ಶಿವಮೊಗ್ಗ:\

ಶಿವಮೊಗ್ಗ ಜಿಲ್ಲೆಯಿಂದ ಪ್ರಕಟವಾಗುವ ನಿಮ್ಮ ಮುಂದೆ ಸದಾ ನಿರಂತರವಾಗಿ ಸಿಗುವ ತುಂಗಾ ತಂಗಾ ದಿನಪತ್ರಿಕೆಯ ವಾರ್ಷಿಕ ವಿಶೇಷಾಂಕ ಈ ವರ್ಷ ಬಿಡುಗಡೆಯಾಗಿದ್ದು ವಿಶೇಷವಾಗಿ ವರುಣನನ್ನು ಆರಾಧಿಸುವ ಮನದ ಆಸೆ ಹೊತ್ತು ಈ ಬಾರಿಯ ಪತ್ರಿಕೆಯಲ್ಲಿ ತುಂಗೆಯ ವರುಣಾಂತಾಂಗ ಹೆಸರನ್ನು ನೀಡಲಾಗಿರುವುದನ್ನು ತಾವುಗಳು ಗಮನಿಸಿದ್ದೀರಿ.


ಪ್ರಸಕ್ತ ವರ್ಷದ ವಿಶೇಷಾಂಕ ಸಿದ್ಧವಾಗುವ ಹೊತ್ತಿನಲ್ಲಿ ನಡೆದ ತಾಂತ್ರಿಕ ಕಾರಣಗಳಿಂದ ಈ ಬಾರಿ ಎಂಟು ವಿಶೇಷ ಲೇಖನಗಳನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಬರುವ ಸಂಕ್ರಾಂತಿ ಅಥವಾ ಯುಗಾದಿ ಸಂದರ್ಭದಲ್ಲಿ ಹೊರಬರುವ ನಿಮ್ಮ ತುಂಗಾತರಂಗ ದಿನಪತ್ರಿಕೆಯ ವಿಶೇಷಾಂಕದಲ್ಲಿ ಇದನ್ನು ಪ್ರಕಟಿಸಲಾಗುತ್ತದೆ.
ನಾಡಿನ ಎಲ್ಲಾ ಕಡೆಯಿಂದ ತಾವು ತುಂಗಾ ತರಂಗ ದಿನಪತ್ರಿಕೆಗೆ ಲೇಖನಗಳನ್ನು ವಾಟ್ಸಾಪ್, ಮೇಲ್ ಮೂಲಕ ನಿರಂತರವಾಗಿ ಕಳಿಸುತ್ತಿದ್ದೀರಿ ಆದರೆ ನಮ್ಮ ಚಿಕ್ಕ ಚೌಕಟ್ಟಿನಲ್ಲಿ ಅದನ್ನು ಸಮಗ್ರವಾಗಿ ಎಲ್ಲವನ್ನೂ ಮಾಡಲು ಸಾಧ್ಯವಾಗಿಲ್ಲ.


ಆ ವಿಷಯದಲ್ಲಿ ಪತ್ರಿಕೆಯ ಚೌಕಟ್ಟಿನ ಕಾರ್ಯಗಳು ನಡೆಯಲೇಬೇಕಿರುವುದು ಅನಿವಾರ್ಯವಾಗಿದೆ ನಿಮ್ಮ ಬರಹಗಳನ್ನು ಪತ್ರಿಕಾ ಸಂಪಾದಕರು ಹಾಗೂ ಇಡೀ ತಂಡ ಓದಿದೆ ಗೌರವಿಸಿದೆ.
ಅಂತೆಯೇ ಪ್ರಸಕ್ತ ವರ್ಷದ ಪತ್ರಿಕೆ ಯಾ ವಿಶೇಷಾಂಕ ತುಂಗಾ ತರಂಗ ತುಂಗೆಯ ವರುಣಾಂತರಂಗ ಪುಸ್ತಕ ಬಿಡುಗಡೆಗೆ ಒಂದು ದಿನದ ಹಿಂದೆ ಮನದ ಆಲೋಚನೆಗೆ ಬದ್ಧವಾಗಿ ನಡೆಸಿದ ಕಾರ್ಯಕ್ರಮದಲ್ಲಿ ಕರೆದ ಸಮಗ್ರ ಸಾಧಕ ಆತ್ಮೀಯರು ಬಂದಿದ್ದಾರೆ.


ಶಿವಮೊಗ್ಗದ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯ ಮುಖ್ಯಸ್ಥರು ಇಂತಹದೊಂದು ಕಾರ್ಯಕ್ರಮ ಮಾಡಬೇಕೆಂದು ಕೇಳಿಕೊಂಡಾಗ ಅತ್ಯಂತ ಪ್ರೀತಿಯಿಂದ ನಮಗೊಂದು ಸುಂದರ ವೇದಿಕೆ ಕಟ್ಟಿಕೊಟ್ಟಿದ್ದರು. ಅವರು ನಮ್ಮನ್ನು ಹರಸಿದ್ದಾರೆ ಎಂಬ ಈ ಸುದ್ದಿಯನ್ನು ಸಹ ತಾವು ತುಂಗಾತರಂಗ ಪತ್ರಿಕೆಯ ವೆಬ್ ನ್ಯೂಸ್ನಲ್ಲಿ ಗಮನಿಸಿದ್ದೀರಿ.
ಈ ಬಾರಿ ಬಂದಿರುವ ವಿಶೇಷಾಂಕವನ್ನು ನಿಮ್ಮ ಮುಂದಿಡುವ ಪ್ರಯತ್ನ ನಮ್ಮದು. ನೀವು ನಮ್ ಜೊತೆ ಇದ್ರೆ ನಾವು‌ ನಿಮ್ಜೊತೆ…

By admin

ನಿಮ್ಮದೊಂದು ಉತ್ತರ

error: Content is protected !!