ಜಿಲ್ಲೆಯ ಜನರ ಹಲವು ವರ್ಷಗಳ ಬೇಡಿಕೆ ಈಡೇರಿಕೆ ಸನ್ನಿಹಿತವಾಗಿದ್ದು, ಎಫ್’ಎಂ ಪ್ರಸರಣ ಕೇಂದ್ರಕ್ಕೆ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಈ ಕುರಿತಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಮಾಹಿತಿ ನೀಡಿದ್ದು, ಇಂದು ಸಂಜೆ ೬ ಗಂಟೆಗೆ ನಗರದ ಸಹ್ಯಾದ್ರಿ ಕಾಲೇಜು ಎದುರಿನ ದೂರದರ್ಶನ ಕೇಂದ್ರದಲ್ಲಿ ೧೦ ಕೆವಿ ಎಫ್’ಎಂಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚು ವಲ್ ಮೂಲಕ ಶಿಲಾನ್ಯಾಸ ನೆರವೇರಿ ಸಲಿದ್ದಾರೆ ಎಂದಿದ್ದಾರೆ.

ಭದ್ರಾವತಿ ಆಕಾಶವಾಣಿ ಇದೇ ಫೆಬ್ರವರಿಗೆ ೬೦ನೆಯ ವರ್ಷಕ್ಕೆ ಕಾಲಿಡಲಿದೆ. ಸಾಮಾನ್ಯವಾಗಿ ೬೦ ಎಂದರೆ ನಿವೃತ್ತಿ ಎನ್ನುತ್ತಾರೆ. ಆದರೆ, ಈ ಸಂದರ್ಭದಲ್ಲಿ ಆಕಾಶವಾಣಿ ಭದ್ರಾವತಿಗೆ ಹೊಸ ಹರೆಯ ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಬದಲಾಗುತ್ತಿರುವ ಈ ಯುಗದಲ್ಲಿ ಮೊಬೈಲ್, ಇಂಟರ್’ನೆಟ್ ಹಾಗೂ ಕಂಪ್ಯೂಟರ್ ಬಳಕೆ ಹೆಚ್ಚು ತ್ತಿದ್ದು, ನಾವೆಲ್ಲಾ ಹಿಂದೆ ಬಳಸುತ್ತಿದ್ದ ರೇಡಿಯೋ ಬಹಳ ಕಡಿಮೆಯಾಗಿದೆ. ಆದರೆ, ಬಹುಜನ ಹಿತಾಯ, ಬಹುಜನ ಸುಖಾಯ ಎಂಬ ಧ್ಯೇಯ ವಾಕ್ಯ ಹೊಂದಿದ ಕೇಂದ್ರ ಸರ್ಕಾರದ ಪ್ರಸಾರ ಭಾರತಿಯ ಆಕಾಶವಾಣಿ ಇಂದಿಗೂ ತನ್ನ ವಿಶ್ವಾಸಾರ್ಹ ಸುದ್ದಿ, ಮನರಂಜನೆ ಹಾಗೂ ಶಿಕ್ಷಣ ಪ್ರಸಾರದಲ್ಲಿ ಮೊದಲ ಸ್ಥಾನದ ಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇಂತಹ ಸಂದರ್ಭದಲ್ಲಿ ಶಿವಮೊಗ್ಗ ಎಫ್’ಎಂ ಬೇಡಿಕೆಗೆ ಸ್ಪಂದಿಸಿ ಇದರ ಸ್ಥಾಪನೆಗೆ ಅನುವು ಮಾಡಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರುಗಳಿಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.