ಶಿವಮೊಗ್ಗ,ಫೆ.14: ಕೀರ್ತಿ ಶೇಷ ವೇದ ಬ್ರಹ್ಮ ಶ್ರೀ ಅ.ಪ.ರಾಮಭಟ್ಟರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಫೆ.16ರಿಂದ ಮಾರ್ಚ್ 18ರವರೆಗೆ 1 ತಿಂಗಳ ಪರ್ಯಂತ ಪ್ರತಿದಿನ ಸಂಜೆ 5.30ರಿಂದ ರಾತ್ರಿ 8.30ರವರೆಗೆ ವಿಶೇಷ ಧಾರ್ಮಿಕ ಆಧ್ಯಾತ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮವನ್ನು ರವೀಂದ್ರನಗರದ ಶ್ರೀ ಪ್ರಸನ್ನಗಣಪತಿ ಬಲಮುರಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದ ವಿವಿಧ ಸಂಘ ಸಂಸ್ಥೆಗಳ ಹಾಗೂ ನಗರದ ಕಲಾವಿದರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ರಾಮಸ್ಮರಣೆ ಎಂಬ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು  ಶೃಂಗೇರಿ ಎಚ್.ಎಸ್.ನಾಗರಾಜ್ ಇಂದು ದೇವಸ್ಥಾನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರವಚನ, ಯಕ್ಷಗಾನ, ಸಂಗೀತ, ಗಮಕ, ಭರತನಾಟ್ಯ, ಗೀಟಾರ್ ಹಾಗೂ ಸ್ಯಾಕ್ಸೋಪೋನ್ ವಾಧನ, ಸುಗಮ ಸಂಗೀತ, ಭಾಗವತ ಸಪ್ತಾಹ, ಭಗವದ್ಗೀತೆ ಸಾರ ಉಪನ್ಯಾಸ. ಪೂಜ್ಯ ಶ್ರೀರಾಮಭಟರ ಜೀವನ ಆಧಾರಿತ ಹರಿಕಥೆ ಪ್ರಸಂಗ, ತಾಳ ಮದ್ದಳೆ, ಸಾಮೂಹಿಕ ಭಜನೆ ಮತ್ತು ಲೋಕ ಕಲ್ಯಾಣಕ್ಕಾಗಿ ರುದ್ರ ಹೋಮ ಸೇರಿದಂತೆ ಧಾರ್ಮಿಕ-ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಅ.ಪ.ರಾಮಭಟ್ಟರು ಸಾಮಾಜಿಕ, ಧಾರ್ಮಿಕ ಆಧ್ಯಾತ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತ ಸಾಧಕ ಸಂಘಟಕರಾಗಿದ್ದ ಇವರು ಕಳೆದ ವರ್ಷ ಫೆ.23ರಂದು ದೈವಾಧೀನರಾಗಿದ್ದು ತತ್ಸಂಬಂಧವಾಗಿ ನಗರದ ಕೆಲವು ಸಂಘ ಸಂಸ್ಥೆಗಳು ಮತ್ತು ಕಲಾವಿದರು ಪೂಜ್ಯರ ಪ್ರತಿ ಮಾಸಿಕ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳು ಆಯೋಜಿಸುತ್ತ ಬರಲಾಗಿದೆ. ಪೂಜ್ಯರ ವರ್ಷಾಂತಿಕ ಕಾರ್ಯಕ್ರಮದ ಅಂಗವಾಗಿ 1 ತಿಂಗಳ ಕಾಲ ಪ್ರತಿದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಭಜನ ಪರಿಷತ್ ಶಿವಮೊಗ್ಗ ನಗರದ ಭಜನಾ ಮಂಡಳಿಗಳ ಒಕ್ಕೂಟದ ಆಶ್ರಯದಲ್ಲಿ ಪ್ರತಿದಿನ ಸಂಜೆ 5.30ರಿಂದ 6.30ರವರೆಗೆ ದಿನಕ್ಕೆ 2 ತಂಡಗಳು ಆಗಮಿಸಿ ಸಾಮೂಹಿಕವಾಗಿ ರಾಮನಾಮ ಜಪ ಮತ್ತು ರಾಮ ಭಜನೆಯನ್ನು ನಡೆಸಿಕೊಡುವ ಮೂಲಕ ಒಟ್ಟು 60ಕ್ಕೂ ಹೆಚ್ಚು ಭಜನ ತಂಡಗಳು ಭಾಗವಹಿಸಿ ಪೂಜ್ಯರ ಸ್ಮರಣೆಗೆ ಸಂಪೂರ್ಣ ಸಹಕಾರ ನೀಡಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಬರೀಶ್ ಕಣ್ಣನ್, ಶಂಕರ ನಾರಾಯಣ್, ಅರವಿಂದ್ ಹೊಳ್ಳ, ಎನ್.ಶ್ರೀಧರ್, ಅರುಣ್‍ಕುಮಾರ್, ಲಕ್ಷ್ಮೀ ಮಹೇಶ್, ವಿನಯ್, ಜಯಶ್ರೀ ಶ್ರೀಧರ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!