ಕರ್ಪ್ಯೂ ಸಡಿಲಿಕೆಗೆ ಸಂಸದ ರಾಘವೇಂದ್ರ ಮನವಿ?
ಶಿವಮೊಗ್ಗ, ಡಿ.09:
ಶಿವಮೊಗ್ಗ ನಗರದಲ್ಲಿ ಮತ್ತೆ ನಿಷೇಧಾಜ್ಞೆ, ಕರ್ಪ್ಯೂ ಮುಂದುವರೆಸುವ ಮೂಲಕ ಬಡ, ಮಧ್ಯಮವರ್ಗದ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ದಿನಗೂಲಿ ಆಧಾರದಲ್ಲಿ ಬದುಕುವ ಅಸಬಲರ ಆಕ್ರೋಶಕ್ಕೆ ಸರ್ಕಾರ ತುತ್ತಾಗಿದೆ. ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಕಳೆದ ಐದು ದಿನಗಳಿಂದ ನಿಷೇಧಾಜ್ಞೆ ಹಾಗೂ ಕರ್ಪ್ಯೂ ನೆಪದಲ್ಲಿ ಜನರ ಯಾವುದೇ ನಿತ್ಯದ ಕಾರ್ಯಗಳಲ್ಲಿ ತೊಡಗದಂತೆ ಮಾಡಿ,ಈಗ ಮತ್ತೆ ಮುಂದುವರೆಸುವ ಮೂಲಕ ಆತಂಕದ ವಾತಾವರಣ ಸೃಷ್ಟಿಸುತ್ತಿರುವುದು ಈ ವರ್ತನೆಗೆ ಕಾರಣವಾಗಿದೆ.
ನೆಮ್ಮದಿಯಾಗಿರುವ ಸ್ಥಳಗಳಲ್ಲೂ ಸಹ ಶಿವಮೊಗ್ಗ ಜಿಲ್ಲೆಗೆ ಬಂದ ಹೊರಜಿಲ್ಲೆಗಳ ಪೊಲೀಸರು ಅದರಲ್ಲೂ ಡಿ. ಆರ್ ಮೊದಲಾದ ಪೊಲೀಸರು ಬೆಳಿಗ್ಗೆಯಿಂದಲೇ ವಾಹನಗಳಲ್ಲಿ ಮೈಕ್ ಹಿಡಿದು ಅತ್ಯಂತ ಅಸಭ್ಯವಾಗಿ ಅಶ್ಲೀಲ ಪದಗಳನ್ನು ಬಳಸಿ ಅಂಗಡಿ ಬಾಗಿಲುಗಳನ್ನು ಮುಚ್ಚಿಸುವ ದೃಶ್ಯ ನಿಜಕ್ಕೂ ಖಂಡನೀಯ.
ಹೀಗೊಂದು 10 ನಿಮಿಷ ಸಿಕ್ಕರೆ ಸಾಕು ಚಿಕ್ಕದೊಂದು ವ್ಯಾಪಾರ ಮಾಡಿಕೊಂಡು ಇಂದಿನ ತುತ್ತು ಸಂಪಾದಿಸಿಕೊಳ್ಳಬೇಕೆಂದು ತರಕಾರಿ, ಹಣ್ಣು, ಹೋಟೆಲ್ ಗಳು, ಕ್ಯಾಂಟಿನ್ ಗಳು, ಬೀದಿಬದಿಯ ವಸ್ತುಗಳ ಮಾರಾಟಗಾರರಿಗೆ ಈ ಪೊಲೀಸರ ಅಡ್ಡಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದು ತಿಂಗಳಿನಿಂದ ಕೊರೋನಾ ಹಿಂಸೆಯಲ್ಲಿ ತಮ್ಮನ್ನು ತಾವೇ ಗಳಿಸಿಕೊಂಡಿದ್ದ ಅದರಲ್ಲೂ ನಿತ್ಯದ ದುಡಿಮೆ ನಂಬಿ ಬದುಕುವ ಜನರ ಮರು ಬದುಕು ಸೃಷ್ಟಿಯಾಗುವ ಹೊತ್ತಿನಲ್ಲಿ ಶಿವಮೊಗ್ಗದಂತಹ ನಗರದಲ್ಲಿ ಮಾತ್ರ ಕೋಮುದಳ್ಳುರಿಯ ಹೆಸರಲ್ಲಿ ಕಿಡಿಗೇಡಿಗಳ ವರ್ತನೆಯಿಂದ ಸೃಷ್ಟಿಯಾದ ಅವಾಂತರಕ್ಕೆ ಈಗ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಹೊಸ ಬಗೆಯ ಬದುಕು ಕಟ್ಟಿಕೊಳ್ಳಲು ಹಾಗೆಯೇ ನಿತ್ಯದ ತುತ್ತಿನ ಸಮಸ್ಯೆಯಿಲ್ಲದೆ ಬದುಕುತ್ತಿದ್ದಾಗ ಇಂತಹ ನಿಷೇಧಾಜ್ಞೆ ಆದೇಶ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್ ಸೇರಿದಂತೆ ಹಲವೆಡೆ ಈ ಘಟನೆಗಳಿಗೆ ಪುಷ್ಟಿ ನೀಡುವ ಘಟನೆಗಳಿದ್ದರೆ ಅಲ್ಲಿ ಮಾತ್ರ ಇಂತಹ ಕ್ರಮ ಕೈಗೊಳ್ಳಲಿ. ಎಲ್ಲಾ ಕಡೆ ಈ ನಿರ್ಧಾರ ಎಷ್ಟರ ಮಟ್ಟರ ಮಟ್ಟಿಗೆ ಸರಿ….?
ಶಿವಮೊಗ್ಗ ನಗರದ ಇಂತಹ ನಿಷೇದಾಜ್ಞೆ ಎಷ್ಟರಮಟ್ಟಿಗೆ ಸರಿಯಾದುದು. ಇದನ್ನು ಜಾರಿಗೊಳಿಸುವ ಉದ್ದೇಶವಾದರೂ ಏಕೆ? ಅಹಿತಕರ ಎನಿಸುವ ಘಟನೆಗಳಿದ್ದರೆ ಸಮಗ್ರ ವಿವರಣೆಗಳನ್ನು ಜನತೆಗೆ ನೀಡಲಿ. ಅಗತ್ಯವಿದ್ದರೆ ನಿಷೇದಾಜ್ಞೆಯನ್ನು ಮುಂದುವರೆಸಲಿ. ಶಿವಮೊಗ್ಗ ನಗರ ನೆಮ್ಮದಿಯಾಗಿ ಇದೆ ಯಾವುದೇ ಅಹಿತಕರ ಘಟನೆ ಲವ್ ಸಹ ನಡೆದಿಲ್ಲ ಆದರೂ ಸಹ ಇಂತಹ ಆದೇಶಗಳು ಏಕೆ ಅಗತ್ಯ ಎಂದು ಜನತೆ ಪ್ರಶ್ನಿಸಿದ್ದಾರೆ.
ಒಟ್ಟಾರೆ ಇಂದಿನ ನಿಷೇಧಾಜ್ಞೆ ಮುಂದುವರಿಕೆ ಸಚಿವ ಕೆ. ಎಸ್. ಈಶ್ವರಪ್ಪ ಅವರ ಆದೇಶದಂತೆ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇಲ್ಲಿ ಸಚಿವರು ನಿತ್ಯದ ತುತ್ತಿಗೆ ದುಡಿಯುವ ಜನರ ಕಷ್ಟಗಳನ್ನು ಗಮನಿಸುವ ಅಗತ್ಯವಿದೆ ಅಲ್ಲವೇ?
ಶಿವಮೊಗ್ಗ ನಗರದಲ್ಲಿ ಬಿಗಿಬಂದೋಬಸ್ತ್ ನೀಡಬೇಕಾದ ಪೊಲೀಸ್ ಇಲಾಖೆ ಇಲ್ಲಿ ಜನರಿಂದ ನಿಂದಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದಾದರೂ ಏಕೆ? ಹಿರಿಯ ಅಧಿಕಾರಿಗಳ, ಜನಪ್ರತಿನಿಧಿಗಳ ಮಾತು ಕೇಳಬೇಕಾದ ಪೊಲೀಸರು ಬಳಸುವ ಭಾಷೆಯಲ್ಲಿ ವ್ಯತ್ಯಯವಾದರೂ ಸಹ ಅದು ಕಾನೂನು ಕಾಪಾಡುವ ಉದ್ದೇಶದಿಂದ ಎಂಬುದನ್ನು ಅರಿತುಕೊಳ್ಳಬೇಕು. ಅಂಗಡಿ ಬಾಗಿಲುಗಳನ್ನು ಮುಚ್ಚಿಸುವ ಮೂಲಕ ನಿತ್ಯದ ದುಡಿಮೆ ಮಾಡಿ ಬದುಕು ಕಟ್ಟಿಕೊಳ್ಳುವ ನಗರದ ಬಹುತೇಕ ಮಧ್ಯಮ ವರ್ಗದ ಜನರ ಆಕ್ರೋಶಕ್ಕೆ ಕಾರಣವಾಗಿ ಪೊಲೀಸರು ದುರ್ಗಿಗುಡಿ, ಬಾಲರಾಜ್ ಅರಸ್ ರಸ್ತೆ, ವಿನೋಬನಗರ, ಲಕ್ಷ್ಮಿ ಟಾಕೀಸ್ ಮೊದಲಾದ ಕಡೆ ಜನರಿಂದ ನಿಂದನೆಗೆ ಗುರಿಯಾಗಬೇಕಾದ ಸನ್ನಿವೇಶ ಸೃಷ್ಟಿಯಾಗಿದ್ದು ದುರಂತ
ಯಾವುದು ಬಿಹೆಚ್ ರಸ್ತೆಯಲ್ಲಿ ವ್ಯಾಪಾರಿಗಳು ಒಟ್ಟಾಗಿ ಪೊಲೀಸರ ವಿರುದ್ಧ ಹರಿಹಾಯ್ದ ಘಟನೆ ಮರೆಯಾಗುವ ಮುನ್ನವೇ ಘಟನೆಯನ್ನು ಸಮಗ್ರವಾಗಿ ಹತ್ತಿಕ್ಕಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಜೊತೆಗೆ ಜನರನ್ನು ಜನರ ಬದುಕನ್ನು ಕಟ್ಟಿಕೊಡುವ ಉಳಿಸುವ ಕೆಲಸವನ್ನು ಸರ್ಕಾರ, ಜನಪ್ರತಿನಿಧಿಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮಾಡಬೇಕೆಂಬುದು ಸಾರ್ವಜನಿಕರ ಒಕ್ಕೊರಲ ದ್ವನಿ.
ನಿಷೇದಾಜ್ಞೆ ಮುಂದುವರಿಕೆ ವಿರುದ್ದ ಜನಾಕ್ರೋಶ ಮುಂದುವರಿಕೆಗೆ ಸಂಸದರ ಅಸಮದಾನ
ಕಳೆದ ಶುಕ್ರವಾರ ನಡೆದ ಘಟನೆಯಿಂದ ಶಿವಮೊಗ್ಗ ನಗರ ವ್ಯಾಪ್ತಿಯ 3 ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ.ವ್ಯಾಪಾರ. ವಹಿವಾಟು ಬಂದ್ ಮಾಡಲಾಗಿದೆ.ಇದರಿಂದ ಕೂಲಿ.ಕಾರ್ಮಿಕ. ಬೀದಿ ಬದಿ ವ್ಯಾಪಾರ ಸೇರಿದಂತೆ ಅನೇಕ ಬಡವರು ತೊಂದರೆ ಅನುಭವಿಸುತ್ತಿದ್ದು. ಸೆಕ್ಷನ್ ಮುಂದುವರಿಕೆಯಿಂದ ಆಡಳಿತರೂಡ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ.ಆದ್ದರಿಂದ ಸದ್ಯ ಪರಿಸ್ಥಿತಿಯನ್ನು ಪೋಲಿಸ್ ಇಲಾಖೆ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಸೆಕ್ಷನ್ ತೆಗೆದು ಹಾಕಲು ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಗಳಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.