಾರ್ಯಕರ್ತನಾಗಿ ಪ್ರಚಾರ ಮಾಡಿದ್ದೇನೆ.
ಕೆಲವರು ನಾಟಕ ಎಂದು ಬಿಂಬಿಸುತ್ತಿದ್ದಾರೆ. ಇದಕ್ಕೆ ಉತ್ತರ ಕೊಡುವ ಅನಿವಾರ್ಯತೆ ಇಲ್ಲ. ನಿಜ ಜೀವನದಲ್ಲಿ ನಾಟಕ ಮಾಡಿ ಅಭ್ಯಾಸ ನಮಗಿಲ್ಲ.
ಕೂಲಿ ಕೆಲಸ ಮಾಡಿ, ಬೇಕಾದರೂ ಹೆಂಡತಿ ಮಕ್ಕಳನ್ನು ಸಾಕುತ್ತೇನೆ. ಆದರೆ, ನಾನು ಹೆದರುವುದಿಲ್ಲ. ೫೦ ದಿನ ಕ್ಷೇತ್ರದ ಜನರೊಂದಿಗೆ ಹೆಜ್ಜೆ ಹಾಕಿದ್ದೇನೆ. ಈ ಬಗ್ಗೆ ಕುಶಿ ಇದೆ. ಗೀತಾಗೆ ರಾಜಕೀಯಕ್ಕೆ ಕಳುಹಿಸಿದ್ದು, ತಪ್ಪಾ?
ಪ್ರತಿಯೊಬ್ಬರಿಗೂ ಒಂದೊಂದು ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ. ಆದರೆ, ಕೆಲವರ ಟೀಕೆಗಳಿಂದ ಬೇಸರವಾಗಿದೆ ಎಂದರು.