ಗಜೇಂದ್ರ ಸ್ವಾಮಿ ಅವರ ವಾರದ ಅಂಕಣ
ಏನೋ ಅನಿವಾರ್ಯರ್ತೆ, ಅಗತ್ಯತೆ, ಅವಶ್ಯಕತೆ ಎಂದು ಕಾಡಿಬೇಡಿ ದಾಖಲೆ ರಹಿತವಾಗಿ ಸಾಲ ಪಡೆದ ಕೆಲ ವಿಕಾರ ಮನುಷ್ಯರು ಅದನ್ನ ವಾಪಾಸ್ ಕೊಡುವಾಗ ಬೊಗಳೆ ಪುಂಗಿದಾಸನಾಗಿ ನಮ್ಮ ನಡುವೆ ಕಾಣಿಸಿಕೊಂಡಿರುವುದು, ಕಾಣಿಸಿಕೊಳ್ಳುತ್ತಿರುವುದು ದುರಂತವಲ್ಲವೇ?
ಕೊಡಲ್ಲ ಎಂದು ಹೇಳಲ್ಲ, ಕೊಡುತ್ತೇನೆ ಅರ್ಧಗಂಟೆ , 10 ನಿಮಿಷದಿಂದ ಹಿಡಿದು ಒಂದು ವಾರ, ಡೇಟು, ಟೈಮು, ತಿಂಗ್ಳು ಎಲ್ಲಾ ಹೇಳ್ತಾ ಇರೋ ನಮ್ಮ ನಡುವಿನ ವಿಕಾರ ಮನಸ್ಸಿನ ಮನುಷ್ಯರೇ ಸುಳ್ಳು ಹೇಳಬೇಡಿ. ಸಾಧ್ಯವಾದಷ್ಟು ಬೇಗನೆ ನಿಮ್ಮ ಸಾಲ ಕೊಟ್ಟುಬಿಡಿ ಎಂಬುದು ಚಿಕ್ಕ ಸಲಹೆ.
ಏಕೆಂದರೆ ನೀವು ಸತ್ತಾಗ ನಿಮ್ಮ ಹೆಣ ಹೂತು ಹಾಕಲು ಅಥವಾ ಸುಡಲು ನಾಕಾಣೆ ಸಿಗೊಲ್ಲ. ನಿಮ್ಮಿಂದಾಗಿ ನಿಮ್ಮ ಕುಟುಂಬಕ್ಕೆ ಸಹಾಯ ಸಿಗಲ್ಲ. ಹಾಗಾಗಿ ಸಾಲ ಪಡೆದವರು ಕೂಡಲೇ ಅದನ್ನ ವಾಪಸ್ ಕೊಟ್ಟುಬಿಡಿ. ಮತ್ತೆ ಸಾಲ ಮಾಡಲು ಹೋಗಬೇಡಿ.
ವ್ಯವಹಾರ ಹಾಗೂ ಬದುಕನ್ನು ಕಲಿತುಕೊಳ್ಳಿ. ಒಮ್ಮೆ ಹೋದ ಗೌರವ ಆದರ ಮತ್ತೆ ಎಂದೂ ಸಿಗುವುದಿಲ್ಲ ಅಲ್ಲವೇ?
ಕೆಲವೇ ಕೆಲವು ಇಂತಹ ಕ್ಷುದ್ರ ಮನಸುಗಳು ಬದಲಾಗುವ ಅನಿವಾರ್ಯತೆ ಇದೆ. ಸತ್ತಾಗ ನಿಮ್ಮ ಕುಟುಂಬ ಕಂಗಾಲಾಗುವುದು, ಅಂಗಲಾಚುವುದು ನಿಮಗಿಷ್ಟವೇ? ಸಹಾಯ ಮಾಡುವ ಜನರಿದ್ದಾರೆಂದು ಅವರನ್ನು ಸಂಪೂರ್ಣವಾಗಿ ಬೋಳಿಸಿ ತಿಂದು ಹಾಕಬೇಡಿ ಎಂಬುದಷ್ಟೇ ಇಂದಿನ ದಿನಮಾನಗಳ ಮಾತು
(ನೆಗೆಟಿವ್ ಥಿಂಕಿಂಗ್ ಅಂಕಣ ಓದುವ ಓದುಗರೊಬ್ಬರ ಚಿಕ್ಕ ಅಭಿಪ್ರಾಯ ಇದು)