ಶಿವಮೊಗ್ಗ,ಮಾ.೪: ಹರಕೆರೆಯಲ್ಲಿರುವ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ವಿಶ್ವಶ್ರವಣ ದಿನಾಚರಣೆಯ ಅಂಗವಾಗಿ ಇಂದಿನಿಂದ ಮಾ.೩೦ರವರೆಗೆ ಕಿವಿಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ.


೨೦೨೪ರ ವಿಶ್ವ ಶ್ರವಣ ದಿನದ ಧ್ಯೇಯ ವಾಕ್ಯವು ಬದಲಾಗುತ್ತಿರುವ ಮನಸ್ಥಿತಿಗಳಿಗೆ ಕಿವಿ ಮತ್ತು ಕೇಳುವಿಕೆಯ ಆರೈಕೆಯ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸುವುದೇ ಇದರ ಉದ್ದೇಶವಾಗಿದೆ ಎಂದು ಆಸ್ಪತ್ರೆಯ ಕಿವಿ ಮೂಗು ಮತ್ತು ಗಂಟಲು ವಿಭಾಗದ ತಜ್ಞವೈದ್ಯ ಡಾ. ಸ್ಮಿತಾ ಟಿ.ಎಂ. ರವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ವಿಶ್ವಾದಾದ್ಯಂತ ಶೇ.೮೦ರಷ್ಟು ಕಿವಿ ತೊಂದರೆ ಇರುವವರು ಚಿಕಿತ್ಸೆ ಪಡೆಯುತ್ತಿಲ್ಲ. ಕಾರಣ ಹಿಂಜರಿಕೆ ಮತ್ತು ತಜ್ಞ ವೈದ್ಯರ ಕೊರತೆ. ೧.೫ ಮಿಲಿಯನ್ ಜನರು ಶ್ರವಣ ದೋಷ ಹೊಂದಿದ್ದಾರೆ. ೪೩೦ ಮಿಲಿಯನ್ ಜನರು ಸಂಪೂರ್ಣ ಶ್ರವಣ ದೋಷದ ತೊಂದರೆಯಿಂದ ಬಳಲುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಅತಿಯಾದ ಶಬ್ದ ಮಾಲಿನ್ಯದಿಂದ ಶ್ರವಣದೋಷಣ ತೊಂದರೆಗಳು ಹೆಚ್ಚಾಗುತ್ತಿದೆ ಎಂದರು.


ಶೇ.೬೦ರಷ್ಟು ಮಕ್ಕಳಲ್ಲಿ ಉಂಟಾಗುವ ಕಿವಿ ಕೇಳಸದೇ ಇರುವ ತೊಂದರೆಗಳನ್ನು ಚಿಕಿತ್ಸೆಯ ಮೂಲಕ ಸರಿಪಡಿಸಬಹುದಾಗಿದೆ. ಶ್ರವಣದೋಷಕ್ಕೆ ಸೂಕ್ತವಾದ ಚಿಕಿತ್ಸೆ ಪಡೆಯದೇ ಇದ್ದರೆ ಮಕ್ಕಳು ಮಾತನಾಡಲು ಅಸಮರ್ಥರಾಗುತ್ತಾರೆ.

ವಿದ್ಯಾರ್ಥಿಗಳಿಗೆ ಕಿವಿ ಕೇಳಿಸದೇ ಸೂಕ್ಷ್ಮವಾಗಿ ವಿದ್ಯಾಭ್ಯಾಸ ಮಾಡಲು ತೊಂದರೆಯಾಗುವುದು. ಮತ್ತು ವಯಸ್ಸಾದಂತೆ ಶ್ರವಣ ದೋಷಣ ಪ್ರಮಾಣ ಹೆಚ್ಚಾಗುತ್ತ ಇರುತ್ತದೆ ಎಂದರು.


ಆಸ್ಪತ್ರೆಯಲ್ಲಿ ಆಧುನಿಕ ಯಂತ್ರೋಪಕರಣಗಳೊಂದಿಗೆ ನುರಿತ ಅನುಭವಿ ತಜ್ಞರ ತಂಡದೊಂದಿಗೆ ಅತಿಸೂಕ್ಷ್ಮ ೭೦೦ಕ್ಕೂ ಅಧಿಕ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿದೆ. ಆಸ್ಪತ್ರೆಯಲ್ಲಿ ಮೈಕ್ರೋ ಹಿಯರ್ ಸರ್ಜರಿ, ಹಿಯರಿಂಗ್ ಇವ್ಯಾಲುವೇಶನ್, ಸ್ಪೀಚ್ ಥೆರಪಿ, ಗ್ರೊಮೆಟ್ ಅಳವಡಿಕೆ, ಹಿಯರಿಂಗ್ ಏಡ್ ಫೆಸಿಲಿಟಿ ಮತ್ತು ಇವ್ಯಾಲುವೇಷನ್ ಆಫ್ ವರ್ಟಿಗೊ ಅಂಡ್ ಟ್ರಿಟ್‌ಮೆಂಟ್ ಮುಂತಾದ ಸೇವೆಗಳು ಲಭ್ಯವಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಚಕ್ರವರ್ತಿ ಸಂಡೂರು, ಸಾರಂಗ್, ವರ್ಗೀಶ್ ಪಿ. ಜಾನ್, ಡಾ.ಶೈಲೇಶ್ ಎಸ್.ಎನ್. ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!