ಶಿವಮೊಗ್ಗ, ಮಾರ್ಚ್-೨೭ ಲೋಕ ಸಭಾ ಚುನಾವಣೆ ೨೦೨೪ರ ಸಂದರ್ಭದಲ್ಲಿ ಸರ್ಕಾರದಿಂದ ಅದಿಕೃತವಾಗಿ ಪರವಾನಿಗೆ ಪಡೆದ ಮದ್ಯವನ್ನಲ್ಲದೇ ಯಾವ ಕಾರಣಕ್ಕೂ ನಕಲಿ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿಗಳನ್ನು ಉಪಯೋಗಿಸಿ ಪ್ರಾಣಕ್ಕೆ ಅಪಾಯ ತಂದು ಕೊಳ್ಳಬಾರದೆಂದು ಶಿವಮೊಗ್ಗ ಜಿಲ್ಲಾ ಅಬಕಾರಿ ಇಲಾಖೆಯು ತಿಳಿಸಿದೆ.


ಅಪರಿಚಿತರು ನೀಡುವ ಮದ್ಯವನ್ನು ಹಾಗೂ ಅನಧಿಕೃತ ಸ್ಥಳಗಳಲ್ಲಿ ದೊರೆಯುವ ಮದ್ಯ ಉಪಯೋಗಿಸಬಾರದು ಹಾಗೂ ಜಿಲ್ಲೆಯಲ್ಲಿ ಯಾವುದೇ ಅಕ್ರಮವಾಗಿ ಮದ್ಯ ದಾಸ್ತನು / ಸಾಗಣಿಕೆ/ಮಾರಾಟ/ ಹಂಚಿಕೆ ಇಂತಹ ಅಕ್ರಮಗಳು ಕಂಡುಬಂದಲ್ಲಿ ಶಿವಮೊಗ್ಗ ಜಿಲ್ಲೆ ಕಂಟ್ರೋಲ್ ರೂಂ ಸಂಖ್ಯೆ ೧೮೦೦೪೨೫೪೪೮೦ ಕ್ಕೆ ಮಾಹಿತಿ ನೀಡುವಂತೆ ಅಬಕಾರಿ ಇಲಾಖೆಯ ಡೆಪ್ಯೂಟಿ ಕಮೀಷನರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಹೆಚ್ಚಿನ ಮಾಹಿತಿಗಾಗಿ ಅಬಕಾರಿ ಉಪ ಅಧೀಕ್ಷಕರು, ಶಿವಮೊಗ್ಗ ಉಪ ವಿಭಾಗ -ಶಿವಮೊಗ್ಗ ಮತ್ತು ಭದ್ರಾವತಿ – ೯೪೪೯೫೯೭೧೨೯, ಅಬಕಾರಿ ನಿರೀಕ್ಷಕರು, ಶಿವಮೊಗ್ಗ ವಲಯ ನಂ.೧ -೭೬೧೯೩೪೩೮೫೮, ಅಬಕಾರಿ ನಿರೀಕ್ಷಕರು, ಶಿವಮೊಗ್ಗ ವಲಯ ನಂ.೨ -೯೪೪೮೯೭೭೬೫೯, ಅಬಕಾರಿ ನಿರೀಕ್ಷಕರು ಭದ್ರಾವತಿ ವಲಯ – ೯೯೬೪೦೦೫೫೩೬, ಅಬಕಾರಿ ಉಪ ಅಧೀಕ್ಷಕರು,

ಸಾಗರ ಉಪ ವಿಭಾಗ- ಸಾಗರ/ಶಿಕಾರಿಪುರ/ಸೊರಬ-೯೪೪೯೫೯೭೧೨೮, ಅಬಕಾರಿ ನಿರೀಕ್ಷಕರು, ಶಿಕಾರಿಪುರ ವಲಯ- ೯೯೦೧೩೨೦೦೧೨, ಅಬಕಾರಿ ನಿರೀಕ್ಷಕರು, ಸಾಗರ ವಲಯ – ೮೯೭೧೭೨೩೮೪೫, ಅಬಕಾರಿ ನಿರೀಕ್ಷಕರು, ಸೊರಬ ವಲಯ – ೭೭೬೦೦೦೫೧೦೬, ಅಬಕಾರಿ ಉಪ ಅಧೀಕ್ಷಕರು,

ತೀರ್ಥಹಳ್ಳಿ ಉಪ ವಿಭಾಗ- ತೀರ್ಥಹಳ್ಳಿ ಮತ್ತು ಹೊಸನಗರ-೯೬೧೧೩೨೨೩೨೭, ಅಬಕಾರಿ ನಿರೀಕ್ಷಕರು, ತೀರ್ಥಹಳ್ಳಿ ವಲಯ- ೭೬೧೯೩೪೩೮೫೮, ಅಬಕಾರಿ ನಿರೀಕ್ಷಕರು, ಹೊಸನಗರ ವಲಯ- ೬೩೬೨೫೪೯೯೧೩, ಅಬಕಾರಿ ನಿರೀಕ್ಷಕರು, ಅಬಕಾರಿ ಉಪ ಆಯುಕ್ತರ ಕಚೇರಿ, ಶಿವಮೊಗ್ಗ – ೯೪೪೯೫೯೭೧೩೪ ಇವರುಗಳನ್ನು ಸಂಪರ್ಕಿಸುವುದು

By admin

ನಿಮ್ಮದೊಂದು ಉತ್ತರ

error: Content is protected !!