ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂದರೆ ರಾಜ್ಯದೆಲ್ಲೆಡೆ ಬಹುದೊಡ್ಡ ಗೌರವವಿದೆ. ಸವಾಲಿನ ನಡುವೆ ಅತ್ಯುತ್ತಮ ಆಡಳಿತ ನೀಡಿದ ಯಡಿಯೂರಪ್ಪ ಕಳೆದ ಬಾರಿ ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿ ಶಿವಮೊಗ್ಗ ಜಿಲ್ಲೆಯಷ್ಟೆ ಅಲ್ಲ ರಾಜ್ಯದೆಲ್ಲೆಡೆ ಜನಪರ ಆಡಳಿತ ನಡೆಸಿದಂತಹವರು ಈಗ ಸವಾಲು ಹಾಗೂ ಒತ್ತಡಗಳಿಗೆ ಮಣಿದಿದ್ದಾರಾ ಎಂಬ ಪ್ರಶ್ನೆ ಅಧಿಕಾರಿ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಈ ಹಿಂದೆ ಅವರು ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಆಗಿದ್ದ ಅವಧಿ ಶಿವಮೊಗ್ಗ ಜಿಲ್ಲೆಯ ಪಾಲಿಗೆ ಅದೃಷ್ಟವೇ ಹೌದು.
ಜಿಲ್ಲೆಯ ಎಲ್ಲಾ ಅಭಿವೃದ್ದಿ ಕಾರ್ಯಕ್ರಮಗಳನ್ನು ತಾವೇ ಮುತುವರ್ಜಿ ವಹಿಸಿ ನೋಡಿಕೊಂಡ ಯಡಿಯೂರಪ್ಪ ಈಗ ಮುಖ್ಯಮಂತ್ರಿ ಆದ ಮೇಲೆ ಸವಾಲು ನೀಡಿದ ಅತಿವೃಷ್ಟಿಯ ದೊಡ್ಡಸವಾಲು ನಿಭಾಯಿಸಿ ಎದ್ದೇಳುವಷ್ಟರಲ್ಲಿ ಛಡಿಯೇಟು ನೀಡಿದಂತಹ ಕೊರೊನಾ ಅವರ ಚಾಕಚಕ್ಯತೆಯ ಕಾರ್ಯಗಳಿಗೆ ಅಡ್ಡಿ ಮಾಡಿತೇ…?
ಶಿವಮೊಗ್ಗ ಜಿಲ್ಲೆಯೊಂದನ್ನೆ ಅವಲೋಕಿಸಿದಾಗ ಹಿಂದಿನಷ್ಟು ಅಭಿವೃದ್ಧಿ ಇಲ್ಲ ಎಂಬುದನ್ನ ಒಪ್ಪಿಕೊಳ್ಳಲೇಬೇಕು. ಹಾಗೆಯೇ, ಯಡಿಯೂರಪ್ಪ ಅವರ ಜವಾಬ್ದಾರಿಯನ್ನು ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ನಿಬಾಯಿಸುವುದು ಅಸಾದ್ಯವೇ ಹೌದು ಎಂಬ ಮಾತು ಕೇಳಿಬರುತ್ತಿದೆ.
ಈ ಮೊದಲು ಮುಖ್ಯಮಂತ್ರಿಗಳ ಕಚೇರಿಯಿಂದ ನಿತ್ಯ ಜಿಲ್ಲೆಯ ಎಲ್ಲಾ ವಿಭಾಗಗಳ ಮಾಹಿತಿಗಳನ್ನು ಸಂಗ್ರಹಿಸಿ ತಣ್ಣಗೆ ಕುಳಿತಿದ್ದ ಅಧಿಕಾರಿಗಳನ್ನು ಬಡಿದೆಬ್ಬಿಸುತ್ತಿದ್ದರು. ತೀರಾ ಹರಟೆ ಹೊಡೆದರೆ ಬೇರೆಡೆ ವರ್ಗಾಯಿಸಿ ಸೂಕ್ತರನ್ನ ಹಾಕುತ್ತಿದ್ದರು.
ರಾಜ್ಯ ಗುಪ್ತಚರ ಇಲಾಖೆಯಿಂದ ನಿತ್ಯ ನಿರಂತರ ಶೋಧನೆ ನಡೆಸುತ್ತಿದ್ದ, ಅಭಿವೃದ್ದಿ ಕಾರ್ಯಗಳಿಗೆ ಸದಾ ಸ್ಪಂದಿಸುವಂತೆ ಮಾಡುವ ನಿಟ್ಟಿನಲ್ಲಿ ಜಾಗೃತವಾಗಿದ್ದ ಆ ಆಡಳಿತ ಅವಧಿ ಮತ್ತೊಮ್ಮೆ ಮರುಕಳಿಸಲಿ. ಶಿವಮೊಗ್ಗ ಕಂಗೊಳಿಸುವಂತಾಗಲಿ. ಯಡಿಯೂರಪ್ಪ ಅವರಿಗೆ, ಅವರ ಕಾರ್ಯಕ್ಕೆ ಅವರೇ ಸಾಟಿ. ಅವರಷ್ಟು ಪ್ರಭಲತೆ ಕಾಣಲು ಸಾದ್ಯವಿಲ್ಲ.
ಸಚಿವರಾದ ಈಶ್ವರಪ್ಪ, ಸಂಸದರಾದ ರಾಘವೇಂದ್ರ ಹಾಗೂ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರ ಯತ್ನದ ಜಿಲ್ಲೆಯ ಅಭಿವೃದ್ದಿಗೆ ಫಲ ದೊರೆಯಬೇಕಾದರೆ ಅಲ್ಲಿ ಯಡಿಯೂರಪ್ಪ ದ್ವನಿ ಅತ್ಯಗತ್ಯವಲ್ಲವೇ…?

  • ಗಜೇಂದ್ರ ಸ್ವಾಮಿ, ತುಂಗಾತರಂಗ

By admin

ನಿಮ್ಮದೊಂದು ಉತ್ತರ

You missed

error: Content is protected !!