ಇಲ್ಲಿನ ಟೀಮ್ ಮಾಧ್ಯಮ ತಂಡವು ನಡೆಸು ತ್ತಿರುವ ಮೂರು ದಿನಗಳ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಯು ಇಂದು ಮಧ್ಯಾಹ್ನ ಆರಂಭ ಗೊಂಡಿದ್ದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಚಾಲನೆ ನೀಡಿದರು.


ಶಿವಮೊಗ್ಗ ಜಿಲ್ಲೆಯ ತಂಡಗಳ ಲೀಗ್ ಹಂತದ ಪಂದ್ಯಾವಳಿ ಇಂದಿನಿಂದ ಆರಂಭಗೊಂಡಿದ್ದು, ಮೂರು ದಿನಗಳ ಕಾಲ ನಿರಂತರವಾಗಿ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಕ್ರೀಡಾಂಗಣದಲ್ಲಿ ಆರಂಭ ಗೊಂಡಿದೆ.


ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಸುಂದರೇಶ್ ಅವರು ಮಾತನಾಡುತ್ತಾ, ಮಾಧ್ಯಮ ರಂಗ ಕೇವಲ ಸುದ್ದಿ ಜಗತ್ತಿಗೆ ಸೀಮಿತವಾಗದೆ, ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವುದು ಶಿವಮೊಗ್ಗ ಜಿಲ್ಲೆಯ ಹಿರಿಮೆಯ ವಿಷಯ ಎಂದರು.


ಶಿವಮೊಗ್ಗದಲ್ಲಿ ಮಾಧ್ಯಮ ರಂಗ ಎಲ್ಲಾ ಬಗೆಯ ಸಾಮಾಜಿಕ ಉಪಯುಕ್ತ ಜನಪರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದು, ಕ್ರೀಡಾಕೂಟವನ್ನು ಕೇವಲ ಪತ್ರ ಕರ್ತರಿಗೆ ಸೀಮಿತಗೊಳಿಸದೆ, ಸರ್ವರಲ್ಲೂ ಸಾಮರಸ್ಯ ತರುವ ನಿಟ್ಟಿನಲ್ಲಿ ಆಯೋಜಿಸಿರುವುದು ಶ್ಲಾಘನೀಯ. ಕಾಂಗ್ರೆಸ್ ಪಕ್ಷದ ಪ್ರಮುಖ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯ ಐಡಿಯಲ್ ಗೋಪಿ ಅವರು ಮಾತನಾಡುತ್ತಾ ಶಿವಮೊಗ್ಗ ಜಿಲ್ಲೆಯಲ್ಲಿ ಸೇರಿದಂತೆ ಎಲ್ಲಾ ಬಗೆಯ ಆಟೋಗಳಲ್ಲಿ ದೇಶವಿದೇಶ ಗಳಲ್ಲಿ ತನ್ನದೇ ಆದ ವಿಶೇಷ ಹಿರಿಮೆಯನ್ನು ಹೊಂದಿದೆ ಎಂದರು.


ಟೆನಿಸ್ಬಾಲ್ ಎಂದಾಕ್ಷಣ ಸಂಕೋಚ ಪಡದಿರಿ. ಏಕೆಂದರೆ ಅದೇ ಬಾಲ್ ನಿಂದ ಆಟ ಕಲಿತವರು ಈಗ ರಾಷ್ಟ್ರ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳಾಗಿದ್ದಾರೆ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂ ಖ್ಯಾತರ ಘಟಕದ ಅಧ್ಯಕ್ಷ ಕಲೀಂ, ಪ್ರಮುಖರಾದ ನೇತ್ರಾವತಿ, ಚಂದ್ರಶೇಖರ್, ಸಾಹಿರಾ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ಆಯೋಜ ಕರಾದ ಎಸ್ ಕೆ ಗಜೇಂದ್ರ ಸ್ವಾಮಿ ಶಿ ಜು ಪಾಶಾ, ಜಿ ಪದ್ಮ ನಾಬ್, ಜಿ ಚಂದ್ರಶೇಖರ್, ಸುಧೀರ್ ಹಾಗೂ ಇತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!