ಶಿವಮೊಗ್ಗ,ಜ.೧೯:
ಕರ್ನಾಟಕದ ರಾಜ್ಯ ಸರ್ಕಾರ ಜನವರಿ ೨೨ ರಂದು ರಾಮನ ಮೂರ್ತಿ ಪ್ರತಿಷ್ಟಾಪನೆ ಹಿನ್ನೆಲೆಯಲ್ಲಿ ರಜಾ ಘೋಷಣೆ ಮಾಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.

ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐದು ನೂರು ವರ್ಷಗಳ ನಂತರ ರಾಮ ಮಂದಿರ ಹಿಂದುಗಳಿಗೆ ಮರಳಿ ಸಿಗುತ್ತಿದೆ. ವಿಗ್ರಹ ಪ್ರತಿಷ್ಟಾಪನೆ ನೂರಾರು ಕೋಟಿ ಭಾರತೀಯರಿಗೆ ಸಂತಸದ ದಿನ ಎಂದರು.

ರಾಮ ಮಂದಿರ ಜಾಗದಲ್ಲಿ ಪ್ರತಿ ಷ್ಟಾಪನೆ ಆಗುತ್ತಿರುವುದು ನೋಡಲು ಜನರಿಗೆ ಅವಕಾಶ ಆಗಬೇಕು. ಸಂತೋ ಷದಿಂದ ಭಾಗವಹಿಸಲು ಆಗಬೇಕು. ಅದಕ್ಕಾಗಿ ರಜಾ ಘೋಷಣೆ ಮಾಡ ಬೇಕು. ರಾಮನ ಇತಿಹಾಸ ಬಗ್ಗೆ ಅನೇಕ ಚರ್ಚೆ ಆಗುತ್ತಿದೆ. ಆದರೆ ಈಗ ಎಲ್ಲ ರಿಗೂ ಸಂತಸ ಇದೆ. ಸಾಕಷ್ಟು ಮುಸ್ಲಿಂ, ಕ್ರಿಶ್ಚಿಯನ್ ಜನರೂ ಹೋಗುತ್ತಿದ್ದಾರೆ ಎಂದರು.

ನಮ್ಮ ರಾಜಕೀಯ ಬೇರೆ. ರಾಮನ ಬಗ್ಗೆ ಇಡೀ ಪ್ರಪಂಚದ ಜನರಲ್ಲಿ ಮೆಚ್ಚುಗೆ ಇದೆ. ಕೆಲವರು ರಾಜಕೀಯ ಮಾತು ನಿಲ್ಲಿಸಿ. ಇಡೀ ಪ್ರಪಂಚದಲ್ಲಿ ಹಿಂದೂ ಧರ್ಮದ ಬಗ್ಗೆ ಗೌರವ ಬಂದಿದೆ. ಮಹಾತ್ಮ ಗಾಂಧಿ ಸಮಾಧಿ ಯಲ್ಲಿ ಕೂಡಾ ಹೇ ರಾಮ್ ಎಂದು ಬರೆದಿದೆ. ಒಳ್ಳೆಯ ವಾತಾವರಣ ಸೃಷ್ಟಿ ಆಗಿದೆ. ಇಡೀ ಪ್ರಪಂಚಕ್ಕೆ ನೆಮ್ಮದಿ ಸಿಗುತ್ತಿದೆ ಎಂದರು.

ಮುಂದಿನ ಜನ್ಮದಲ್ಲಿ ಏನು ಸಿಗುತ್ತದೆ ಗೊತ್ತಿಲ್ಲ. ಮಥುರಾ, ಕಾಶಿ ಇತ್ಯಾದಿ ಮುಂದೆ ಏನಾಗುತ್ತದೋ ಗೊತ್ತಿಲ್ಲ. ಹಾಗಾಗಿ ಎಲ್ಲರೂ ಮೌನವಾಗಿ ಇರುವುದು ಒಳ್ಳೆಯದು. ಸುಮ್ಮನೆ ಮಾತನಾಡುವುದು ಸಣ್ಣತನ ಆಗುತ್ತದೆ. ಕಾಂಗ್ರೆಸ್ ಅನೇಕ ವ್ಯಕ್ತಿಗಳು ಇದು ಬಿಜೆಪಿ

ಕಾರ್ಯಕ್ರಮ ಎಂದಿದ್ದಾರೆ. ಭಾರತ್ ಜೋಡೋ ಮಾಡಲು ರಾಹುಲ್ ಗಾಂಧಿಗೆ ಸಾಧ್ಯವೇ? ಬಾಯಲ್ಲಿ ಹೇಳಿಕೊಂಡು ಹೊರಟರೆ ಆಗಲ್ಲ. ಅವರ ತಾತ ಭಾರತ ಇಬ್ಭಾಗ ಮಾಡಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜಗದೀಶ್ , ಚಂದ್ರಶೇಖರ್, ಶಿವರಾಜ್ ಸುದ್ದಿಗೋಷ್ಟಿಯಲ್ಲಿ ಇದ್ದರು.