ಶಿವಮೊಗ್ಗ, ಡಿ.01:
ನಿತ್ಯ ಕೆಲಸದ ಒತ್ತಡದಲ್ಲಿ, ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ ಮುಗ್ನರಾಗಿ ಹಿರಿಯ ಅಧಿಕಾರಿಗಳ ಆದೇಶ ಪಾಲನೆಯಲ್ಲಿ ಮನೆ ಮಠ ಮರೆತು, ಹಬ್ಬ ಹರಿದಿನಗಳನ್ನು ದೂರ ತಳ್ಳಿ ಕರ್ತವ್ಯದಲ್ಲಿ ನಿರತವಾಗುವ ಪೊಲೀಸರಿಗೆ ಸಿಗುವ ಒಂದೇ ಒಂದು ಕುಣಿದಾಡುವ ನಕ್ಕು ನಲಿಯುವ ಒಂದೇ ಒಂದು ಅವಕಾಶವೆಂದರೆ ಅದುವೇ ಪೊಲೀಸ್ ಕ್ರೀಡಾಕೂಟ ಎಂದರೆ ತಪ್ಪಾಗಲಿಕ್ಕಿಲ್ಲ.


ಕ್ರೀಡೆಯಲ್ಲಿ ಬೆಳೆದವರಿಗೆ ಸಾಕಷ್ಟು ಅವಕಾಶಗಳು ಎಲ್ಲಾ ಇಲಾಖೆಗಳಲ್ಲಿ ಸಿಗುತ್ತವೆ. ಈ ವಿಷಯದಲ್ಲಿ ಪೊಲೀಸ್ ಇಲಾಖೆ ಅಷ್ಟೊಂದು ದೊಡ್ಡ ಪ್ರಮಾಣದ ಅವಕಾಶವನ್ನು ನೀಡುವುದು ಕಷ್ಟ. ಪ್ರಸಕ್ತ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಓರ್ವ ಕ್ರೀಡಾಪಟುವಾಗಿದ್ದು, ಈ ಬಾರಿಯ ಶಿವಮೊಗ್ಗ ಪೊಲೀಸ್ ಕ್ರೀಡಾಕೂಟ 2023ರ ಸಂಭ್ರಮದ ನಡುವೆ ಜೊತೆಯಾಗಿದ್ದರು. ನಡುವೆ ಅವರ ಒತ್ತಡದ ಜವಾಬ್ಧಾರಿಯನ್ನೂ ನಿಭಾಯಿಸುತ್ತಿದ್ದರು.
ಇಲ್ಲಿ ಸೋಲು ಗೆಲುವನ್ನು ಸಮಾನವಾಗಿ ಪ್ರೀತಿಸಿದ ಅವಕಾಶ ನೀಡಿ ತಮ್ಮ ಇಡೀ ಸಿಬ್ಬಂದಿ ವರ್ಗವನ್ನು ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಅತ್ಯಂತ ಪ್ರೀತಿಯಿಂದ ನೋಡಿಕೊಂಡದ್ದು ವಿಶೇಷ.


ಪ್ರತಿ ವರ್ಷ ನಡೆಯುವ ಈ ಕ್ರೀಡಾಹಬ್ಬದಲ್ಲಿ ಪೊಲೀಸರು ಅತಿ ಹೆಚ್ಚು ಪ್ರಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ಕಾರಣವೆಂದರೆ ಅವರು ನಿತ್ಯ ರಸ್ತೆಯಲ್ಲಿ ಕುಡಿಯುವ ಮಾಲಿನ ಹೊಗೆ, ಸಾವಿನ ಮನೆಗೆ ಹೋಗುವ ಅನಿವಾರ್ಯತೆ, ಕೊಲೆ, ಸುಲಿಗೆ, ದರೋಡೆ, ಡಕಾಯಿತಿಯಂತಹ ವಿಷಯದ ಆಳದ ಒಳಗೋಗಿ ಅದರೊಳಗಿನ ಸತ್ಯಾಂಶವನ್ನು ಹುಡುಕುವ ಜವಾಬ್ದಾರಿ ನಡುವೆ ದಿನ ಕಳೆದು ಹೋಗಿರುತ್ತವೆ.
ಭ್ರಷ್ಟ ಬದುಕನ್ನು ಪತ್ತೆ ಹಚ್ಚುವ, ಸಮಾಜದ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕುವ ಕಾರ್ಯ ಮಾಡುತ್ತಲೆ ದಿನ ಸವೆಸುತ್ತಿರುತ್ತಾರೆ.


ಅಂತೆಯೇ ಕಳೆದ ಎರಡು ದಿನಗಳ ಹಿಂದೆ ಆರಂಭಗೊಂಡ ಕ್ರೀಡಾಕೂಟದ ಕೊನೆಯ ಹಂತದ ಫೈನಲ್ ಪಂದ್ಯಗಳು ನಡೆಯುವ ಹೊತ್ತಿನಲ್ಲಿ ತುಂಗಾತರಂಗ ಗಮನಿಸಿದಾಗ ಆಟವಾಡಿದ ಪೊಲೀಸರಲ್ಲಿ ಉತ್ಸಾಹ ಕರಗಿಲಿಲ್ಲ. ಖುಷಿಯಿಂದ ಆಟವನ್ನು ಅನುಭವಿಸಿದರು. ಗೆದ್ದವರನ್ನು ಪ್ರಶಂಸಿಸಿದರು. ಕುಣಿದು ಕುಪ್ಪಳಿಸಿದರು.
ಈ ಆಟವನ್ನು ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಉಪಾಧ್ಯಕ್ಷರಾದ ಬಾಲರಾಜ್ ಸೇರಿದಂತೆ ಅಧಿಕಾರಿ ವಲಯ ಅವರ ಜೊತೆ ಬೆರೆತು ಆತ್ಮೀಯವಾಗಿ ಕಿಡಾಕೂಟವನ್ನು ಖುಷಿಯ ಹಂತಕ್ಕೆ ಬರುವಂತೆ ಮಾಡಿದ್ದು ವಿಶೇಷ.
ಒಟ್ಟಾರೆ ಕ್ರೀಡಾಕೂಟದಲ್ಲಿ ತನ್ನ ತಾಲೂಕು ಗೆಲ್ಲಬೇಕು. ತಾನು ಎಂಬುದಕ್ಕಿಂತ ತಾವು ಸಂಭ್ರಮಿಸಬೇಕು ಎಂಬ ಮುಕ್ತ ವಾತಾವರಣ ಇಲ್ಲಿತ್ತು. ಇಂತಹದೊಂದು ಅವಕಾಶ ಕ್ರೀಡಾಕೂಟಗಳಿಂದ ಮಾತ್ರ ಸಿಗಲು ಸಾಧ್ಯ ಅಲ್ಲವೇ?
ಕ್ರೀಡಾಕೂಟದ ವಿಶೇಷ ಪೋಟೋಗಳಿದ್ದರೆ ಇಲ್ಲಿಗೆ ಕಳಿಸಿ 9448256183.
ವಾಲಿಬಾಲ್ ಕೊನೆಯ ಪಂದ್ಯ ಶಿವಮೊಗ್ಗ ಹಾಗೂ ಭದ್ರಾವತಿ ನಡುವೆ ನಡೆಯುತ್ತಿತ್ತು ಈ ಸಂದರ್ಭದಲ್ಲಿ ಭದ್ರಾವತಿ ತಂಡ ಭರ್ಜರಿ ಜಯ ಸಾಧಿಸಿತು. ಆಗ ಇಡೀ ಭದ್ತಾವತಿ ಪೊಲೀಸರು ಸಂಭ್ರಮಿಸಿದ್ದು ಅತ್ಯಂತ ರೋಚಕವಾಗಿತ್ತು.

By admin

ನಿಮ್ಮದೊಂದು ಉತ್ತರ

error: Content is protected !!