ಶಿವಮೊಗ್ಗ: ಮುಂಬರುವ ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ “ಕಬ್ಬು ಮತ್ತು ರೈತ” ಚಿಹ್ನೆಯಡಿ ಸ್ಪರ್ಧಿಸುತ್ತಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅ ವರಿಗೆ ಕಟ್ಟಡ ಕಾರ್ಮಿಕರ ಸಂಘವು ಸಂಪೂರ್ಣ ಬೆಂಬಲವನ್ನು ಸೂಚಿಸಿದೆ.
ಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಕರ್ನಾಟಕ ಕನ್ನಟ್ರಕ್ಷನ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಆರ್. ವಾಸುದೇವನ್,
ಕಟ್ಟಡ ಕಾರ್ಮಿಕ ಸಂಘಕ್ಕೆ ಈಶ್ವರಪ್ಪ ಅವರಿಂದ ತುಂಬಾ ಸಹಾಯ ಮತ್ತು ಅನುಕೂಲಗಳು ಆಗಿವೆ. ಸಂಘದ ಖಾಲಿ ನಿವೇಶನ ಸಿ.ಎ. ಸೈಟ್ನಿಂದ ಹಿಡಿದು ಕಟ್ಟಡ ನಿರ್ಮಾಣದವರೆಗೆ ಉಪ ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸರ್ಕಾರದ ಅನುದಾನದ ಅಡಿಯಲ್ಲಿ ಬೇಕಾದ ಸಹಾಯ ಹಸ್ತವನ್ನು ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಯಾವುದೇ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಕಟ್ಟಡ ಕಾರ್ಮಿಕರ ಸೌಹಾರ್ದ ಸಹಕಾರಿ ಸಂಘ ಆಗಿರುವುದಿಲ್ಲ. ಆದರೆ ನಮ್ಮ ಸಂಘದಲ್ಲಿ ಕಟ್ಟಡ ಕಾರ್ಮಿಕರ ಸೌಹಾರ್ದ ಸಹಕಾರಿ ಸಂಘದ ಸೊಸೈಟಿ ಮಾಡಿದ್ದೇವೆ. ಅದಕ್ಕೂ ಕಾರಣ ಈಶ್ವರಪ್ಪನವರು ಮತ್ತು ಅವರ ಪುತ್ರ ಕೆ.ಇ. ಕಾಂತೇಶ್ ರವರು ಕೊಟ್ಟಿರುವ ಧೈರ್ಯ ಮತ್ತು ಸಹಾಯ . ಅವರ ಮಾರ್ಗದರ್ಶನದಿಂದ ಬಡ ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗಲೆಂದು ಸೊಸೈಟಿ ನಿರ್ಮಾಣವಾಗಿದೆ ಎಂದರು.
ಆದ್ದರಿಂದ ಎಲ್ಲಾ ಕಟ್ಟಡ ಕಾರ್ಮಿಕರು, ಜನಸಾಮಾನ್ಯರು ಎಲ್ಲರೂ ತಮ್ಮ ಮತವನ್ನು 8ನೇ ನಂಬರ್ ನ “ಕಬ್ಬು ಮತ್ತು ರೈತ” ಚಿಹ್ನೆಗೆ ಮತ ನೀಡಬೇಕಾಗಿ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯೂನಿಯನ್ ಪದಾಧಿಕಾರಿಗಳಾದ ಮೋಹನ್, ಕುಮಾರ್, ಬಸವರಾಜ, ಬಾಲಕೃಷ್ಣ ಮೊದಲಾದವರಿದ್ದರು.