ಶಿವಮೊಗ್ಗ: ಜೈಶ್ರೀರಾಮ್ ಘೋಷಣೆ ಕೂಗಿದ ರಾಮನ ಕಾರ್ಯಕರ್ತರ ತಡೆದು ಹಲ್ಲೆ ಮಾಡಿ ಅಲ್ಲಾವೋ ಅಕ್ಬರ್ ಕೂಗಿಸಿರೋದು ತಲೆ ತಗ್ಗಿಸುವ ವಿಚಾರ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ರಾಮೇಶ್ವರ ಕೆಫೆಗೆ ಬಾಂಬ್ ಹಾಕಿದರು. ದೇಶದ ಸಮಗ್ರತೆಗೆ ಭಂಗ ಆದರೂ ಪರವಾಗಿಲ್ಲ, ನಮ್ಮ ಸ್ಥಾನ ಗಟ್ಟಿಯಾದರೆ ಸಾಕು ಎನ್ನುವಂತಹವರು ಕಾಂಗ್ರೆಸ್ ನವರು ಎಂದು ಟೀಕಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರು ಪಿಎಸೈ ಹಗರಣದ ಕಿಂಗ್ ಪಿನ್ ಆರ್.ಡಿ. ಪಾಟೀಲ್ ನಿವಾಸಕ್ಕೆ ಭೇಟಿ ವಿಚಾರದ ಬಗ್ಗೆ ಮಾತನಾಡಿ, ಆರ್.ಡಿ. ಪಾಟೀಲ್ ಖರ್ಗೆ ಅವರ ಜೊತೆ ಇದ್ದವರು. ಅವರದ್ದು ಮತ ಬೇಕು ಅಂತಾ ನಮ್ಮ ಅಭ್ಯರ್ಥಿ ಅವರ ಮನೆಗೆ ಹೋಗಿದ್ದಾರೆ ಎಂದರು.

ಈಶ್ವರಪ್ಪ ಸ್ಪರ್ಧೆ ವಿಚಾರ ಬಗ್ಗೆ ಮಾತನಾಡಿ, ಈಶ್ವರಪ್ಪ ಅವರ ಸಾಧನೆಗಳನ್ನು ಹೇಳಿಕೊಳ್ಳಲಿ. ಬಿಜೆಪಿ ಟೀಕೆ ಮಾಡಿದರೆ ಓಟು ಬರುತ್ತದೆ ಅಂದರೆ ಅದು ಅವರ ಕನಸು. ನೀವು ಈಗಾಗಲೇ ಪ್ರಚಾರ ಮಾಡಿದ್ದೀರಾ. ನಿಮಗೆ ಬೂತ್ ಏಜೆಂಟ್ ಇಲ್ಲ, ನೀವು ಸೋಲಬಾರದು. ನೀವು ನಮ್ಮ ಜೊತೆ ಇರಬೇಕು. ಈಗಲಾದರೂ ಮನಸು ಮಾಡಿ. ರಾಘವೇಂದ್ರ ಅವರನ್ನು ಸೋಲಿಸಲು ಯಾರಿಂದ ಸಾಧ್ಯವಿಲ್ಲ ಎಂದರು.