ಶಿವಮೊಗ್ಗ : ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಗೋಮಾತೆಯ ಸಂರಕ್ಷಣೆಯ ವಿಶೇಷ ಚಿಂತನೆಯಿಂದ ಪ್ರಾರಂಭವಾಗುತ್ತಿರುವ “ಗೋವರ್ಧನ” ಟ್ರಸ್ಟ್ ಬಿಡಾಡಿ, ಮಾಲಿಕರಿಲ್ಲದ, ಅನಾರೋಗ್ಯ ಪೀಡಿತ, ಅಪಘಾತಕ್ಕೀಡಾದ, ವಯಸ್ಸಾದ ಹಾಗೂ ಬರಡು ಹಸುಗಳ ರಕ್ಷಣೆ ಮತ್ತು ಆರೈಕೆಗಾಗಿ ಹಲವು ಯೋಜನೆಗಳನ್ನು ಅಳವಡಿಸಿಕೊಂಡಿದೆ. ಸುಸಜ್ಜಿತ ಪಶುವೈದ್ಯಕೀಯ ಆಸ್ಪತ್ರೆ, ಅಂಬುಲೆನ್ಸ್, ಈಗಾಗಲೇ ಅಸ್ತಿತ್ವದಲ್ಲಿರುವ

ಗೋಶಾಲೆಗಳ ಅಭಿವೃದ್ಧಿಗೆ ಬೇಕಾದ ಸಹಾಯ ಹೀಗೆ ಹಲವು ಯೋಜನೆಗಳನ್ನು “ಗೋವರ್ಧನ” ಟ್ರಸ್ಟ್ ಹೊಂದಿದೆ. ಇದರ ಅಂಗವಾಗಿ ಇಂದು ಗಾಜನೂರು ಡ್ಯಾಮ್ ಸಮೀಪ ಸಕ್ರೇಬೈಲ್ನಲ್ಲಿರುವ ಜ್ಞಾನೇಶ್ವರಿ ಗೊಶಾಲೆಯ ಆವರಣದಲ್ಲಿ ಗೋವುಗಳಿಗೆ ಆಹಾರಕ್ಕಾಗಿ ಮೇವು ಬೆಳೆಯುವ

ಯೋಜನೆ ಮತ್ತು ಗೋಶಾಲೆಯ ವಿವಿದ ಅಭಿವೃದ್ಧಿ ಕೆಲಸಗಳಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಿವಶಂಕರ್, ಉಮಾಪತಿ, ಯೋಗ ಗುರು ರುದ್ರರಾಧ್ಯರು, ನಟರಾಜ್ ಭಾಗವತ್, ಉಮೇಶ್ ಆರಾಥ್ಯ,

ಕಾಂತೇಶ್ ಈಶ್ವರಪ್ಪ, ಶೇಷಾಚಲ, ಗುರುಗುಹ ನಾಗರಾಜ್, ನವ್ಯಶ್ರೀ ನಾಗೇಶ್, ಕುಬೇರಪ್ಪ, ಸತ್ಯಣ್ಣ, ಸೋಮಣ್ಣ, ಜಾಥವ್, ವಿನೋದ್ ಹಾಗೂ ಜ್ಞಾನೇಶ್ವರಿ ಗೋಶಾಲೆಯ ಹಾಗೂ ಗೋವರ್ಧನ ಟ್ರಸ್ಟ್ ನ ಸದ್ಯಸರು ಭಾಗವಹಿಸಿದ್ದರು.

\
ಶಿವಮೊಗ್ಗ ರಾಗಿಗುಡ್ಡದ ಶ್ರೀ ವಿಜಯ ಗಣಪತಿ ದೇವರ ದ್ವಾರ ಪೂಜೆಯಲ್ಲಿ ರಾಷ್ಟ್ರ ಭಕ್ತರ ಬಳಗದ ಯುವ ಮುಖಂಡ ಕಾಂತೇಶ್ ಕೆ.ಎಸ್. ಈಶ್ವರಪ್ಪ ಅವರು ಭಾಗವಹಿಸಿ ದೇವರ ಆಶೀರ್ವಾದ ಪಡೆದರು.