ಸಾಗರ(ಶಿವಮೊಗ್ಗ),ಏ,೧೨: ಇಲ್ಲಿನ ಶ್ರೀ ಮಹಾಗಣಪತಿ ಮಹಾಸಂದ್ಯನ ರಥೋತ್ಸವ ಗುರುವಾರ ಬೆಳಿಗ್ಗೆ ೭-೪೫ ರಿಂದ ೮-೦೦ ಗಂಟೆಯ ಶುಭ ಮೂಹೂರ್ತದಲ್ಲಿ ಕಿಕ್ಕಿರಿದ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿತು.
ಭಕ್ತರು ಬಾಳೆ ಹಣ್ಣನ್ನು ರಥದ ತುದಿಗೆ ಎಸೆಯುವ ಮೂಲಕ ಭಕ್ತಿಪರವಶರಾ ದರು.ಹಲವು ಭಕ್ತರು ಗಣ ಪತಿಗೆ ಪ್ರಿಯವಾದ ಪಂಚ ಕಜ್ಜಾಯ ಮೋದಕ ಮೊದ ಲಾದ ನೈವೇದ್ಯಗಳನ್ನು ಮನೆಯಿಂದ ಮಾಡಿಕೊಂಡು ಬಂದು ಭಕ್ತರುಗಳಿಗೆ ವಿತರಿಸಿದರು.
ಜಾತ್ರಾಮಹೋತ್ಸವದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಿದ ತಕ್ಷಣ ಗಣಪತಿ ದೇವಸ್ಥಾನದ ರಥದ ಸುತ್ತಲಿನ ನಾಲ್ಕು ದಿಕ್ಕಿನಲ್ಲಿಯೂ ಹಣ್ಣು ಕಾಯಿ ಒಡೆಯುವ ಮೂಲಕ ಭಕ್ತರ ಕಾಯಿಗಳನ್ನು ಸರಾಗವಾಗಿ ಒಡೆದುಕೊಡಲಾಯಿತು.
ಮುಜರಾಯಿ ದೇವಸ್ಥಾನ ವಾಗಿದ್ದು,ಸಂಪ್ರದಾಯಗಳಂತೆ ಧಾರ್ಮಿಕ ಪದ್ದತಿಗಳನ್ನು ನೆರವೇರಿಸಲಾಗಿದ್ದು,ಅನ್ನಸಂತರ್ಪಣೆಯನ್ನು ನೆರವೇರಿಸಲಾಗುತ್ತಿದೆ.ಮಳಿಗೆಗಳ ಹರಾಜು ಮೂಲಕ ವರ್ತಕರು ಗಳಿಗೆ ನೀಡಲಾಗಿದ್ದು,ಜಾತ್ರೆಯ ಕಳೆಕಟ್ಟುತ್ತಿದೆ.
ಚುನಾವಣೆ ನೀತಿ ಸಂಹಿತೆ ನಡುವೆ ರಥೋತ್ಸವ ಸೇರಿ ದಂತೆ ಜಾತ್ರೆಯ ಸಂಪೂರ್ಣ ಜವಾಬ್ದಾರಿಯನ್ನು ತಾಲ್ಲೂಕು ಅಡಳಿತ ನಗರಸಭೆ ಆಡಳಿತ ಮತ್ತು ಮುಜರಾಯಿ ಇಲಾಖೆ ನಿರ್ವಹಿಸುತ್ತಿದೆ.
ಸಾಗರದ ಉಪವಿಭಾಗಾ ಧಿಕಾರಿಗಳು ಮತ್ತು ನಗರಸಭಾ ಆಡಳಿತಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಾದ ಯತೀಶ್ ಆರ್ ಐಎಎಸ್ ಅವರು ಪ್ರತಿಕ್ರಿಯಿಸಿ ಮಹಾ ಗಣಪತಿ ರಥೋತ್ಸವ ಹಾಗೂ ಜಾತ್ರೆಯ ಧಾರ್ಮಿಕ, ಸಾಂಸ್ಕೃತಿಕ ಸೇರಿದಂತೆ ಪದ್ದತಿಗಳ ಸಹಿತ ಅಚ್ಚುಕಟ್ಟಾಗಿ ನಿರ್ವಹಿಸಲು ವಾರಗಳ ಮೊದಲೆ ಪೂರ್ವಸಿದ್ದತೆ ಮಾಡಿಕೊಂಡಿದ್ದು,ಯಾವುದೇ ಕೊರತೆಯಾಗದಂತೆ ಜಾಗೃತೆವಹಿಸಿದ್ದೇವೆ ಎಂದರು.
ಮಹಾಗಣಪತಿ ಭಕ್ತರಿಗೆ ಹಾಗೂ ನಾಡಿನ ಜನರಿಗೆ ಸುಖ-ಶಾಂತಿ ನೆಮ್ಮದಿಯನ್ನು ನೀಡಲಿ.ಮಳೆ-ಬೆಳೆ ಚೆನ್ನಾಗಿ ಆಗುವ ಮೂಲಕ ಸಮೃದ್ಧಿ ಯನ್ನು ಉಂಟುಮಾಡಲಿ ಎಂಬ ಆಶಯದೊಂದಿಗೆ ಜನರ ಸಂಕಲ್ಪ ಈಡೇರಲಿ ಎಂಬ ಕೋರಿಕೆಯನ್ನು ಆಡಳಿತದವತಿಯಿಂದ ಮಾಡಿದ್ದೇವೆ ಎಂದರು.
ಉಪವಿಭಾಗಾಧಿಕಾರಿ ಯತೀಶ್ ಆರ್ ಮತ್ತು ಯಹಶೀಲ್ದಾರ್ ಕಲೀಂ ಉಲ್ಲಾ ಅವರು ಬಿಳೆ ಪಂಚೆ, ಶಲ್ಯ ತೊಟ್ಟು ಸಾಂಪ್ರದಾಯಿಕ ವಾಗಿ ಬರಿಕಾಲಲ್ಲಿ ಮಹಾ ಗಣಪತಿ ದೇವರ ರಥೋತ್ಸವಕ್ಕೆ ಚಾಲನೆ ನೀಡಿದರು.
ವಿವಿಧ ಸಂಘ-ಸಂಸ್ಥೆಯ ವರಿಂದ ಪಾನಕ ಸೇವೆ ಹಾಗೂ ಕಡಲೆ ಪ್ರಸಾದ, ಕೋಸೊಂಬರಿ ಭಕ್ತರುಗಳಿಗೆ ವಿತರಿಸುವ ಸೇವೆಗಳು ಜರುಗಿದವು.ಅನ್ನಸಂತರ್ಪರ್ಣೆ ಪ್ರತಿ ವರ್ಷದಂತೆ ಈ ವರ್ಷವೂ ಜರುಗುತ್ತಿದೆ.
ಬರಗಾಲ ನಿವಾರಣೆ ಯಾಗಲಿ-ಮಳೆ-ಬೆಳೆ ಸಮೃದ್ದವಾಗಲಿ
ಕ್ಷೇತ್ರ ಶಾಸಕ ಗೋಪಾಲ ಕೃಷ್ಣಬೇಳೂರು ಗುರುವಾರ ಬೆಳಿಗ್ಗೆ ೭-೪೫ ಕ್ಕೆ ಶ್ರಿ ಮಹಾಗಣಪತಿ ದೇವಸ್ಥಾನದ ಆವರಣಕ್ಕೆ ಆಗಮಿಸಿ ಮಹಾ ಗಣಪತಿ ರಥ ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು ಸಾಗರದ ಬಲಮುರಿ ಗಣಪತಿ ಅತ್ಯಂತ ಶಕ್ತಿದಾಯಕ ದೇವರು.ಮಹಾಗಣಪತಿ ರಥೋತ್ಸವದ ನಂತರ ಉತ್ತಮ ಮಳೆ ಬೆಳೆ ಕರುಣಿಸುವ ಮೂಲಕ ಬರಗಾಲ ನಿವಾರಣೆ ಮಾಡಲಿ.ಸಾಗರದ ಹಾಗೂ ರಾಜ್ಯದ ಮತ್ತು ದೇಶದ ಜನಜೀವನ ಸಮೃದ್ದಿ ಯಾಗಲಿ.ಶ್ರಿ ಮಹಾಗಣಪತಿ ಕರುಣೆ ಕೃಪೆ ತೋರಲಿ ಎಂದು ಆಶಿಸಿದರು.
ಕಳೆದ ವರ್ಷ ಮಹಾಗಣಪತಿ ರಥೋತ್ಸವದ ಸಂದರ್ಭದಲ್ಲಿ ವಿಧಾನಸಭೆಗೆ ಸ್ಪರ್ದಿಸಲು ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ದೊರೆತಿತ್ತು.ಗಣೇಶನ ಕೃಪೆ ಜನರ ಆಶಿರ್ವಾದದಿಂದ ಶಾಸಕನಾಗಿ ಮಹಾಗಣಪತಿ ರಥವನ್ನು ಎಳೆಯುವಂತಹ ಅವಕಾಶ ನನಗೆ ದೊರೆತಿದೆ.ಸಮಸ್ತರಿಗೂ ಒಳಿತು ಮಾಡಲಿ ಎಂದು ಕೋರಿದರು.