ಶಿವಮೊಗ್ಗ : ಸಿಗ್ನಲ್ ಜಂಪಿಂಗ್, ಹೆಲ್ಮೆಟ್ ರಹಿತ ಚಾಲನೆ, ಮೊಬೈಲ್ ಬಳಕೆಯ ಚಾಲನೆಯಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ನಿಮ್ಮನ್ನು ಕೇವಲ ಟ್ರಾಫಿಕ್ ಪೊಲೀಸರು ಪತ್ತೆ ಹಚ್ಚಬೇಕಾಗಿಲ್ಲ. ತಪ್ಪು ಮಾಡಿದರೆ ಮುಲಾಜಿಲ್ಲದೇ ನಿಮಗೆ ಇರುವ ನೂರಾರು ಸಿಸಿ ಕ್ಯಾಮೆರಾಗಳು ದಂಡ ಹಾಕುತ್ತವೆ.
ಏನಿಲ್ಲವೆಂದರು ಕಷ್ಟಪಟ್ಟು ಮಾರಿದರೆ ಹತ್ತು ಸಾವಿರಕ್ಕೆ ಮಾರಬಹುದಾದ ಡಿಯೋ ಸ್ಕೂಟಿಯೊಂದಕ್ಕೆ ಬರೊಬ್ಬರಿ 17 ಸಾವಿರ ರೂಪಾಯಿ ದಂಡ ಬಿದ್ದಿದೆ. ಈ ದಂಡವನ್ನು ಚಾಲಕ ನೀಡಿದ್ದಾನೆ. ಅದೂ ಸಹ ದಂಡದ ರಶೀದಿ ಬಿಲ್‌ಗಳು ಸುಮಾರು ಒಂದೂವರೆ ಮೀಟರ್‌ನಷ್ಟು ಉದ್ದ ಇದೆ ಎಂದರೆ ನಂಬುತ್ತೀರಾ?
ಹೌದು.., ಇದು ನಂಬಲೇ ಬೇಕಾದ ಸತ್ಯ ಘಟನೆ. ಶಿವಮೊಗ್ಗ ಸಂಚಾರಿ ಪೊಲೀಸ್ ಇಲಾಖೆ ದಂಡ ವಿಧಿಸಿದ ಗಾಡಿಗಳನ್ನು ಪತ್ತೆ ಹಚ್ಚುವ, ವಶಕ್ಕೆ ಪಡೆಯುವ ಕೆಲಸಕ್ಕೆ ಮುಂದಾಗಿದೆ. ಶಿವಮೊಗ್ಗ ಶಿವಪ್ಪನಾಯ್ಕ ಸರ್ಕಲ್ ಬಳಿ ಸಿಕ್ಕಿಕೊಂಡ ಡಿಯೋ ಗಾಡಿಯನ್ನು ಸಂಚಾರಿ ಪೊಲೀಸ್ ಠಾಣೆ ಮುಖ್ಯ ಕಾನ್ಸ್‌ಸ್ಟೇಬಲ್ ಸುರೇಶ್ ಅವರು ಪತ್ತೆ ಹಚ್ಚಿ ಠಾಣೆಗೆ ಒಪ್ಪಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯ ಎ.ಎಸ್.ಐ ರಾಜಕುಮಾರ್ ಅವರು ದಂಡದ ಬಿಲ್‌ಗಳನ್ನು ನೀಡಿದ್ದಾರೆ.
ಮೊಬೈಲ್ ಸಂಪರ್ಕ ಹೊಂದಿಲ್ಲದ ಇಂತಹ ನೂರಾರು ಗಾಡಿಗಳಿಗೆ ಸಾಕಷ್ಟು ದಂಡ ಬಿದ್ದಿದೆ. ಮಾಲಿಕನಿಗೆ ಗೊತ್ತಿಲ್ಲ. ಎಚ್ಚರದಿಂದ ಓಡಾಡಿ ಎಂಬುದೇ ಇಂದಿನ ಶಿವಮೊಗ್ಗದ ವಿಶೇಷ ಸುದ್ದಿ.
ಬರೊಬ್ಬರಿಗೆ 17 ಸಾವಿರ ದಂಡ ಕಟ್ಟಿದ ವ್ಯಕ್ತಿಯ ಗೋಳು ಶತ್ರುವಿಗೂ ಬೇಡ.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಉಪಸ್ಥಿತರಿದ್ದರು.