ಶಿವಮೊಗ್ಗ: ವ್ಯಕ್ತಿಯ ಬೆಳವಣಿಗೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಹಾಗೂ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗುತ್ತದೆ. ಮಕ್ಕಳನ್ನು ಸೀಮಿತ ಶಿಕ್ಷಣಕ್ಕೆ ಒಳಪಡಿಸುವ ಶೈಕ್ಷಣಿಕ ಪದ್ಧತಿ ದೂರವಾಗಬೇಕು. ಮಾನವನಲ್ಲಿರುವ ಪರಿಪೂರ್ಣತೆಯನ್ನು ಅಭಿವ್ಯಕ್ತಿ ಪಡಿಸುವುದೇ ನೈಜ ಶಿಕ್ಷಣ. ಇಂತಹ ಶಿಕ್ಷಣ ಎಲ್ಲಾ ವಿದ್ಯಾರ್ಥಿಗಳಿಗೂ ದೊರೆಯಬೇಕೆಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವಿನಯಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ರಾಮಕೃಷ್ಣ ಮಠ ಮತ್ತು ಶ್ರೀ ರಾಮಕೃಷ್ಣ ವಿದ್ಯಾರ್ಥಿ ಮಂದಿರಂ, ಬಿಎನ್‌ಎಂ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಟಿಸಿಹೆಚ್‌ಆರ್ ಆಪ್, ವಿವೇಕ ವಿದ್ಯಾವಾಹಿನಿ ಟ್ರಸ್ಟ್ ಮತ್ತು ಸ್ವಾಮಿ ವಿವೇಕಾನಂದ ಶ್ರೇಷ್ಠ ಭಾರತ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ನಗರದ ಹೊಸಮನೆಯಲ್ಲಿರುವ ಶ್ರೀ ವಿದ್ಯಾಲಯ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಕೆ- ಸಿಇಟಿಗಾಗಿ ವಿದ್ಯಾಮೃತ ತರಬೇತಿ ಕಾರ್ಯಾಗಾರಕ್ಕೆ ೨೩-೦೩-೨೦೨೪ರ ಶನಿವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ ಕೇವಲ ಅಂಕ ಗಳಿಸುವ ಉದ್ದೇಶ ಹೊಂದದೆ ಸಮಾಜದ ಆಗುಹೋಗುಗಳ ಬಗ್ಗೆ ಅರಿವು ಮೂಡಿಸುವಂತಿರಬೇಕು. ವಿದ್ಯಾರ್ಥಿಗಳು ವಿದ್ಯೆ ಕಲಿತು ವಿವೇಕಿಗಳಾಗಿ ಶಿಕ್ಷಣದ ಮೌಲ್ಯ ಹೆಚ್ಚಿಸಬೇಕು. ಮೌಲ್ಯಾಧಾರಿತ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಹಾಗೂ ಎದುರಾಗುವ ಸಂಕಷ್ಟದ ಸಂದರ್ಭಗಳನ್ನು ಸುಲಭವಾಗಿ ಎದುರಿಸಲು ಸಹಾಯಕವಾಗುತ್ತದೆ. ಆದ್ದರಿಂದ ಮಕ್ಕಳು ಮತ್ತು ಯುವ ಜನತೆಗೆ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡಿರುವ ಶಿಕ್ಷಣ ನೀಡಬೇಕೆಂದು ಪ್ರತಿಪಾದಿಸಿದರು.
ಭಾರತ ಜಗತ್ತಿನ ವಿಶಿ? ಸಂಸ್ಕೃತಿ, ಪರಂಪರೆ, ಜ್ಞಾನಕ್ಕೆ ಹೆಸರು ವಾಸಿಯಾಗಿದೆ. ಅದಕ್ಕೆ ತಕ್ಕಂತೆ ಶಿಕ್ಷಣ ಕ್ರಮದಲ್ಲಿ ಬದಲಾವಣೆ ಅಗತ್ಯವಿದೆ. ಭಾರತೀಯತೆಯ ಗುಣವೇ ಇಲ್ಲದ ಶಿಕ್ಷಣವನ್ನು ಒತ್ತಾಯವಾಗಿ ಹೇರುವ ಯತ್ನ ನಡೆಯುತ್ತಿದೆ. ಸರ್ಕಾರ, ಶಿಕ್ಷಣ ತಜ್ಞರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಪೋಷಕರು ನೈಜ ಶಿಕ್ಷಣ ಅಳವಡಿಕೆಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ನಮ್ಮ ಮಕ್ಕಳ ಮನಸ್ಸು ಸಂಕುಚಿತಗೊಳ್ಳುತ್ತದೆ ಎಂದು ಎಚ್ಚರಿಸಿದರು.
ಸ್ವಾಮಿ ವಿವೇಕಾನಂದರೆಂಬ ವಿಶ್ವ ಮಾನವ ಪ್ರತಿಪಾದಿಸಿದ ವಿಚಾರಗಳು ತಮ್ಮ ವೈಶ್ಯಾಲತೆ ಹಾಗೂ ಲೋಕೋಪಯೋಗಿತ್ವದ ಗುಣ ವಿಶೇಷಗಳಿಗೆ ಹೆಸರುವಾಸಿಯಾಗಿವೆ. ಅವರು ಕೇವಲ ತಮ್ಮ ಬಹುಮುಖ ವ್ಯಕ್ತಿತ್ವಕ್ಕಷ್ಟೇ ಖ್ಯಾತರಾಗದೆ ಬಹುದೊಡ್ಡ ದೂರದರ್ಶಿತ್ವಕ್ಕೂ ಪ್ರಖ್ಯಾತರಾಗಿದ್ದರು. ವಿದ್ಯಾರ್ಥಿಗಳು ಇವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇವು ಜೀವನೋದ್ಧಾರಕ್ಕೆ ಸೋಪಾನವಾಗಿವೆ ಎಂದು ಕಿವಿ ಮಾತು ಹೇಳಿದರು.
ಶ್ರೀ ವಿದ್ಯಾಲಯ ಪಿಯು ಕಾಲೇಜಿನ ಪ್ರಾಂಶುಪಾಲರು, ಯುವಾ ಬ್ರಿಗೇಡ್‌ನ ರಾಜ್ಯ ಸಂಚಾಲಕರಾದ ಹ?, ಟಿಸಿಎಚ್‌ಆರ್ ಸಂಸ್ಥೆಯ ಸುಬ್ರಹ್ಮಣ್ಯ, ಸಂಚಾಲಕ ರಾಕೇಶ್ ಉಪಸ್ಥಿತರಿದ್ದರು.