ಶಿವಮೊಗ್ಗ: ನೂರಕ್ಕೆ ನೂರರಷ್ಟು ಗೆಲುವು ನಮ್ಮದಾಗಲಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಇಂದು ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ಬಿಜೆಪಿ ಪಕ್ಷ ಹಾಗೂ ಜೆಡಿಎಸ್ ಸಹಕಾರದೊಂದಿಗೆ ಎರಡು ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ಸಲ್ಲಿಸಲು ಸಾಕಷ್ಟು ಜನಸ್ತೋಮ ಬಂದಿದ್ದಾರೆ. ವಿಶೇಷವಾಗಿ ಜೆಡಿಎಸ್ ಸಹಕಾರ ಸಿಕ್ಕಿರೋದು ಸೌಭಾಗ್ಯ ಎಂದರು.

ಯಡಿಯೂರಪ್ಪ, ಕುಮಾರಸ್ವಾಮಿ ಅವರು ಒಂದೇ ವೇದಿಕೆಯಲ್ಲಿ ನೋಡಿ ಜನ ಖುಷಿಯಾಗಿದ್ದಾರೆ. ಜನರು ಸಹ ಕೈ ಬಿಸುತ್ತಿದ್ದಾರೆ ಭಾವನೆಗಳು ಬೆರೆತಿವೆ. ಕಾರ್ಯಕರ್ತರು ತಮ್ಮ ಜೇಬಿನಿಂದ ಹಣ ಖರ್ಚು ಮಾಡಿಕೊಂಡು ಬಂದಿದ್ದಾರೆ. ಎದುರಾಳಿ ಯಾರಿದ್ದಾರೆ ಎಂದು ನೋಡಲ್ಲ ಎಂದರು.

ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ ವಿಚಾರದ ಬಗ್ಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದಾದ ಮೇಲೆ ನೈತಿಕವಾಗಿ ಸಹಕಾರ ಸಿಗುತ್ತಿದೆ. ಹಾಗಾಗಿ ಇಂತಹ ಕೃತ್ಯಗಳು ನಡೆಯುತ್ತಿದೆ. ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ. ಚುನಾವಣೆ ಮೂಲಕವೇ ಎಲ್ಲದಕ್ಕೂ ಉತ್ತರ ಕೋಡುತ್ತೇವೆ. ಅನೇಕ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಮುಳುಗಡೆಯ ಮುನ್ಸೂಚನೆ ಎಂದರು.