ಜಿಲ್ಲೆಯ ಗ್ರಾಹಕರ ಅನುಕೂಲಕ್ಕಾಗಿ ೧೦ ನೂತನ ಶಾಖೆಗಳನ್ನು ಜಿಲ್ಲಾದಾದ್ಯಂತ ತೆರೆಯಲು ನಿರ್ಧರಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ.ಮಂಜು ನಾಥಗೌಡ ಹೇಳಿದರು.
ಅವರು ಇಂದು ಡಿಸಿಸಿ ಬ್ಯಾಂಕ್‌ನಲ್ಲಿ ೨೦೨೪ರ ಕ್ಯಾಲೆಂಡರ್ ಹಾಗೂ ಡೈರಿಯನ್ನು ಬಿಡುಗಡೆಗೊಳಿಸಿ ನಂತರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡುತ್ತಾ, ನೂತನ ಶಾಖೆಗ ಳನ್ನು ಹೊಳಲೂರು, ಬಾರಂದೂರು,
ಕಲ್ಲಿಹಾಳ್, ಹೊಸನಗರ, ಇತರೆ ತಾಲ್ಲೂಕು ಗಳ ಹೋಬಳಿ ಮಟ್ಟದಲ್ಲಿ ಶಾಖೆಗಳನ್ನು ತೆರೆಯಲಾಗುವುದು..
ಹಾಗೆಯೇ ಬ್ಯಾಂಕ್ ಮೊಬೈಲ್ ಆಫ್‌ನ್ನು ಬಿಡುಗಡೆ ಮಾಡಿದ್ದು, ಈ ಆಪ್ ಮೂಲಕ ಬ್ಯಾಂಕಿನ ಗ್ರಾಹಕರು ಖಾತೆಗಳ ಬ್ಯಾಲೆನ್ಸ್ ಮತ್ತು ಇತರೆ ಸಾಮಾನ್ಯ ಮಾಹಿತಿಗಳನ್ನು ಪಡೆಯಬಹುದಾಗಿದೆ. ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದರು.
ಪ್ರಸಕ್ತ ಸಾಲಿನ ಅಂತ್ಯಕ್ಕೆ ೧೨೯೩.೧೦ಕೋಟಿ ಠೇವಣಿ ಸಂಗ್ರಹವಾಗಿದೆ. ಇದು ಬೆಂಗಳೂರು ವಿಭಾಗದಲ್ಲಿ ಮೊದಲ ಸ್ಥಾನವಾಗಿದೆ. ಹಾಗೆಯೇ ೧೨.೬೯ಕೋಟಿ ನಿವ್ವಳ ಲಾಭ ಗಳಿಸಿ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದಿದ್ದೇವೆ. ೨೦೨೩-೨೪ರಲ್ಲಿ ೧೩೫೦ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ಹಿನ್ನಲೆಯಲ್ಲಿ ಈ ಡಿಸೆಂಬರ್ ತಿಂಗಳನ್ನು ಠೇವಣಿ ಮಾಸಾಚರಣೆಯನ್ನಾಗಿ ಆಚರಿಸುತ್ತಿದ್ದು, ೧೦೦ ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಆದೇಶದಂತೆ ೨೦೨೩-೨೪ರಲ್ಲಿ ವಾರ್ಷಿಕ ಶೇ.೩ರ ಬಡ್ಡಿ ದರದಲ್ಲಿ ೧೫ ಲಕ್ಷದವರೆಗೆ ಮಧ್ಯಮಾವಧಿ ಸಾಲ ನೀಡಲಾಗುವುದು. ಹಾಗೆಯೇ ಗುಡ್ಡಗಾಡು ಪ್ರದೇಶದ ರೈತರಿಗೆ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಅನುಕೂಲವಾಗುವಂತೆ ೪ ಚಕ್ರದ ಪಿಕಪ್ ವ್ಯಾನ್ ಖರೀದಿಸಲು ೭ ಲಕ್ಷದವರೆಗೆ ಶೇ.೪ರ ವಾರ್ಷಿಕ ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಮತ್ತು ಶೂನ್ಯ ಬಡ್ಡಿದರದಲ್ಲಿ ೫ ಲಕ್ಷದವರೆಗೆ ಕೃಷಿ ಸಾಲ ಹಾಗೂ ಪಶು ಸಂಗೋಪನೆ ಮತ್ತು ಮೀನುಗಾರಿಕೆಗಾಗಿ ೨ ಲಕ್ಷ ರೂ. ಬಂಡವಾಳ ಸಾಲ ನೀಡಲಾಗುವುದು. ಇದು ಸಹ ಬಡ್ಡಿ ರಹಿತವಾಗಿರುತ್ತದೆ ಎಂದರು.
ಹಾಗೆಯೇ ಗೋದಾಮುಗಳನ್ನು ನಿರ್ಮಿಸಲು ಪ್ರಾಥಮಿಕ ಸಹಕಾರ ಸಂಘಗಳ ಮೂಲಕ ೨೦ ಲಕ್ಷದವರೆಗೆ ವಾರ್ಷಿಕ ಶೇ.೭ರ ಬಡ್ಡಿ ಸಹಾಯ ಧನ ನೀಡಲಾಗುವುದು ಮತ್ತು ಬ್ಯಾಂಕ್‌ನಿಂದ ಪೆಟ್ರೋಲ್ ಬಂಕ್, ಟ್ರಾನ್ಸ್‌ಪೋರ್ಟ್, ಹಾಸ್ಪೆಟಲ್ ಮುಂತಾದ ಉದ್ಯಮಿಗಳಿಗೆ ಸಾಲ ನೀಡುವ ಮೂಲಕ ಕೃಷಿಯೇತರ ಸಾಲ ನೀಡಿಕೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ. ರೈತರು, ಕಾರ್ಮಿಕರು, ಉದ್ದಿಮೆದಾರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕೇಂದ್ರ ಸರ್ಕಾರ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದ್ದು, ಸಾಮಾನ್ಯ ಸೇವಾ ಕೇಂದ್ರ ಹಾಗೂ ಬಹು ಸೇವಾ ಕೇಂದ್ರ ದ ಯೋಜನೆಗಳ ಮೂಲಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ನೊಂದಣಿ ಮಾಡಿಕೊಂಡು ಜನಔಷಧ ಕೇಂದ್ರ, ಪೆಟ್ರೋಲ್ ಬಂಕ್, ಗ್ಯಾಸ್ ಬಂಕ್, ಸಹಕಾರ ಸೇವಾ ಕೇಂದ್ರಗಳು ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಬಹುದಾಗಿದೆ. ಆ ಮೂಲಕ ಕೇಂದ್ರ ಸರ್ಕಾರದ ಸಹಕಾರ ಸೇ ಸಮೃದ್ಧಿ ಯೋಜನೆಯನ್ನು ಬಲಪಡಿಸಿದಂತ್ತಾಗುತ್ತದೆ ಎಂದರು.
ಕೇಂದ್ರದ ಗೃಹಸಚಿವರು ಆದ ಸಹಕಾರ ಸಚಿವ ಅಮಿತ್‌ಷಾ ಅವರ ಇಂಗಿತದಂತೆ ಹಳೆಯ ಕಾಯಿದೆ ಮತ್ತು ಹೊಸಕಾಯಿದೆಯನ್ನು ಸೇರಿಸಿ ಒಂದೇ ಕಾಯಿದೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಸಹಕಾರ ಕ್ಷೇತ್ರದ ಈ ಹೊಸ ಸ್ವತಂತ್ರ ಕಾಯಿದೆ ನಿಜಕ್ಕು ಸ್ವಾಗರ್ತವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಷಡಾಕ್ಷರಿ, ನಿರ್ದೆಶಕರಾದ ದುಗ್ಗಪ್ಪ ಗೌಡ, ಪರಮೇಶ್ ಎಂ.ಎಂ. ಸುದೀರ್ ಜಿ.ಎಂ., ಎಚ್.ಕೆ.ವೆಂಕಟೇಶ್, ದಶರಥಗೌಡ, ಸಿಇಓ ವಾಸುದೇವ್ ಇದ್ದರು.