ಶಿವಮೊಗ್ಗ: ಸೂಡಾದಿಂದ ೧೦ ಸಾವಿರ ನಿವೇಶನಗಳನ್ನು ಹಂಚುವುದಾಗಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ. ಆದರೆ, ಇದಕ್ಕೆ ಜಮೀನು ಎಲ್ಲಿದೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಪ್ರಧಾನ ಕಾಯದರ್ಶಿ ನಜೀರ್ ಅಹಮ್ಮದ್ ಪ್ರಶ್ನಿಸಿದ್ದಾರೆ.


ಅವರು ಇಂದು ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೦ ಸಾವಿರ ನಿವೇಶನ ಹಂಚಲು ೨೦೦ ಎಕರೆ ಜಮೀನು ಬೇಕಾಗುತ್ತದೆ. ಅಷ್ಟು ಭೂಮಿ ಶಿವಮೊಗ್ಗದಲ್ಲಿ ಎಲ್ಲಿದೆ? ಈಗ ಎಷ್ಟು ಎಕರೆ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಇದನ್ನು ಮೊದಲು ಬಹಿರಂಗಪಡಿಸಲಿ. ಆಮೇಲೆ ಆಶ್ವಾಸನೆ ನೀಡಲಿ ಎಂದರು.


ನಗರದ ಮಧ್ಯ ಭಾಗ ಮತ್ತು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ರೆವಿನ್ಯೂ ಬಡಾವಣೆಗಳನ್ನು ಕೆಲವು ಡೆವಲಪರ್ ಗಳು ನಿರ್ಮಿಸುತ್ತಿದ್ದಾರೆ. ಇದೊಂದು ದೊಡ್ಡ ಭೂ ಮಾಫಿಯಾ ಆಗಿದೆ. ಸರ್ಕಾರಿ ಜಾಗವನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಕಾನೂನುಗಳನ್ನೇ ಉಲ್ಲಂಘನೆ ಮಾಡುತ್ತಿದ್ದಾರೆ. ಹಗಲು ದರೋಡೆ ನಡೆಯುತ್ತಿದೆ. ಪ್ರಾಧಿಕಾರದ ನೂತನ ಅಧ್ಯಕ್ಷರು ಇದನ್ನು ತಡೆಯಬೇಕು ಎಂದರು.


ನಿವೇಶನಕ್ಕಾಗಿ ೨೦ ವರ್ಷಗಳಿಗೂ ಹಿಂದೆ ಅರ್ಜಿ ಸಲ್ಲಿಸಿದವರು ಕಾಯುತ್ತಿದ್ದಾರೆ. ಮೊದಲು ಅವರಿಗೆ ಪ್ರಾಶಸ್ತ್ಯ ನೀಡಬೇಕು. ಕಾನೂನು ಉಲ್ಲಂಘನೆ ಮಾಡಿ ಬಡಾವಣೆ ನಿರ್ಮಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಹರೀಶ್, ಲಿಂಗರಾಜ್, ಸಗೀರ್ ಅಹಮ್ಮದ್, ಕಲೀಂ, ಏಜಾಜ್ ಪಾಶ, ಯಾಸೂಫ್ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!