ಶಿವಮೊಗ್ಗ : ಪೊಲೀಸರೆಂದರೆ ಅವರ ಸಹವಾಸವೇ ಬೇಡಪ್ಪ ಎಂಬ ಬಹಳಷ್ಟು ಜನರ ಮನಸುಗಳಿಗೆ ನಾವು ನಿಮ್ಮ ರಕ್ಷಕರಷ್ಟೆ ಅಲ್ಲ, ನಾವೂ ಜನರ ಹಿತಕ್ಕೆ ಬದ್ದ ಎಂಬುದನ್ನು ಶಿವಮೊಗ್ಗ ಜಿಲ್ಲೆಯ ಪೊಲೀಸ್ ಇಲಾಖೆಯ ಬಹಳಷ್ಟು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ತೋರುವ ಮೂಲಕ ದೇಶದಲ್ಲೇ ಮಾದರಿಯಾದ ಹೆಜ್ಜೆ ಹಾಕುತ್ತಿರುವುದು ವಿಶೇಷ.


ಎಲ್ಲದಾನಕ್ಕಿಂತ ರಕ್ತದಾನವೇ ಶ್ರೇಷ್ಟ ಎಂಬ ಮಾತಿನಂತೆ ಜನರ ಆರೋಗ್ಯಕಾಪಾಡಲು, ಉಳಿಸಲು ರಕ್ತದಾನ ಮಾಡುವುದರ ಮೂಲಕ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲರಿಗೂ ಮಾದರಿಯಾಗಿದೆ.

ಕಾನೂನು ಪಾಲನೆ ಮಾಡದವರನ್ನು ಸರಿದಾರಿಗೆ ತಂದು ಸಮಾಜದಲ್ಲಿ ಶಾಂತಿ ನೆಲೆಸುವಲ್ಲಿ ಪೊಲೀಸರು ಪ್ರಮುಖಪಾತ್ರ ವಹಿಸುತ್ತಾರೆ ತಮ್ಮ ಕರ್ತವ್ಯದೊಂದಿಗೆ ಶಿವಮೊಗ್ಗ ಜಿಲ್ಲೆಯ ಹಲವು ಪೊಲೀಸ್ ಠಾಣೆಯ ಸಿಬ್ಬಂದಿಗಳು ರಕ್ತದಾನ ಮಾಡಿ ಜೀವದಾನದಲ್ಲಿ ಭಾಗಿಯಾಗಿರುವುದು ಅತ್ಯಂತ ಪವಿತ್ರವಾದ ಕೆಲಸವಾಗಿದೆ ಎಂದರೆ ತಪ್ಪಗಲಾರದು.

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಹಲವು ಸಂಘ ಸಂಸ್ಥೆಗಳ ಜೊತೆಗೂಡಿ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದ್ದು, ಇದುವರೆಗೂ 54 ರಕ್ತದಾನ ಶಿಬಿರಗಳನ್ನು ಆಯೋಜಿಸಿದೆ. ಅದರಲ್ಲೂ ಒಂದೇ ತಿಂಗಳಲ್ಲಿ 8 ಭಾರಿ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ. ಜಿಲ್ಲೆಯ 34 ಪೊಲೀಸ್ ಠಾಣೆಗಳಲ್ಲೂ ರಕ್ತದಾನ ಶಿಬಿರವನ್ನು ಆಯೋಜನೆ ಮಾಡುವ ಉದ್ದೇಶ ಹೊಂದಲಾಗಿದ್ದು, ಈಗಾಗಲೇ 70 ರಷ್ಟು ಭಾಗ ಈ ಕೆಲಸ ಮುಗಿದಿದ್ದು, ಇನ್ನೂ 30ರಷ್ಟು ಭಾಗ ಉಳಿದಿದೆ. ಈ ಉದ್ದೇಶ ಪೂರ್ಣಗೊಂಡರೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ರಕ್ತದಾನ ಮಾಡಿದ ಭಾರತ ಮೊದಲ ಜಿಲ್ಲೆಯಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹೊರಹೊಮ್ಮಲಿದೆ ಎಂದು ಹೆಡ್ ಕಾನ್ಸ್ಟೇಬಲ್ ಹಾಲೇಶಪ್ಪ ಮಾಹಿತಿ ನೀಡಿದರು.


7 ಸಾವಿರಕ್ಕೂ ಅಧಿಕ ಯೂನಿಟ್ ರಕ್ತದಾನ!
ರಕ್ತದಾನವು ಜೀವಗಳನ್ನು ಉಳಿಸುವ ಶ್ರೇಷ್ಠ ಕಾರ್ಯವಾಗಿದೆ. ರಕ್ತದ ಅವಶ್ಯಕತೆ ನಿರಂತರವಾಗಿದ್ದು, ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ಗಾಯಗಳು, ಹೆರಿಗೆ ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಇದನ್ನು ನಿರಂತರವಾಗಿ ಬಳಸಲಾಗುತ್ತದೆ. ಭಾರತದಲ್ಲಿ ಪ್ರತಿ ಎರಡು ಸೆಕೆಂಡಿಗೆ ಒಬ್ಬರಿಗೆ ರಕ್ತದ ಅಗತ್ಯವಿದೆ. ರಕ್ತದಾನವು ಜೀವಗಳನ್ನು ಉಳಿಸುವ ಒಂದು ಪ್ರಮುಖ ಪ್ರಕ್ರಿಯೆಯಾಗಿದ್ದು, ರಕ್ತದಾನದ ಮೂಲಕ ಈ ಕೊರತೆಯನ್ನು ನೀಗಿಸಲು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಸಿಬ್ಬಂದಿಗಳಿಂದ ರಕ್ತದಾನ ಮಾಡುವುದರ ಮೂಲಕ ಸುಮಾರು ೭ ಸಾವಿರಕ್ಕೂ ಅಧಿಕ ಯೂನಿಟ್ ರಕ್ತದಾನ ಸಂಗ್ರಹವಾಗಿರುವ ಬಗ್ಗೆ ಮಾಹಿತಿ ಇದೆ. ಇದು ಶ್ಲಾಘನೀಯವಾದುದು.
ಜನರ ಸೇವೆಗೆ ಸದಾ ನಾವು ಸಿದ್ದ | ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್

-ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿಗಳು, ಶಿವಮೊಗ್ಗ
ಹೆಡ್ಕಾನ್ಸ್ಟೇಬಲ್ ಹಾಲೇಶಪ್ಪರಿಂದ 51 ಬಾರಿ ರಕ್ತದಾನ!
