ಶಿವಮೊಗ್ಗ, ಫೆ.೦೮:
ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ವಿಷಯವಾಗಿ ಸಾಮಾಜಿಕ ಜಾಲತಾಣದ ಮೂಲಕ ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಿದ ಆರೋಪದ ಮೇಲೆ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎನ್‌ಎಸ್‌ಯುಐ ಸಂಘಟನೆ ಇಲ್ಲಿನ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದೆ.


ಸರ್ಕಾರ ಈ ಬಾರಿಯ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿ ಹೊರಡಿಸಿದೆ. ಈ ಪಟ್ಟಿಯಲ್ಲಿ ಮಾರ್ಚ್ ೧ರ ಶುಕ್ರವಾರ ಮಧ್ಯಾಹ್ನ ೨ಕ್ಕೆ ವಿಜ್ಞಾನ ವಿಷಯದ ಪರೀಕ್ಷೆ ನಿಗದಿಪಡಿಸಲಾಗಿದೆ. ಆ ದಿನ ಪಿಯುಸಿ ಅಂತಿಮ ಪರೀಕ್ಷೆ ಆರಂಭವಾಗುತ್ತಿದೆ. ಬೆಳಿಗ್ಗೆ ಸಮಯದಲ್ಲಿ ಪರೀಕ್ಷೆ ಇರುವ ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಬದಲಿಸಿದ್ದು, ಉಳಿದ ಎಲ್ಲ ಪರೀಕ್ಷೆಗಳು ಬೆಳಿಗ್ಗೆ ನಡೆಯಲಿವೆ.


’ಚಕ್ರವರ್ತಿ ಸೂಲಿಬೆಲೆ ಶುಕ್ರವಾರ ಪರೀಕ್ಷಾ ದಿನ ಎದ್ದುಕಾಣುವಂತೆ ಮಾಡಿ, ಈ ವೇಳಪಟ್ಟಿಯ ಮೇಲ್ಬಾಗದಲ್ಲಿ ಇಂಗ್ಲಿಷ್‌ನಲ್ಲಿ ೧೦ನೇ ತರಗತಿ ಎಲ್ಲಾ ಪರೀಕ್ಷೆಗಳ ವೇಳಾಪಟ್ಟಿ ಬೆಳಗಿನ ಹೊತ್ತು ಇದೆ. ಶುಕ್ರವಾರದ ವೇಳಾಪಟ್ಟಿ ಮಾತ್ರ ನಮಾಜ್ ಇರುವ ಕಾರಣ ಬದಲಾಯಿಸಲಾಗಿದೆ ಎಂದು ಬೇರೆ

ಧರ್ಮದವರಿಗೆ ನೋವಾಗುವಂತೆ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಸೂಲಿಬೆಲೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರುದಾರರು ಆಗ್ರಹಿಸಿದ್ದಾರೆ.
ಎನ್‌ಎಸ್‌ಯುಐನ ವಿಜಯ್‌ಕುಮಾರ್, ಹರ್ಷಿತ್, ಚರಣ್, ರವಿಕುಮಾರ್, ಪ್ರಮುಖರಾದ ಜಿ.ಡಿ.ಮಂಜುನಾಥ್, ಚೇತನ್ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!