ಶಿವಮೊಗ್ಗ, ನವೆಂಬರ್ 28,
ಕೌಶಲ್ಯಾಭಿವೃದ್ದಿ ಇಲಾಖಾ ವ್ಯಾಪ್ತಿಯ ಸಿಡಾಕ್ ಸಂಸ್ಥೆಯ ಮೂಲಕ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಉದ್ಯಮಶೀಲತೆ ಬಗ್ಗೆ ಹತ್ತು ದಿನಗಳ ಉಚಿತ ತರಬೇತಿ ನೀಡಲು ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕನಿಷ್ಟ 21 ಹಾಗೂ ಗರಿಷ್ಟ 50 ವರ್ಷದೊಳಗಿನ ಪಿಯುಸಿ ಮತ್ತು ಮೇಲ್ಪಟ್ಟವರು ನ.30 ರೊಳಗೆ ಲಿಂಕ್ https://www.scsptsp.karnataka.gov.in/BMS/CDOC/EDPRegistrationForm.aspx ರಲ್ಲಿ ಅರ್ಜಿ ಸಲ್ಲಿಸಬಹುದು.
ತರಬೇತಿಯಲ್ಲಿ ಉದ್ದಿಮೆ, ವಾಣಿಜ್ಯ ಚಟುವಟಿಕೆಗಳನ್ನು ಪ್ರಾರಂಭಿಸಲು ಉತ್ತೇಜನ ಮತ್ತು ಮಾರ್ಗದರ್ಶನ ನೀಡಲಾಗುವುದು. ಸರ್ಕಾರದ ವಿವಿಧ ಇಲಾಖೆಗಳಿಂದ ಪ.ಜಾತಿ/ಪ.ಪಂಗಡದವರಿಗೆ ಉದ್ದಿಮೆಗಳನ್ನು ಸ್ಥಾಪಿಸಲು ನೀಡಲಾಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಲಾಗುವುದು. ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್‍ಗಳು ಸೇರಿದಂತೆ ವಿವಿಧ
ಹಣಕಾಸು ಸಂಸ್ಥೆಗಳಿಂದ ನೀಡಲಾಗುವ ಸಾಲ ಸೌಲಭ್ಯದ ಮಾಹಿತಿ ನೀಡಲಾಗುವುದು. ಜಿಲ್ಲಾ ಕೇಂದ್ರದಲ್ಲಿ ಹತ್ತು ದಿನದ ಉಚಿತ ತರಬೇತಿ ಹಾಗೂ ಪ್ರತಿ ಅಭ್ಯರ್ಥಿಗೆ ಪ್ರಯಾಣ ಭತ್ಯೆಯಾಗಿ ಹತ್ತು ದಿನಗಳಿಗೆ ರೂ.1000/- ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.