ಹೊಸನಗರ; ಶ್ರೀಗಂಧ ಮರಗಳ ಅಕ್ರಮ ಕಡಿತಲೆ, ಸಾಗಾಣಿಕೆ ಮತ್ತು ದಾಸ್ತಾನಿಗೆ ಸಂಬಂಧಿಸಿದಂತೆ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾಲು ಸಹಿತ ಕೃತ್ಯಕ್ಕೆ ಬಳಸಿದ್ದ ಮೂರು ಮೋಟಾರ್ ಬೈಕ್‌ಗಳನ್ನು ವಶಕ್ಕೆ ಪಡೆದು ಒಟ್ಟು ಆರು ಆರೋಪಿಗಳನ್ನು ಬಂಧಿಸುವಲ್ಲಿ ಹೊಸನಗರ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.


ಖಚಿತ ಮಾಹಿತಿ ಮೇರೆಗೆ ತಾಲೂಕಿನ ವಿವಿದೆಡೆ ಕಾರ್ಯಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಅಂದಾಜು ರೂ ೧.೫೦ ಲಕ್ಷ ಮೌಲ್ಯದ ಒಟ್ಟು ೩೯.೨೪೦ ಕೆ.ಜಿ ಶ್ರೀಗಂಧದ ತುಂಡುಗಳ ಜೊತೆಯಲ್ಲಿ ಕೃತ್ಯಕ್ಕೆ ಬಳಸಿದ್ದ ಮೂರು ಬೈಕ್‌ಗಳನ್ನು ಜಪ್ತಿ ಮಾಡಿ ಆರೋಪಿಗಳಾದ ಸುಳ್ಯದ ಅಬ್ದುಲ್ ಖಾದರ್, ಹುಂಚದ ಬಿಲ್ಲೇಶ್ವರ ವಿಜಯ್ ಶೆಟ್ಟಿ, ಯೋಗೇಂದ್ರ ಕಾರ್ಗಲ್, ಮಂಜುನಾಥ ಕಾರ್ಗಲ್ ಹಾಗೂ ಪ್ರಭಾಕರ್, ಹನೀಫ್‌ವಿರುದ್ದ ಅರಣ್ಯ ಇಲಾಖೆ ಕಾಯ್ದೆ ಅಡಿಯಲಿ ಪ್ರಕರಣ ದಾಖಲಿಸಿದ್ದಾರೆ.


ಕಳೆದ ಕೆಲವು ದಿನಗಳ ಹಿಂದಷ್ಟೇ ನಗರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಶ್ರೀಗಂಧ ಸಹಿತ ಆರೋಪಿಗಳನ್ನು ಬಂಧಿಸಿದ್ದ ಪ್ರಕರಣದ ಬೆಳಕಿಗೆ ಬಂದಿದ್ದು ಈ ಕೃತ್ಯದಿಂದಾಗಿ ತಾಲೂಕಿನಲ್ಲಿ ಶ್ರೀಗಂಧ ಚೋರರ ಬಹುದೊಡ್ಡ ಜಾಲವೇ ಸಕ್ರಿಯವಾಗಿದೆ ಎಂಬ ಶಂಕೆ ಅರಣ್ಯ ಇಲಾಖೆ ಸಿಬ್ಬಂದಿಗಳ ನಿದ್ದೆ ಕೆಡಿಸಿದೆ

. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ತಾಲೂಕಿನ ಇತರೆ ಶ್ರೀಗಂಧ ಕಳ್ಳರು, ಸಾಗಾಣಿಕೆದಾರರು ಕುರಿತಂತೆ ಸೂಕ್ತ ಮಾಹಿತಿ ಕಲೆ ಹಾಕುತ್ತಿದ್ದು, ಶೀಘ್ರದಲ್ಲೆ ಇತರೆ ಆರೋಪಿಗಳನ್ನು ಬಂಧಿಸಲು ಕ್ರಮಕ್ಕೆ ಮುಂದಾಗಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!