ಸಾಗರ : ಇಲ್ಲಿನ ಸಹ್ಯಾದ್ರಿ ಕೆನೆಲ್ ಸಂಸ್ಥೆ ಮತ್ತು ಪಶುಪಾಲನಾ ಇಲಾಖೆ ಆಶ್ರಯದಲ್ಲಿ ದಿ. ಕೆ.ಎನ್.ಶರ್ಮ ಸ್ಮರಣಾರ್ಥ ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಒಳಗೊಂಡ ‘ಮಲೆನಾಡು ಪೆಟ್ ಷೋ – ೨೦೨೪ನ್ನು ಜ. ೭ರಂದು ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.


ಪ್ರದರ್ಶನವು ಬೆಳಿಗ್ಗೆ ೧೦ಗಂಟೆಯಿಂದ ಆರಂಭಗೊಳ್ಳಲಿದೆ. ರಾಜ್ಯದ ೨೨ ತಳಿಯ ೨೦೦ಕ್ಕೂ ಶ್ವಾನಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದೆ. ಅಪರೂಪದ ತಳಿಗಳಾದ ಫ್ರೆಂಚ್, ಮ್ಯಾಸ್ಟಿಫ್, ಸೈಬಿರಿಯನ್ ಹಸ್ಕಿ, ಪಾಕಿಸ್ತಾನ್ ಬುಲ್ಲಿ, ಸೈಂಟ್‌ಬರ್ನಾಡ್, ರಾಟ್‌ವೀಲರ್, ಗ್ರೇಟ್‌ಡೆನ್, ಪಗ್, ಕಾಕರ್ ಸ್ಪೇನಿಯಲ್, ಬೀಗಲ್ ಹಾಗೂ ದೇಶಿ ತಳಿಗಳಾದ ಮುಧೋಳ್ ಹೌಂಡ್, ಕ್ಯಾರವಾನ್ ಹೌಂಡ್, ರಾಜಪಾಳ್ಯಂ ತಳಿಗಳು ಪಾಲ್ಗೊಳ್ಳುತ್ತದೆ. ಶ್ವಾನ ತಜ್ಞರಿಂದ ಶ್ವಾನ ತರಬೇತಿ, ನಿರ್ವಹಣೆ, ರೋಗಗಳ ಹತೋಟಿ, ಸಂತ್ರಾನ ನಿಯಂತ್ರಣ, ಮಾರಣಾಂತಿಕ ರೇಬಿಸಿ ರೋಗ ನಿಯಂತ್ರಣದ ಬಗ್ಗೆ ಉಪನ್ಯಾಸ ಇರುತ್ತದೆ.


ಜ. ೬ ನೊಂದಣಿಗೆ ಕೊನೆಯ ದಿನಾಂಕವಾಗಿರುತ್ತದೆ. ಪ್ರದರ್ಶನದ ದಿನದಂದು ಯಾವುದೇ ನೊಂದಣಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಡಾ. ಶ್ರೀಪಾದ ರಾವ್ ಎನ್.ಎಚ್.,

(ಮೊ.೯೪೪೮೦೦೭೫೪೨), ಗೋಪಾಲಕೃಷ್ಣ (ಮೊ. ೯೪೪೯೫೨೩೨೫೯), ಮುಖ್ಯ ಪಶು ವೈದ್ಯಾಧಿಕಾರಿಗಳು ಸಾಗರ (ದೂ. ೦೮೧೮೩ – ೨೨೬೬೦೩) ಸಂಪರ್ಕಿಸಲು ಸಂಸ್ಥೆ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!