ಶಿವಮೊಗ್ಗ,ಮಾ.೪: ಸರ್ಕಾರ ನಡೆಯುತ್ತಿರುವುದೇ ಸರ್ಕಾರಿ ನೌಕರರಿಂದ ಅವರ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಪಡುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ಹೇಳಿದರು.


ಅವರು ಇಂದು ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಬಲೂನ್ ಗಳನ್ನು ಗಾಳಿಯಲ್ಲಿ ಬಿಡುವುದರ ಮೂಲಕ, ಗುಂಡು ಎಸೆಯುವುದರ ಮೂಲಕ ಮತ್ತು ದೀಪ ಬೆಳಗಿಸುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.


ನನ್ನ ವ್ಯಾಪ್ತಿಗೆ ಬರುವಂತ ಶಿಕ್ಷಣ ಕ್ಷೇತ್ರ ಬಹಳ ದೊಡ್ಡದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಇದ್ದಾರೆ, ನಾನು ಸಚಿವ ಸ್ಥಾನಕ್ಕೆ ಸ್ವೀಕರಿಸಿದ ನಂತರ ೩೨ ಸಾವಿರ ಸರ್ಕಾರಿ ಶಿಕ್ಷಕರನ್ನು ವರ್ಗಾವಣೆ ಮಾಡಿಸಿದ್ದೆನೆ ಹಾಗೂ ೪೩ ಸಾವಿರ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೂಂಡಿದ್ದೆನೆ. ಹೊಸದಾಗಿ ೧೨ ಸಾವಿರ ಶಿಕ್ಷಕರ ನೇಮಕ ಮಾಡಿಕೊಂಡು ಅದರಲ್ಲಿ ೧೧ ಸಾವಿರ ಶಿಕ್ಷಕರು ಪಾಠ ಮಾಡುತ್ತಿದ್ದಾರೆ ಎಂದರು.


ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಈಗಾಗಲೇ ಸರ್ಕಾರ ಆಯೋಗ ರಚಿಸಿದೆ. ಆ ವರದಿ ಬಂದ ನಂತರ ನಾನು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಆಶ್ವಾಸನೆ ನೀಡಿದರು. ನನ್ನ ಕ್ಷೇತ್ರಕ್ಕೆ ಕಳೆದ ಬಜೆಟ್‌ನಲ್ಲಿ ೩೭,೫೦೦ ಕೋಟಿ ನೀಡಿದ್ದರು ಆದರೆ ಈ ಬಾರಿ ೪೪,೪೧೨ ಕೋಟಿ ನೀಡಿದ್ದಾರೆ ಎಂದರು.


ಸರ್ಕಾರಿ ನೌಕರರ ಹಳೆ ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಣಾಳಿಕೆಯಲ್ಲಿ ನಾವು ಭರವಸೆ ನೀಡಿದ್ದೆವು. ಪ್ರಣಾಳಿಕೆ ಉಪಾಧ್ಯಕ್ಷನಾಗಿ ನಾನು ಇದ್ದೆ. ಹಾಗಾಗಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಬರಲು ಈಗಾಗಲೇ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದೇನೆ. ಖಂಡಿತ ಈ ಸಮಸ್ಯೆ ಬಗೆಹರಿಸಲಾಗುವುದು. ಮತ್ತು ಕಾಲಕ್ಕೆ ತಕ್ಕಂತೆ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದರು.


ಪ್ರಾಸ್ತವಿಕವಾಗಿ ಮಾತನಾಡಿದ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು, ರಾಜ್ಯದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೊಟ ಸತತವಾಗಿ ೫ನೇ ವರ್ಷ ನಡೆಸಿರುವುದು ಹೆಮ್ಮೆ ವಿಚಾರ. ರಾಜ್ಯದಲ್ಲಿ ೨ಲಕ್ಷ ಸರ್ಕಾರಿ ನೌಕರರ ಹುದ್ದೆ ಖಾಲಿಯಿದ್ದು, ೫ಲಕ್ಷ ಸರ್ಕಾರಿ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಅಕ್ಕ ಪಕ್ಕದ ರಾಜ್ಯಕ್ಕೆ ಹೋಲಿಸಿದರೆ ರಾಜ್ಯದ ಸರ್ಕಾರಿ ನೌಕರರ ವೇತನ ಕಡಿಮೆಯಿದೆ, ಅವರಿಗೆ ಆರೋಗ್ಯದ ಸರಿಯಾದ ವ್ಯವಸ್ಥೆಯಿಲ್ಲ ಹಾಗೂ ಒತ್ತಡದ ಜೀವನ ನೆಡೆಸುವಂತಾಗಿದೆ ಎಂದರು.


ಜಿಲ್ಲೆಯಲ್ಲಿ ಸರ್ಕಾರಿ ನೌಕರರಿಗೆ ಮತ್ತು ಸಾರ್ವಜನಿಕರಿಗೆ ಸರಿಯಾದ ಕ್ರೀಡಾಂಗಣ ವ್ಯವಸ್ಥೆಯಿಲ್ಲ,ನೀತಿ ಸಂಹಿತೆ ಒಳಗೆ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಿ ಹಾಗೂ ೭೦ ಸಾವಿರ ಶಿಕ್ಷಕರಿಗೆ ಮುಂಬಡ್ತಿ ದೊರಕಿಲ್ಲ ಎಂದ ಹಲವು ಸಮಸ್ಯೆಗಳನ್ನು ಸಚಿವರ ಮುಂದೆ ಬಗೆಹರಿಸಬೇಕಾಗಿ ಹೇಳಿಕೊಂಡರು. ಎಲ್ಲಾ ನೌಕರರು ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಹೇಳಿದರು.


ಶಾಸಕ ಎಸ್.ಎನ್.ಚನ್ನಬಸಪ್ಪ , ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಮೊಹನ್ ಕುಮಾರ್, ನಗರಾಭಿವೃದ್ಧಿಯ ಪ್ರಾಧಿಕಾರದ ಅಧ್ಯಕ್ಷ ಸುಂದರೇಶ್, ಗೌರವ ಅಧ್ಯಕ್ಷ ಕೃಷ್ಣಮೂರ್ತಿ ಪ್ರಮುಖರಾದ ವೈ.ಎಚ್.ನಾಗರಾಜ್, ಎಸ್.ಆರ್.ನರಸಿಂಹಮೂರ್ತಿ, ಪಾಪಣ್ಣ, ಅರುಣ್‌ಕುಮಾರ್, ಪ್ರಸನ್ನ, ಸಿದ್ದಬಸಪ್ಪ, ಪರಮೇಶ್ವರಪ್ಪ, ಸತೀಶ್, ಮಧುಕೇಶವ, ಬಸವಣ್ಣಪ್ಪ ಸೇರಿದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರುಗಳು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!