ಶಿವಮೊಗ್ಗ, ಮೇ.8:
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗೆ ಬಾರಿ ಬಹುಮತ ದೊರೆತಿದ್ದು ಅತಿ ಹೆಚ್ಚು ಅಂತರದ ಗೆಲುವು ಸಾಧ್ಯ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಅವರಿಂದು ಮಧ್ಯಾಹ್ನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಕಾಂಗ್ರೆಸ್ ಪರವಾಗಿ ಭಾರಿ ದೊಡ್ಡ ಪ್ರಮಾಣದ ಮತ ಹರಿದು ಬರಲು ಕಾರಣ ಕರ್ನಾಟಕ ಸರ್ಕಾರ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಗ್ಯಾರಂಟಿಗಳು ಅನುಷ್ಠಾನವಾದ ಹಿನ್ನೆಲೆಯಲ್ಲಿ ಎಂದು ಹೇಳಿದರು.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಚಿವ ಸಂಪುಟ ಕೇವಲ ಐದು ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದಂತಹ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದ ಹಿನ್ನೆಲೆಯಲ್ಲಿ ಈ ಬಾರಿ ನಾವು ರಾಜ್ಯದಲ್ಲಿ ಮತ ಕೇಳಲು ಹೋದಾಗ ಜನ ನಮ್ಮನ್ನು ಅಷ್ಟೇ ಪ್ರೀತಿಯಿಂದ ಗೌರವಿಸಿದ್ದಾರೆ. ಆತ್ಮೀಯವಾಗಿ ಒಪ್ಪಿಕೊಂಡಿದ್ದಾರೆ. ಎಂದರು.
ರಾಜ್ಯದ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚಿನ ಮತ ನೀಡಿರುವುದು ಖಚಿತ. ಅವರ ಮೇಲೆ ನಮಗೆ ದೊಡ್ಡ ನಂಬಿಕೆ ಇದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಶಿವರಾಜಕುಮಾರ್ ಅವರಿಗೆ ಭಾರಿ ದೊಡ್ಡ ಪ್ರಮಾಣದ ಮಹಿಳಾ ಬೆಂಬಲ ದೊರಕಿದ್ದು, ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ ಎಂದರು.
ಚುನಾವಣೆಯನ್ನು ಹಬ್ಬದ ರೀತಿ ಆಚರಿಸಿದ ಮತದಾರರಿಗೆ ಅಭಿನಂದಿಸಿದ ಅವರು ಈ ಬಾರಿ ಕಾಂಗ್ರೆಸ್ ಪಕ್ಷದ ಎಲ್ಲ ಪ್ರಮುಖರನ್ನು ಮನೆ ಮನೆಗೆ ಕಳುಹಿಸಿ ಜನರಿಗೆ ಕಾಂಗ್ರೆಸ್ ಪಕ್ಷದ ಹಾಗೂ ಬಡವರ ಬದುಕಿನ ಸಹಾಯದ ವಿಷಯವನ್ನು ಮನವರಿಕೆ ಮಾಡಿಕೊಟ್ಟು ಬಂದಿದೆ. ಈ ಹಿನ್ನೆಲೆಯಲ್ಲಿ ನಮಗೆ ಅತಿ ಹೆಚ್ಚಿನ ಮತಗಳು ಲಭಿಸುವುದು ಖಚಿತ ಎಂದು ಹೇಳಿದರು.
ಬಿರು ಬಿಸಿಲ ನಡುವೆ ಭಾರಿ ಪ್ರಮಾಣದ ಮತದಾನವಾಗಿದ್ದು ಇದಕ್ಕೆ ಪೂರಕವಾಗಿ ಎಲ್ಲಾ ಮತಗಟ್ಟೆಗಳಲ್ಲಿ ನಮ್ಮ ಪಕ್ಷದ ಪ್ರಮುಖರು ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಗೆಲ್ಲುವ ವಿಶ್ವಾಸ ಖಚಿತವಾಗಿದೆ ಎಂದರು.
ಬರಗಾಲದ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಸುಮ್ಮನೆ ಕುಳಿತಿಲ್ಲ. ಶಿವಮೊಗ್ಗ ಜಿಲ್ಲೆಯ ವಿಷಯದಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ. ಅಂತೆಯೇ ಅಗತ್ಯವಿದ್ದರೆ ಕುಡಿಯುವ ನೀರಿಗಾಗಿ ಹೊಸ ಯೋಜನೆಗಳನ್ನು ತರಲು ಸೂಚಿಸಿದ್ದೇನೆ. ಹಣದ ಕೊರತೆ ಯಾವುದು ಇಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್ ಅವರು ಮಾತನಾಡುತ್ತಾ ಬಿಸಿಲ ದಾಹದ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚಿನ ಮತ ನೀಡಿ ಗೆಲ್ಲಲು ಪೂರಕವಾಗಿರುವ ಎಲ್ಲ ಮತದಾರ ಬಂಧುಗಳಿಗೆ ಅಭಿನಂದಿಸಿದರು.