ಸಾಗರ(ಶಿವಮೊಗ್ಗ),ಮಾ.೦೯:ಸಾಗರದ ನೂತನ ಮಿನಿ ವಿಧಾನಸೌಧ ಉದ್ಘಾಟನೆಯನ್ನು ಮಾ.೧೩ ರಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರು ಲೋಕಾರ್ಪಣೆಗೊಳಿಸುವರು ಎಂದು ಸಾಗರದ ಶಾಸಕ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕರಷ್ಣಬೇಳೂರು ಹೇಳಿದರು.

ಅವರು ಭಾನುವಾರ ಬೆಳಿಗ್ಗೆ ಉದ್ಘಾಟನೆಗೆ ಸಿದ್ದಗೊಂಡಿರುವ ಮಿನಿ ವಿಧಾನಸೌಧ ನೂತನ ಕಟ್ಟಡ ವೀಕ್ಷಿಸಿದ ನಂತರ ಮಾದ್ಯಮದವರೊಂದಿಗೆ ಮಾಹಿತಿ ನೀಡಿ ಕಾಗೋಡುತಿಮ್ಮಪ್ಪನವರು ೨೦೧೮ ರಲ್ಲಿ ಮಿನಿವಿಧಾನಸೌಧ ನಿರ್ಮಿಸಲು ಆಡಳಿತಾತ್ಮಕ ಮಂಜೂರಿ ಮಾಡಿಸಿದ್ದರು.ನಂತರ ಶಾಸಕರಾದ ಹಾಲಪ್ಪನವರು ೫ ವರ್ಷಗಳವರೆಗೂ ಕಾಲಹರಣ ಮಾಡುವ ಮೂಲಕ ಪ್ರಮುಖ ತಾಲ್ಲೂಕು ಆಡಳಿತದ ಕಚೇರಿ ಶಿಥಿಲಗೊಂಡಿರುವ ಕಾಲೇಜು ಕಟ್ಟಡದಲ್ಲಿಯೇ ನಡೆಯುವಂತಹ ದುಸ್ಥಿತಿಯಲ್ಲಿದೆ ಎಂದರು.


೯೬೫.೦೦ ಲಕ್ಷಗಳ ಅಂದಾಜುಮೊತ್ತದಲ್ಲಿ ಟೆಂಡರ್ ನಡೆದು ಮೇ:ಸುಪ್ರದಾ ಕನ್‌ಸ್ಟ್ರಕ್ಷನ್ ಪ್ರೈ.ಲಿ ಶ್ರೀನಾರಾಯಣ ಶೆಟ್ಟಿ ದಾರವಾಡ ಇವರು ಗುತ್ತಿಗೆದಾರರಾಗಿದ್ದು,೨೦೨೦ ಕ್ಕೆ ಕಾಮಗಾರಿ ಮುಕ್ತಾಯವಾಗಬೇಕಿತ್ತು.೨೦೨೩ ಕ್ಕೆ ಕಾಮಗಾರಿ ಮುಕ್ತಾಯವಾಗಿದ್ದು,ಹೆಚ್ಚುವರಿಯಾಗಿ ಮಹಡಿ ನಿರ್ಮಾಣಗಳು ಪೂರ್ಣಗೊಂಡಿದ್ದು,ನೆಲಮಹಡಿ ೯೭೦ ಚದರ ಮೀಟರ್ ನಂತೆ ಮೊದಲ ಮಹಡಿ ಹಾಗೂ ೨ನೇ ಮಹಡಿಗಳು ತಲಾ ೯೭೦ ಚದರ ಮೀಟರ್ ವಿಸ್ತೀಣ್ವಿದ್ದು,ಒಟ್ಟು ೨೯೧೦.೦ ಚದರ ಮೀಟರ್ ವಿಸ್ತೀರ್ಣದ ಅಳತೆಯಲ್ಲಿ ಮಿನಿವಿಧಾನಸೌಧ ಲೋಕಾರ್ಪಣೆಗೊಳಿಸುತ್ತಿದ್ದೇವೆ ಎಂದರು.


ಮಿನಿವಿಧಾನಸೌಧದ ನೆಲಮಹಡಿಯಲ್ಲಿ ಶಾಸಕರ ಕಚೇರಿ ಮತ್ತು ತಾಹಶೀಲ್ದಾರ್ ಗ್ರಢ್-೨ ಕಚೇರಿ ಹಾಗೂ ಪಡಸಾಲೆ ಕೊಠಡಿ,ಚುನಾವಣಾ ದಾಖಲೆಗಳ ಕೊಠಡಿ,ಖಜಾನೆ ಕಚೇರಿ,ಸಿಬ್ಬಂಧಿ ಕೊಠಡಿ ಹಾಗೂ ಸ್ಟ್ರಾಂಗ್ ರೂಮ್ ಹಾಗೂ ನಿರೀಕ್ಷಣಾ ಕೊಠಡಿ ಮತ್ತು ಶೌಚಾಲಯಗಳಿರುತ್ತವೆ.
ಮೊದಲ ಮಹಡಿಯಲ್ಲಿ ತಹಶೀಲ್ದಾರ್ ಕಚೇರಿ,ತಹಶೀಲ್ದಾರ್‌ರವರ ನ್ಯಾಯಾಲಯ,ತಹಶಿಲ್ದಾರ್ ಸಿಬ್ಬಂಧಿ ಕೊಠಡಿ,ಶಿರಸ್ತೇದಾರ್ ಕಚೇರಿ,ಚುನಾವಣಾ ಶಾಖೆ,ಹಕ್ಕು ದಾಖಲೆಗಳ ದಾಸ್ತಾನು ಶಾಖೆ,ಹಾಗೂ ನಿರೀಕ್ಷಣಾ ಕೊಠಡಿ ಮತ್ತು ಶೌಚಾಲಯಗಳಿರುತ್ತವೆ.
೨ನೇ ಮಹಡಿಯಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿ,ಸಿಬ್ಬಂಧಿ ಕೊಠಡಿ,ಮೀಟಿಂಗ್ ಹಾಲ್,ಬಗರ್‌ಹುಕುಂ ಶಾಖೆ,ಆಹಾರ ನಿರೀಕ್ಷಕರ ಕಛೇರಿ,ಏSWಂಓ ಕಛೇರಿ ಹಾಗೂ ನಿರೀಕ್ಷಣಾ ಕೊಠಡಿ ಮತ್ತು ಶೌಚಾಲಯಗಳಿರುತ್ತವೆ.


ಮಿನಿ ವಿಧಾನಸೌದದ ಮುಂದಿನ ಹಂತದಲ್ಲಿ ೩ನೇ ಮಹಡಿ ಮತ್ತು ೪ನೇ ಮಹಡಿ ಕಾಮಗಾರಿಗೂ ಅನುದಾನ ಮಂಜೂರಾತಿಯಾಗಿದ್ದು,೫ಕೋಟಿ ಬರಬೇಕಿದೆ ಎಂದರು.
ಮಾ.೧೩ ರಂದು ೪ ಗಂಟೆಗೆ ನಾಡಮಂಚಾಲೆಯಲ್ಲಿ ೬೯ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ೨೨೦ ಕೆ.ವಿ ಸಾಮರ್ಥ್ಯದ ವಿದ್ಯುತ್ ಗ್ರಿಡ್ ಉದ್ಘಾಟಿಸಲಾಗುತ್ತದೆ.ಗ್ರಾಮಾಂತರದಲ್ಲಿ ಲೋವೋಲ್ಟೇಜ್ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂದರು.
ಗೆಣಸಿನಕುಣಿಯಲ್ಲಿ ವಾಜಪೇಯಿ ಮಾದರಿ ವಸತಿ ಶಾಲೆ ಸಂಕೀರ್ಣ ೩೮೦೦ ಲಕ್ಷಗಳ ಮೊತ್ತದ ಕಟ್ಟಡ ಉದ್ಘಾಟಿಸಲಾಗುವುದು ಎಂದರು.
ಆನಂದಪುರಂ ಪೊಲೀಸ್ ಠಾಣೆ ೧ಕೋಟಿ ೭೦ ಲಕ್ಷ ವೆಚ್ಚದ ನೂತನ ಕಟ್ಟಡ ಲೋಕಾರ್ಪಣೆ ಮಾಡಲಾಗುತ್ತಿದ್ದು,ಕಾರ್ಗಲ್ ಪೊಲೀಸ್ ಠಾಣೆ ೧ಕೋಟಿ ೯೦ ಲಕ್ಷ ಮೊತ್ತದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದರು.


ಅಭಿವೃದ್ಧಿಯ ಮಹಾಪೂರವೇ ಆರಂಭವಾಗಿದೆ.ಕಾಂಗ್ರೆಸ್ ಸರ್ಕಾರದಲ್ಲಿ ಖಜಾನೆ ಕಾಲಿಯಾಗಿದೆ ಎಂದು ಬೊಬ್ಬೆ ಹೊಡಿಯುವವರಿಗೆ ಕಾಮಗಾರಿಗಳಿಂದ ಉತ್ತರ ನೀಡುತ್ತಿದ್ದೇವೆ.ಹಾಲಪ್ಪ ಹೇಳುತ್ತಿದ್ದರು.ಬೇಳೂರು ವಿಧಾನಸೌಧ ಮೆಟ್ಟಿಲು ಹತ್ತದಂತೆ ನೋಡಿಕೊಳ್ಳುತ್ತೇನೆ ಎಂದಿದ್ದರು.ಅವರಿಗೆ ವಿಧಾನಸೌಧ ಪ್ರವೇಶಿಸದಂತೆ ಜನ ಪಾಠ ಕಲಿಸಿದ್ದಾರೆ.ಅಬಿವೃದ್ಧಿಯಲ್ಲಿ ತಾನೆ ಮುಂದು ಎಂದುಕೊಂಡು ತಿರುಗುತ್ತಿದ್ದರು.ಈಗ ನೋಡಿ ಅಭಿವೃದ್ಧಿಗೆ ಹಣ ಹೇಗೆ ತರುತ್ತಿದ್ದೇನೆ.ನನಗೆ ಸಚಿವರೆಲ್ಲರೂ ಸ್ನೇಹಿತರೇ ಆಗಿರುವುದರಿಂದ ಸಾಗರ ಕ್ಷೇತ್ರಕ್ಕೆ ಅನುದಾನದ ಕೊರತೆಯಾಗುವುದಿಲ್ಲ ಎಂದರು.
ಸಾಗರ ಪಟ್ಟಣಕ್ಕೆ ನಗರೋತ್ತಾನ ಕಾಮಗಾರಿಗೆ ವಾರ್ಡುಗಳಿಗೆ ೧ಕೋಟಿ ೨೦ ಲಕ್ಷ ಹಾಗೂ ೧ಕೋಟಿ ೬೦ ಲಕ್ಷ ಮತ್ತು ೧ಕೋಟಿ ೮೦ ಲಕ್ಷ ಅನುದಾನ ನೀಡಿದ್ದೇನೆ.ಮುಖ್ಯಮಂತ್ರಿಗಳು ೨೫ ಕೋಟಿ ವಿಶೇಷ ಅನುದಾನ ನೀಡಿದ್ದಾರೆ.ಸಾಗರದ ಮೀನು ಮಾರುಕಟ್ಟೆ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು.ಮುಸ್ಲೀಂರು ಮೀನು ಮಾರುತ್ತಾರೆ ಎಂದು ಹಿಂದಿನ ಶಾಸಕ ಹಾಲಪ್ಪನವರು ಕಾಮಗಾರಿ ನೆನೆಗುದಿಗೆ ಬೀಳುವಂತೆ ಮಾಡಿದ್ದರು.ನಾನು ೧ಕೋಟಿ ೨೦ ಲಕ್ಷ ಅನುದಾನ ಕೊಡಿಸುವ ಮೂಲಕ ಮೀನು ಮಾರುವವರು ಮುಸ್ಲೀಂರು,ಮೀನು ತಿನ್ನುವವರು ಹಲವು ವರ್ಗದವರು ಎಂಬ ಕಾರಣ ಮೀನುಗಾರಿಕಾ ಮಂತ್ರಿಯನ್ನೇ ವೀಕ್ಷಣೆಗೆ ಕರೆಯಿಸಿ ಅನುದಾನ ಕೊಡಿಸಿದ್ದೇನೆ ಎಂದರು.


ತಾಲ್ಲೂಕಿನ ಕೆರೆಗಳ ಅಬಿವೃದ್ದಿಗೆ ೧೬.೫೦ ಕೋಟಿ ಅನುದಾನ ತಂದಿದ್ದೇನೆ.ಜೆಜೆಎಂ ನಲ್ಲಿ ೨೧೫ ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ.ಈ ವರ್ಷ ಕುಡಿಯುವ ನೀರು ಸರಬರಾಜಿಗೆ ಟ್ಯಾಂಕರ್ ನೀರು ಪೂರೈಕೆಗೆ ಅಗತ್ಯ ಹಣ ಕಾಯ್ದಿರಿಸಲಾಗಿದ್ದು,ಟಾಸ್ಕ್‌ಪೋರ್ಸ್‌ನಲ್ಲಿ ತುರ್ತು ನೀರು ಸರಬರಾಜಿಗೆ ಕ್ರಮವಹಿಸಲಾಗುವುದು ಎಂದರು.
ಸಿಗಂದೂರು ಲಾಂಚ್ ನಿಲ್ಲಬಾರದು ಎಂದು ತುರ್ತು ೭೦ ಲಕ್ಷ ಅನುದಾನ ಮಂಜೂರಾತಿ ಮಾಡಿಸಿ ರ‍್ಯಾಂಪ್ ನಿರ್ಮಿಸಲಾಗುತ್ತಿದೆ.ಸಾಗರದ ರಂಗಮಂದಿರ ನಿರ್ಮಾನ ಕಾಮಗಾರಿಯೂ ನಡೆಯುತ್ತದೆ.ಗ್ಯಾರಂಟಿಗಳ ನಡುವೆಯೂ ಸಮಗ್ರ ಅಬಿವೃದ್ಧಿ ಕಾಮಗಾರಿ ನಡೆಯುತ್ತಿವೆ ಎಂದರು.

By admin

ನಿಮ್ಮದೊಂದು ಉತ್ತರ

You missed

error: Content is protected !!