ಹೆಣ್ಣು ಮಕ್ಕಳ ತಾಳಿ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ, ನಿಮಗೆ ಹಾಗೂ ನಿಮ್ಮ ಪಕ್ಷಕ್ಕೆ ಗೌರವ ಎಂಬುದು ಇದ್ದರೆ ಈ ಕೂಡಲೇ ಜೆಡಿಎಸ್ ಸಂಸದ ಅಭ್ಯರ್ಥಿ ಹಾಗೂ ಸಂಸದ ಪ್ರಜ್ವಲ್ ರೇವಣ್ಣನಿಂದ ನಡೆದಿರುವ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ರಗಳೆಗೆ ಸ್ಪಷ್ಟನೆ ನೀಡಿ ಹೆಣ್ಣುಮಕ್ಕಳನ್ನು ಗೌರವಿಸುವುದನ್ನು ಕಲಿಯಿರಿ ಎಂದು ವಕೀಲರು ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಜಿ. ನರಸಿಂಹಮೂರ್ತಿ (ಬಾಬಣ್ಣ) ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಇಡೀ ರಾಷ್ಟ್ರಾದ್ಯಂತ ಸದ್ದು ಮಾಡಿರುವ ಹಾಸನ ಸಂಸದ ಪ್ರಜ್ವಲ್ ರ ಅಶ್ಲೀಲ ವಿಡಿಯೋ ಹಾಗೂ ಮಹಿಳಾ ದೌರ್ಜನ್ಯ ಪ್ರಕರಣ ಕುರಿತಂತೆ ಒಂದು ಮಾತನಾಡದ ಬಿಜೆಪಿ ಅವರು ಹಿಂದೆ ನೇಹಾ ಪ್ರಕರಣದಲ್ಲಿ ಮಹಿಳಾಧರ್ಮವನ್ನು ಪಾಲಿಸಲು ಆಡಿದ ನಾಟಕವೇ ಎಂದು ಪ್ರಶ್ನಿಸಿದ್ದಾರೆ.
ನಿಮಗೆ ನಿಜಕ್ಕೂ ಮಾನ ಮರ್ವಾದೆ ಎಂಬುದಿದ್ದರೆ, ನಿಮಗೆ ನೈತಿಕತೆ ಇದ್ದರೆ ಇಂತಹ ಘಟನೆ ಬಗ್ಗೆ ನಿಮ್ಮ ನಿಲುವನ್ನು ಕೂಡಲೇ ಸ್ಪಷ್ಟಪಡಿಸಿ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನೆಪಮಾತ್ರದ ಮಾತನಾಡಿ ಇಡೀ ಮಹಿಳಾ ಸಂಕುಲಕ್ಕೆ ಮಾಡಿದ ಅವಮಾನವನ್ನು ಆ ಮಾತೆಯರ ಶಾಪ ನಿಮ್ಮನ್ನು ಸುಮ್ಮನೆ ಬಿಡೋದಿಲ್ಲ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈಗ ಅವರು ಬೇರೆ ನಾವು ಬೇರೆ ಎಂದು ಹೇಳುತ್ತಿದ್ದಾರೆ. ದೇವೇಗೌಡರು ಈ ತಮ್ಮ ಇಳಿಯ ವಯಸ್ಸಿನಲ್ಲಿ ಇದನ್ನು ಅನುಭವಿಸಬೇಕಿತ್ತಾ? ನಾಚಿಕೆ ಆಗಬೇಕು ಮೊಮ್ಮಗನ ಈ ರಗಳೆಗಳು ಗೊತ್ತಿರಲಿಲ್ಲವೇ? ಇಂತಹ ಘಟನೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿದ್ದ ಬಿಜೆಪಿಯವರು ಹಾಗೂ ಜೆಡಿಎಸ್ ಸುಮ್ಮನೆ ಏಕೆ ಇದ್ದರು. ಸೈಕೋ ತರ ನೂರಾರು ಹೆಣ್ಣು ಮಕ್ಕಳ ಬದುಕನ್ನು ಅತಂತ್ರಗೊಳಿಸಿದ ನಾಚಿಕೆ ಮಾನ ಮರ್ಯಾದೆಗೆ ಅಂಜಿಕೊಂಡು ಭಯಭೀತರಾಗಿದ್ದ ಹೆಣ್ಣು ಮಕ್ಕಳ ಬದುಕನ್ನು ನಿರ್ನಾಮ ಮಾಡಿದ ಪ್ರಜ್ವಲ್ ರೇವಣ್ಣ ವಿರುದ್ಧ ಸೂಕ್ತ ಕಾನೂನು ಕ್ರಮವಷ್ಟೆ ಅಲ್ಲ ದೇಶದ ಅತಿದೊಡ್ಡ ಮಹಿಳಾ ದೌರ್ಜನ್ಯ ಪ್ರಕರಣ ಎಂದು ಪರಿಗಣಿಸಿ ಅತ್ಯಂತ ಕಠಿಣವಾದ ಶಿಕ್ಷೆಯನ್ನು ವಿಧಿಸಬೇಕೆಂದು ವಕೀಲರೂ ಆದ ಮಾಜಿ ಪಾಲಿಕೆ ಸದಸ್ಯ ಬಾಬಣ್ಣ ಒತ್ತಾಯಿಸಿದ್ದಾರೆ.
Box
ಈ ಘಟನೆಯಲ್ಲಿ ಮಾಜಿ ಮಂತ್ರಿ ರೇವಣ್ಣನ ಮಗ ಆಗಿದ್ದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಬೀದಿಗಿಳಿದು ಪ್ರತಿಭಟಿಸಲು ಆಗುತ್ತಿಲ್ಲ. ಅದೇ ಮುಸ್ಲಿಂ ಸಮುದಾಯದ ಯಾರಿಂದಲಾದರೂ ಇಂತಹ ಘಟನೆ ನಡೆದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದ ಈ ಮಹಾ ನಾಯಕರು ಆಗ ಸರ್ಕಾರದ ಕಾನೂನು ವ್ಯವಸ್ಥೆ ಸರಿಯಿಲ್ಲ. ಹಾಳಾಗಿದೆ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂದು ಕೂಗಾಡುತ್ತಿದ್ದರು. ಈಗ ಕೂಗಾಡುವುದನ್ನು ಮರೆಮಾಚಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ಬಿಟ್ಟು ಬೀದಿಗಿಳಿದು ಹೋರಾಡುತ್ತಿದ್ದ ಈ ಬಿಜೆಪಿ ಜೆಡಿಎಸ್ ನವರು ಈಗ ಸುಮ್ಮನೆ ಕುಳಿತಿರುವುದನ್ನು ನೋಡಿದರೆ ಇವರು ಅವಕಾಶವಾದಿಗಳು ಅಷ್ಟೇ. ಇಂತಹ ಅವಕಾಶವಾದಿ ಹೋರಾಟವನ್ನು ಬಿಟ್ಟು ಮನುಕುಲದ ಉದ್ದಾರಕ್ಕಾಗಿ, ಮಾತೃ ಹೃದಯವನ್ನು ಗೌರವಿಸುವುದಕ್ಕಾಗಿ ನೈಜವಾದ ಹೋರಾಟವನ್ನು ಮಾಡುವುದನ್ನು ಕಲಿಯಿರಿ
- ನರಸಿಂಹಮೂರ್ತಿ (ಬಾಬಣ್ಣ)
Box