ಶಿವಮೊಗ್ಗ,ಡಿ.08: ನಗರದ ಸುವರ್ಣಸಂಸ್ಕೃತಿ ಭವನದಲ್ಲಿ ಚರಕ ಆಯುರವೇದಿಯನ್ಸ್ ಫೆÇೀರಮ್ ಹಾಗೂ ಕರ್ನಾಟಕ ಗೌರ್ನ್ಮೆಂಟ್ ಆಫೀಸರ್ಸ್ ಅಸೋಸಿಯೇಶನ್ ವತಿಯಿಂದ ಇತ್ತೀಚೆಗೆ ಧೀಪ್ರದಾಯ ಎಂಬ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.ಚರಕ ಆಯುರವೇದಿಯನ್ಸ್ ಫೆÇೀರಮ್ ಸಂಘವು ಧನ್ವಂತರಿ ಜಯಂತಿ ಪ್ರಯುಕ್ತ ಕಾರ್ತೀಕ ಮಾಸದಲ್ಲಿ ಮೂರು ವರ್ಷಗಳಿಂದ ಧೀಪ್ರದಾಯ ಎಂಬ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಲಿದೆ.
ಈ ಬಾರಿಯ ಕಾರ್ಯಕ್ರಮದಲ್ಲಿ ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಶಿವಮೊಗ್ಗ,ಸರ್ಕಾರಿ ಆಯುರ್ವೇದ ಕಾಲೇಜ್ ಶಿವಮೊಗ್ಗ, ಟಿ.ಎಂ.ಎ.ಇ.ಎಸ್. ಆಯುರ್ವೇದ ಕಾಲೇಜ್ ಭದ್ರಾವತಿ, ಎ.ಎಲ್.ಎನ್ ರಾವ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಕೊಪ್ಪ, ಶ್ರೀ ಧನ್ವಂತರಿ ಆಯುರ್ವೇದ ಕಾಲೇಜ್ ಸಿದ್ದಾಪುರ, ಶ್ರೀ ರಾಘವೇಂದ್ರ ಆಯುರ್ವೇದ ಕಾಲೇಜು ಮಲ್ಲಾಡಿಹಳ್ಳಿ, ಅಶ್ವಿನಿ ಆಯುರ್ವೇದ ಕಾಲೇಜ್ ದಾವಣಗೆರೆ, ತಪೆÇೀವನ ಆಯುರ್ವೇದ ಕಾಲೇಜ್ ದಾವಣಗೆರೆ ಈ ಆಯುರ್ವೇದ ಮಹಾವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದರು.
ಟಿ.ಎಂ.ಎ.ಇ.ಎಸ್. ಆಯುರ್ವೇದ ಕಾಲೇಜಿನ ಆಡಳಿತಾಧಿಕಾರಿಯಾದ ಜಿ ಹಿರೇಮಠ್, ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಹರ್ಷ ಪುತ್ತೂರಾಯ, ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಸ್ತ್ರೀ ರೋಗ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಆಶಾ ಹೊಸೂರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಸ್ಪರ್ಧೆಯಲ್ಲಿ ಟಿ.ಎಂ.ಎ.ಇ.ಎಸ್. ಕಾಲೇಜ್ ನ ವಿಧ್ಯಾರ್ಥಿಗಳು ಗೋಲ್ಡ್‍ನ್ ರೋಲಿಂಗ್ ಟ್ರೋಫಿ ವಿಜೇತರಾದರು. ಸಮಾರೋಪ ಸಮಾರಂಭ ನಡೆಯಿತು.
ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಮ್ . ಜಿ. ಎಸ್. ದೊಡ್ಮನಿ , ಬಾಪೂಜಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಪಂಕಜ್ ಪ್ರಸಾದ್ ಶ್ರೀವಾಸ್ತವ್ ಮತ್ತು ಬಾಪೂಜಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪಂಚಕರ್ಮ ವಿಭಾಗದ ಮುಖ್ಯಸ್ಥರಾದ ಡಾ. ಜಿತೇಂದ್ರ ಬಿಸಾಟಿ ಉಪಸ್ಥಿತರಿದ್ದರು.