ಶಿವಮೊಗ್ಗ, ಏ. 17:
ಶಿವಮೊಗ್ಗ ಸಕ್ರೆಬೈಲು ಆನೆಬಿಡಾರದ ಪ್ರವೇಶ ಶುಲ್ಕ, ತಲಾ ಐವತ್ತು ರೂ ಎಲ್ಲಿಗೋಗುತ್ತೆ, ಏನಾಗುತ್ತೆ?, ಪತ್ರಿಕಾ ಓದುಗರ ಗಂಭೀರ ಪ್ರಶ್ನೆ, ಉತ್ತರ ಹೇಳುವವರೇ ಬೇಗ ಎದ್ದು ಹೇಳಿ
ಶಿವಮೊಗ್ಗ, ಏ.17:
ಶಿವಮೊಗ್ಗ ಸಕ್ರೆ ಬೈಲು ಬಿಡಾರದಲ್ಲಿ, ನಿತ್ಯ ಪ್ರಯಾಣಿಕರಿಂದ ವಸೂಲಿಯಾಗುವ ಪ್ರವೇಶದ ಎಲ್ಲಿಗೆ ಹೋಗುತ್ತದೆ ಅದು ಯಾರ ಪಾಲಾಗುತ್ತದೆ? ಇಂದು ಈ ಅನುಮಾನ ಇಂದು ಪತ್ರಿಕೆಗೆ ಓದುಗರ ಮೂಲದಿಂದ ಬಂದಿದೆ.
ಚಿತ್ರ ಸಹಿತ ಈ ಮಾಹಿತಿ ಲಭ್ಯವಾಗಿದ್ದು, ಅರಣ್ಯ ಇಲಾಖೆ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಿದೆ.
ಶಿವಮೊಗ್ಗ ಸಕ್ರೆ ಬೈಲು ಆನೆ ಬಿಡಾರದ ಒಳಗೆ ಹೋಗಲು ಪ್ರತಿಯೊಬ್ಬರಿಗೆ ಶುಲ್ಕ ಮಾಡುವುದು ಸರಿಯಷ್ಟೆ. ಶಿವಮೊಗ್ಗ ಮೊಲದ ಹಿರಿಯರೊಬ್ಬರು ಇಂದು ಹೋದಾಗ ಮಾಮೂಲಿಯಾಗಿ ಹಣ ಕಟ್ಟಿ, ಬಿಲ್ ಕೇಳಿದ್ದಾರೆ. ಬಿಲ್ ಇಲ್ಲ, ಆದರೆ ನೀವು ಹಣ ಕಟ್ಟಲೇಬೇಕು.
ನಮ್ಮ ಹತ್ತಿರ ಮಾತನಾಡಲು ಟೈಮ್ ಇಲ್ಲ, ಚೀಟಿಯಲ್ಲಿ ಬರೆದುಕೊಳ್ಳುತ್ತೇನೆ. ಯಾರಿಗಾದರೂ ಕಂಪ್ಲೆಂಟ್ ಮಾಡಿ, ಡೊಂಟ್ ಕೇರ್ ಅಷ್ಟೇ. ಇದು ನನ್ನ ಕೆಲಸ ಎಂದು ಹೇಳಿದ್ದಾನೆ.
ಹಾಗಾದರೆ ಈ ಹಣ ಎಲ್ಲಿಗೆ ಹೋಗುತ್ತದೆ ಎಂಬ ಗಂಭೀರ ಪ್ರಶ್ನೆಯೊಂದಿಗೆ ಅದರಲ್ಲೂ ಈ ಹಣ ಏನಾಗುತ್ತದೆ? ದಿನಕ್ಕೆ ಬರುವ ಪ್ರಯಾಣಿಕ ಸಂಖ್ಯೆ ಎಷ್ಟು? ಆ ಹಣ ಸರ್ಕಾರಕ್ಕೆ ಹೋಗುತ್ತದಾ? ಅಥವಾ ಆನೆಗಳಿಗೆ ಸಿಗುತ್ತದೆಯೇ? ಅಥವಾ ಬೇರೆಲ್ಲಿ ಹೋಗುತ್ತದೆ ಎಂಬ ಅನುಮಾನದ ಪ್ರಶ್ನೆಗೆ ಉತ್ತರಿಸಬೇಕಾದವನು ಎದ್ದು ಉತ್ತರಿಸಲಿ.