ಬೆಂಗಳೂರು,ಡಿ.08:

ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಚುನಾವಣೆ ಘೋಷಣೆಯ ನಂತ್ರ, ಹೈಕೋರ್ಟ್ ತಡೆ ನೀಡಿತ್ತು. ಪರಿಷ್ಕೃತ ಚುನಾವಣಾ ದಿನಾಂಕ ಘೋಷಿಸುವಂತೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ಪರಿಷ್ಕೃತ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ಡಿಸೆಂಬರ್ 15ಕ್ಕೆ ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಘೋಷಿಸಲಿದೆ.
ಈ ಕುರಿತಂತೆ ನಿವೃತ್ತ ಉಪ ನಿರ್ದೇಶಕರು ಹಾಗೂ ರಾಜ್ಯ ಚುನಾವಣಾಧಿಕಾರಿಗಳು ಸಿ.ಬಿ.ಜಯರಂಗ ಪರಿಷ್ಕೃತ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ್ದು, ತಾಲೂಕು ಕಾರ್ಯಕಾರಿ ಸಮಿತಿಗೆ ಚುನಾವಣೆ ದಿನಾಂಕ 9-12-2020 ರಿಂದ 15-12-2020ರವರೆಗೆ, ತಾಲೂಕು, ಜಿಲ್ಲಾ, ರಾಜ್ಯ ಪದಾಧಿಕಾರಿಗಳ ಚುನಾವಣೆ ದಿನಾಂಕ 19-12-2020ರಿಂದ 29-12-2020ರವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಹೀಗಿದೆ ತಾಲೂಕು ಕಾರ್ಯಕಾರಿ ಸಮಿತಿಯ ಪರಿಷ್ಕೃತ ಚುನಾವಣಾ ವೇಳಾಪಟ್ಟಿ

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ 09-12-2020ರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆ

ನಾಮಪತ್ರಗಳ ಪರಿಶೀಲನೆ ದಿನಾಂಕ 09-12-2020ರಂದು ಸಂಜೆ 4 ಗಂಟೆಯಿಂದ ನಡೆಯಲಿದೆ.

ನಾಮಪತ್ರಗಳನ್ನು ವಾಪಾಸ್ ಪಡೆಯಲು ಕೊನೆ ದಿನಾಂಕ 10-12-2020 ಬೆಳಿಗ್ಗೆ 10 ರಿಂದ ಸಂಜೆ 4 ಆಗಿದೆ.

ಮತದಾನ ನಡೆಯುವ ದಿನಾಂಕ 15-12-2020ರಂದು ಬೆಳಿಗ್ಗೆ 8.30ರಿಂದ ಸಂಜೆ 4 ಗಂಟೆಯವರೆಗೆ ಆಗಿದೆ.

ಫಲಿತಾಂಶ ಪ್ರಕಟಣೆ ದಿನಾಂಕ 15-12-2020ರಂದು ಮತಏಮಿಕ ಮುಗಿದ ನಂತ್ರ ಘೋಷಣೆಯಾಗಲಿದೆ.

ಹೀಗಿದೆ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಪದಾಧಿಕಾರಿಗಳ ಪರಿಷ್ಕೃತ ಚುನಾವಣಾ ವೇಳಾ ಪಟ್ಟಿ

ನಾಮಪತ್ರ ಸಲ್ಲಿಕೆ ಆರಂಭ ದಿನಾಂಕ 19-12-2020

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ 20-12-2020ರಂದು ಸಂಜೆ 4.30

ನಾಮಪತ್ರಗಳ ಪರಿಶೀಲನೆ ದಿನಾಂಕ 20-12-2020ರಂದು ಸಂಜೆ 4.30ರ ನಂತ್ರ ನಡೆಯಲಿದೆ

ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನಾಂಕ 21-12-2020ರ ಸಂಜೆ 4 ಗಂಟೆಯಾಗಿದೆ.

ಮತದಾನ ದಿನಾಂಕ 29-12-2020ರಂದು ಬೆಳಿಗ್ಗೆ 10.30ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
ಮತಗಳ ಏಣಿಕೆ ಮತ್ತು ಫಲಿತಾಂಶ ದಿನಾಂಕ 29-12-2020ರಂದು ಸಂಜೆ 5 ಗಂಟೆಯಿಂದ ಮತಎಣಿಕೆಯ ನಂತ್ರ ಫಲಿತಾಂಶ ಪ್ರಕಟಗೊಳ್ಳಲಿದೆ.
ಈ ಮೇsಲ್ಕಂಡ ಪರಿಷ್ಕೃತ ವೇಳಾ ಪಟ್ಟಿಯಂತೆ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ನಡೆಯಲಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!