ಶಿಕಾರಿಪುರ,ಏ.17:
ಭಾರತೀಯ ಜನತಾ ಪಕ್ಷದಿಂದ ಶಿವಮೊಗ್ಗ ಲೋಕಸಬಾ ಕ್ಷೇತ್ರದ ಅಭ್ಯರ್ಥೀಯಾಗಿ ನಾಳೆ ನಾಮಪತ್ರ ಸಲ್ಲಿಸಲಿರುವ ಸಂಸದ ಬಿ.ವೈ.ರಾಘವೇಂದ್ರ ಬುಧವಾರ ಕುಟುಂಬದ ಪದ್ದತಿಯಂತೆ ಶಿಕಾರಿಪುರ ತಾಲ್ಲೂಕು ಮುಗುಳಗೆರೆ ಗ್ರಾಮದಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ದಂಪತಿ ಸಮೇತ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿ ಭಗವಂತನ ಆಶೀರ್ವಾದ ಪಡೆದುಕೊಂಡರು.
ನಂತರ ಶಿಕಾರಿಪುರ ನಗರದ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ರಾಮನವಮಿಯ ವಿಶೇಷ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ವಿಶೇಷ ಪೂಜೆಯನ್ನು ಸಲ್ಲಿಸಿ ಶ್ರೀ ರಾಮನವಮಿಯ ಪ್ರಸಾದವನ್ನು ಸ್ವೀಕರಿಸಿದರು.
ಇಲ್ಲಿಂದ ನಗರದ ರಾಯರ ಮಠಕ್ಕೆ ತೆರಳಿದ ಸಂಸದರು ಹಾಗೂ ಕುಟುಂಬ ವರ್ಗದವರು ಗುರುರಾಯರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ರಾಯರ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಎಸ್.ರುದ್ರೇಗೌಡ ನಿವೇದಿತ ರಾಜು. ಗುರುಮೂರ್ತಿ. ಅಪರ್ಣ ಗುರುಮೂರ್ತಿ. ಸಿದ್ದಲಿಂಗಪ್ಪ ನಿಂಬೆಗೊಂದಿ, ಈರನಗೌಡ, ಗಾಯತ್ರಿ ಮಲ್ಲಪ್ಪ, ಬಸವರಾಜ್, ಹಾಗೂ ಅಭಿಮಾನಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.