ಶಿವಮೊಗ್ಗ, ಜ.1:
ಕರ್ನಾಟಕ ಸರ್ವೋದಯ ಮಂಡಲ ಶಿವಮೊಗ್ಗ ಘಟಕದ ವತಿಯಿಂದ ಡಾ.ಎನ್.ಆರ್.ಮಂಜುಳರವರ ಎಂಟನೆಯ ಪುಸ್ತಕ “ಕಾವ್ಯಾಂಜಲಿ” ಕವನ ಸಂಕಲನವು ಶಿವಮೊಗ್ಗ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಎರಡನೇ ಮುಖ್ಯ ರಸ್ತೆಯ ಶಂಕರ ಕೃಪ ನಿಲಯದ ಆವರಣದಲ್ಲಿ ಹಲವು ಗಣ್ಯ-ಆತ್ಮೀಯ-ಬಂಧು-ಮಿತ್ರರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು.


ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಸರ್ವೋದಯ ಮಂಡಲದ ಉಪಾಧ್ಯಕ್ಷ ಬಸವರಾಜಪ್ಪನವರು
ಉದ್ಘಾಟಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಹಾಗೂ ಸಾಹಿತಿಗಳು ಎಂ .ಎನ್.ಸುಂದರ ರಾಜು ಅವರು ಕಾವ್ಯಾಂಜಲಿ ಕವನ ಸಂಕಲನ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಬೆನ್ನುಡಿ ಬರೆದ ಲೇಖಕಿ-ವಾಚಕಿಯರ ಸಂಘದ

ಅಧ್ಯಕ್ಷರಾದ ಎಸ್.ವಿ.ಚಂದ್ರಕಲಾ ಬಿಡುಗಡೆಗೊಂಡ ಕಾವ್ಯಾಂಜಲಿ ಕವನ ಸಂಕಲನದ ಬಗ್ಗೆ ಮಾತನಾಡಿದರು.ಚುಟುಕು ಸಾಹಿತ್ಯ ಪರಿಷತ್ತು ಶಿವಮೊಗ್ಗ ನಿಕಟ ಪೂರ್ವ ಅಧ್ಯಕ್ಷ ಈಶ್ವರಪ್ಪ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಡಾ.ಮಂಜುಳಾರವರ ಸಾಹಿತ್ಯ ಆಸಕ್ತಿ,ಸಾಹಿತ್ಯ ಸಂಘ-ಸಂಸ್ಥೆಗಳ ಜೊತೆಗಿನ ಅವರ ಆತ್ಮೀಯ ಒಡನಾಟ,ಅವರ ಬದುಕು-ಬರಹದ ಬಗ್ಗೆ ಆಪ್ತವಾಗಿ ಮಾತನಾಡಿದರು. ಜಿ.ಎಸ್ ಅನಂತು,ಲೇಖಕಿ

ಜೆ.ವಿ.ನಾಗರತ್ನಮ್ಮ, ಗಾಯತ್ರಮ್ಮ, ಕವಯಿತ್ರಿ ಲೀಲಾವತಿ ಅವರು ಕವನ ವಾಚನ ಮಾಡಿದರು.ಇನ್ನೂ ಬಹಳಷ್ಟು ಅವರ ಆತ್ಮೀಯ ಆಹ್ವಾನಿತರು ಕಾರ್ಯಕ್ರಮಕ್ಕೆ ಬಂದು ಶುಭಕೋರಿದರು. ಶಿವಮೊಗ್ಗ

ತಾಲೂಕಿನ ಸರ್ವೋದಯ ಮಂಡಲದ ಅಧ್ಯಕ್ಷರು ಹಾಗೂ ಲೇಖಕಿ ಎನ್.ಆರ್.ಮಂಜುಳಾರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ನೇತ್ರಾವತಿ ಮತ್ತು ನಾಗಮಣಿ ಪ್ರಾರ್ಥಿಸಿದರು.


ರಮೇಶ್ ಅವರು ನಿರೂಪಿಸಿದರು. ಡಾ.ಎನ್.ಆರ್.ಮಂಜುಳ ಅವರು ಸ್ವಾಗತಿಸಿ, ವಂದಿಸಿದರು. ಧರ್ಮರಾಜು ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!