ಉತ್ತಮ ಪೋಷಕಾಂಶಗಳ ಗೊಬ್ಬರ ಇಲ್ಲಿ ದೊರಕುತ್ತದೆ. ಗೊಬ್ಬರಕ್ಕೆ ತಾವುಗಳು ಇಲ್ಲಿ ಸಂಪರ್ಕಿಸಬಹುದು. ಮೊ: 6369951189
ವಿಶೇಷ ಲೇಖನ: ಗಜೇಂದ್ರ ಸ್ವಾಮಿ
ಶಿವಮೊಗ್ಗ ನಗರ ದಿನೇ ದಿನೇ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚುತ್ತಿದೆ. ವಿಸ್ತೀರ್ಣ ಅಗಲವಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ ಹೆಚ್ಚಾಗುತ್ತಿದೆ. ಬದುಕಿನ ಎಲ್ಲಾ ಮೂಲಭೂತ ಸೌಕರ್ಯಗಳು ಹೆಚ್ಚು ಪ್ರಮಾಣದಲ್ಲಿ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಅಂತೆಯೇ ಶಿವಮೊಗ್ಗ ನಗರದ ತ್ಯಾಜ್ಯ ವಸ್ತುಗಳ ಕಸದ ಸಂಗ್ರಹಣೆ ಹೆಚ್ಚುತ್ತಿದೆ.ನಿತ್ಯ ಕಸ ಸಂಗ್ರಹದ ನಡುವೆ ನಗರದ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಹೈದರಾಬಾದ್ ನ ಸಂಸ್ಥೆ ರೀ ಸನ್ಸ್ಟೇಬಲಿಟಿಬಲ್ ಲಿ., ಹಿಂದಿನ RAMKY ಹೆಸರಿನ ಸಂಸ್ಥೆ ಈಗ ಹೊಸ ಹೊಸ ಪ್ರಯೋಗಗಳ ಮೂಲಕ ಉತ್ಕೃಷ್ಟ ಮಟ್ಟದ ಗೊಬ್ಬರವನ್ನು ನೀಡುವ ಕಾರ್ಯದಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
ಶಿವಮೊಗ್ಗ ಹೊರವಲಯದ ಅನುಪಿನ ಕಟ್ಟೆಯಿಂದ ಸುಮಾರು 3 km ದೂರದಲ್ಲಿ ವಿಶಾಲವಾದ ಜಾಗದಲ್ಲಿ ತ್ಯಾಜ್ಯ ಕಸ ವಿಲೇವಾರಿ ನಿರಂತರವಾಗಿ ನಡೆಯುತ್ತಿದ್ದು, ಅದರ ಸುತ್ತ ಒಂದು ನೋಟ ಅಡಿಸಿದಾಗ ಶಿವಮೊಗ್ಗ ನಗರದ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಆ ಸಂಸ್ಥೆ ಹಾಗೂ ಮಹಾನಗರ ಪಾಲಿಕೆ ಕೈಗೊಂಡ ಕಾರ್ಯ ನಿಜಕ್ಕೂ ಮೆಚ್ಚುಗೆಗೆ ಹಾಗೂ ಶ್ಲಾಘನೆಗೆ ಪಾತ್ರವಾಗಿದೆ.
ಗಿಡ ಮರಗಳಿಗೆ ಸೂಕ್ತವಾದ ಸಿಟಿ ಕಾಂಪೋಸ್ಟ್ ಗೊಬ್ಬರವನ್ನು ತಯಾರು ಮಾಡುವ ಹಾಗೆಯೇ ಬಳಕೆಯಾಗದ ತ್ಯಾಜ್ಯಗಳನ್ನು ಒಂದೆಡೆ ಸಂಗ್ರಹಿಸುವ ಕಾರ್ಯ ಇಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ.
ಶಿವಮೊಗ್ಗ ನಗರದಿಂದ ನಿತ್ಯ ಸುಮಾರು 170 ರಿಂದ 180 ಟನ್ ತ್ಯಾಜ್ಯ ಇಲ್ಲಿಗೆ ತಲುಪುತ್ತಿದೆ. ಇದರಲ್ಲಿ ಶೇಕಡ 50ರಷ್ಟು ಬಳಕೆಗೆ ಬಾರದ ಹಾಗೂ ಪರಿಸರವನ್ನು ಹಾಳು ಮಾಡುವ ಪ್ಲಾಸ್ಟಿಕ್ ವಸ್ತುಗಳೆ ಹೆಚ್ಚಾಗಿರುತ್ತವೆ. ಅವುಗಳನ್ನು ಹೊರತುಪಡಿಸಿ ಹಸಿ ಕಸವನ್ನು ಬಳಸಿಕೊಂಡು ನಾಲ್ಕು ಹಂತ ಹಂತದಲ್ಲಿ ಬದಲಿಸುವ ಮೂಲಕ ತಯಾರಾಗುವ ಗಿಡ ಹಾಗು ಮರಗಳಿಗೆ ಸೂಕ್ತವಾದ ಗೊಬ್ಬರವನ್ನು ನೀಡುವ ತಯಾರಿಸುವ ಪ್ರಕ್ರಿಯೆ ನಡೆಯುತ್ತದೆ.
ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಸುಮಾರು 100 ಮೀಟರ್ ಉದ್ದ ಹಾಗೂ ಅಗಲದ ಜಾಗವನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದು ನಿತ್ಯ ಇಲ್ಲಿ ಎಂಟರಿಂದ ಒಂಬತ್ತು ಟನ್ ಬಳಕೆಗೆ ಬಾರದ ತ್ಯಾಜ್ಯ ಸಂಗ್ರಹವಾಗುತ್ತದೆ. ಸುಮಾರು 25 ರಿಂದ 30 ವರ್ಷಗಳ ನಂತರ ಇವುಗಳನ್ನು ಮರು ಬಳಕೆಗೆ ಬಳಸಬಹುದು ಎಂದು ಮರುಬಳಕೆಗೆ ಉಪಯೋಗಿಸಬಹುದು ಎಂದು ಹೇಳಲಾಗುತ್ತದೆ. ಆನಂತರ ಅದು ಬಿ ಕಾಂಪೋಸ್ಟ್ ಆಗಿ ಮತ್ತೆ ಅದನ್ನು ಗೊಬ್ಬರವಾಗಿ ಬಳಸಿಕೊಳ್ಳಬಹುದು ಎನ್ನುವುದು ಆರೋಗ್ಯ ಇಲಾಖೆಯ ಲೆಕ್ಕಾಚಾರ. ಇಂತಹ ಇಂತಹ ತ್ಯಾಜ್ಯವನ್ನು ಒಂದೆಡೆ ಸಂಗ್ರಹಿಸುವ ಜೊತೆಗೆ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಕಳೆದ 14 ವರ್ಷಗಳಿಂದ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿರುವ ರಿ ಸಬ್ಸ್ಟೇನಬಲಿಟಿ (RAMKY) ಹೈದರಾಬಾದ್ ಸಂಸ್ಥೆ ವೈಜ್ಞಾನಿಕವಾಗಿ ಬದಲಾವಣೆ ಮಾಡುವ ಮೂಲಕ ಹಸಿ ಕಸ ಮತ್ತು ಬಳಕೆಗೆ ಬಾರದ ಕಸವನ್ನು ಮಿಶ್ರಣದಿಂದ ದೂರ ಮಾಡುವ ಮೂಲಕ ಹಸಿಕಸವನ್ನು ತಲಾ ವಾರದಂತೆ ನಾಲ್ಕು ವಾರಗಳ ಕಾಲ ಬದಲಿಸುವ ಮೂಲಕ ನಿರಂತರವಾಗಿ ಸೂರ್ಯನ ಶಾಖ ತಲುಪುವಂತೆ ಮಾಡಿ ತಯಾರು ಮಾಡುವ ಗೊಬ್ಬರ ಅತ್ಯಂತ ವಿಶೇಷವಾದದ್ದು. ಆ ಗೊಬ್ಬರದಲ್ಲಿರುವಂತಹ ಅಂಶಗಳ ಬಗ್ಗೆ ವಿಜನ್ ಲ್ಯಾಬ್ ನಿಂದ ಪರೀಕ್ಷಿಸಿದ್ದು ಅತಿ ಹೆಚ್ಚು ಕಾಂಪೋಸ್ಟ್, ಜಿಂಕ್, ಕಾಪರ್, ನಿಕ್ಕಲ್, ಕೆ20, ಸಿಮ್ ರೇಷನ್ ಸೇರಿದಂತೆ ಹಲವು ಅಂಶಗಳಿರುವ ಗಿಡ ಮರ ಬೆಳೆಯುವ ಸಸಾರಯುಕ್ತ ಪೋಷಕಾಂಶಗಳ ಗೊಬ್ಬರ ದೊರೆಯುತ್ತಿದೆ. ಮಳೆ ಬಂದಾಗ ಗೊಬ್ಬರ ತಯಾರಿಕೆ ಕಡಿಮೆಯಾಗುತ್ತದೆ.
ಅಂತೆಯೇ ಇಲ್ಲಿನ ವಿಲೇವಾರಿ ಬಗ್ಗೆ ಹೇಳಬೇಕೆಂದರೆ ಬಳಕೆ ಮಾಡಿಕೊಳ್ಳಲು ಸಾಧ್ಯವಾಗದ ವಸ್ತುಗಳನ್ನು ಅತ್ಯಂತ ವ್ಯವಸ್ಥಿತವಾಗಿ ಒಂದೆಡೆ ಕ್ರೂಡೀಕರಿಸಿ ಅವುಗಳಿಂದ ಯಾವುದೇ ಕಲ್ಮಶ ಹೋಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಸಂಸ್ಥೆಯು ಹೊತ್ತಿದೆ. ಸಂಸ್ಥೆಯು ಈಗಾಗಲೇ ಸುಮಾರು 25 ರಿಂದ 30 ಕೋಟಿ ಭೂ ವೆಚ್ಚದ ಯಂತ್ರೋಪಕರಣಗಳು, ವ್ಯವಸ್ಥಿತ ಜಾಗದ ಸದ್ಬಳಕೆ ಕಾರ್ಯ ಮಾಡಿಕೊಂಡಿದ್ದು ಬಳಕೆಗೆ ಬಾರದ ವಸ್ತುಗಳನ್ನು ಪ್ರತಿನಿತ್ಯ ಭದ್ರವಾಗಿ ಪರಿಸರ ಕಾಪಾಡುವಂತೆ ಕಾಯ್ದುಕೊಳ್ಳುವ ಹೊಣೆಗಾರಿಕೆಯನ್ನು ಹೊತ್ತಿದೆ. ಅತ್ಯಂತ ವ್ಯವಸ್ಥಿತವಾಗಿ ಈ ಕಾರ್ಯ ನಡೆಯುತ್ತಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡ ಆರೋಗ್ಯ ಇಲಾಖೆಯ ಅಧಿಕಾರಿ ಅಮೋಘ್ ರವರ ವ್ಯವಸ್ಥಿತ ತಂಡ ಇದನ್ನು ನಿತ್ಯ ಗಮನಿಸುತ್ತಿದ್ದು, ಸಂಸ್ಥೆಯ ಪ್ರಮುಖರಾದ ಕೃಷ್ಣ ಅವರ ತಂಡ ಇಡೀ ವ್ಯವಸ್ಥೆಯ ಹೊಣೆಗಾರಿಕೆಯನ್ನು ಹೊತ್ತಿದೆ.
ಅಂತೆಯೇ ಉತ್ತಮ ಪೋಷಕಾಂಶಗಳ ಗೊಬ್ಬರ ಇಲ್ಲಿ ದೊರಕುತ್ತದೆ. ಗೊಬ್ಬರಕ್ಕೆ ತಾವುಗಳು ಇಲ್ಲಿ ಸಂಪರ್ಕಿಸಬಹುದು. ಮೊ: 6369951189