ಶಿವಮೊಗ್ಗ: ಇತ್ತೀಚೆಗೆ ನಡೆದ ಕುವೆಂಪು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಗೆದ್ದು ಕೀರ್ತಿ ತಂದಿದ್ದಾರೆ.
ಹ್ಯಾಮರ್ ಎಸೆತ, ಗುಂಡು ಎಸೆತ, ೧೦೦ ಮೀ ಓಟದ ಸ್ಪರ್ಧೆ, ರಿಲೇ ಮುಂತಾದ ಕ್ರೀಡೆಗಳಲ್ಲಿ ಸುಮಾರು ೧೨ ಕ್ಕೂ ಹೆಚ್ಚು ಚಿನ್ನ, ಬೆಳ್ಳಿ, ಕಂಚು ಪದಕ ಪಡೆದಿದ್ದಾರೆ.
ಮಂಜುಳಾ ಎಂ. ಹ್ಯಾಮರ್ ಎಸೆತದಲ್ಲಿ ಚಿನ್ನ ಮತ್ತು ಬೆಳ್ಳಿ, ಮಹಿಳೆಯರ ರಿಲೇಯಲ್ಲಿ ಮಧುರಾ, ಮಧುಶ್ರೀ. ತೇಜಸ್ವಿನಿ ಸಿ.ಪಿ. ಪ್ರಿಯಾಂಕಾ ಆರ್., ಸಿಂಚನಾ, ರಂಜಿತಾ ಡಿ.ಕೆ., ಕವಿತಾ ಡಿ.ಆರ್. ಅವರು ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿದ್ದಾರೆ.
ಇಂದು ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಸೈಯದ್ ಸನಾವುಲ್ಲಾ, ಸಹ್ಯಾದ್ರಿ ಕಲಾ ಕಾಲೇಜ್ ಕೇವಲ ಸಾಹಿತ್ಯ, ಸಂಸ್ಕೃತಿಗೆ ಮಾತ್ರ ತವರುಮನೆಯಾಗಿಲ್ಲ. ಕ್ರೀಡೆಗೂ ತವರುಮನೆಯಾಗಿದೆ. ಈ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಹೆಸರು ಪಡೆದಿದ್ದಾರೆ.
ಹಾಗೆಯೇ ವಿಜ್ಞಾನ ಮತ್ತು ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಮಿನುಗುತ್ತಿದ್ದಾರೆ. ಸಹ್ಯಾದ್ರಿ ಕಾಲೇಕ್ ಕ್ರೀಡೆಗೆ ಆದ್ಯತೆ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್. ಮಂಜುನಾಥ್, ಪ್ರಾಧ್ಯಾಪಕ ಡಾ. ಅವಿನಾಶ್, ದೈಹಿಕ ಶಿಕ್ಷಣ ನಿರ್ದೇಶಕಿ ಪ್ರತಿಮಾ ಬಿ.ಎನ್., ಗೋವಿಂದಾಚಾರ್, ಪ್ರಾಧ್ಯಾಪಕ ಡಾ.ಕೆ.ಜಿ. ವೆಂಕಟೇಶ್ ಇದ್ದರು.