ಬಿಂದು ಆರ್. ಡಿ. ರಾಂಪುರ
ಉಪನ್ಯಾಸಕರು, ಲೇಖಕರು,
ಬೆಳಗಾವಿ

ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ಹೇಳಿ ಬಯಸುತ್ತೆನೆ. ಕಾರಣ ತಮ್ಮ ಅನುಯಾಯಿಗಳಿಗೆ ಹೇಳಿದ ಮಾತನ್ನು ತಿರುಚಿ, ಇಡಿ ವ್ಯವಸ್ಥೆಯನ್ನು ಅವ್ಯವಸ್ಥೆ ಮಾಡಿದವರು ಯಾರೆಂದು ಮತ್ತೆ ಹೇಳುವ ಅಗತ್ಯವಿಲ್ಲ ಎನಿಸುತ್ತದೆ. ಅವರ ಕಾಯಕವೇ ಅದೇ ಆಗಿದೆ. ಈ ವಿಷಯವನ್ನು ಮತ್ತೆ ಪ್ರಸ್ತಾಪಿಸಲು ಕಾರಣ ‘ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ’ ಯವರನ್ನು ಬುದ್ದಿಗೆ ಬುದ್ದಿ ಹೇಳುವವರು ಯಾರು? ಎಂದು ಪ್ರಶ್ನೆ ಮಾಡಿದರು. ತರಳಬಾಳು ಪರಂಪರೆಯ ಗುರುಗಳನ್ನು ಪ್ರಶ್ನೆ ಮಾಡುವ ಹಕ್ಕು ಈ ಮಠದ ಪ್ರತಿ ಭಕ್ತರಿಗೂ ಇದೆ. ನಾನೇ ಮಠದ ಗುರುಗಳನ್ನು ಪ್ರಶ್ನೆ ಮಾಡಿದ್ದೆನೆ. ಆದರೆ ಗುರುವನ್ನು ವಿರೋಧಿಸುವುದಿಲ್ಲ ಕಾರಣ ಮಕ್ಕಳು ತಂದೆಯನ್ನು ಪ್ರಶ್ನೆ ಮಾಡುತ್ತಾರೆ ತಂದೆಯನ್ನು ವಿರೋಧ ಮಾಡುವುದಿಲ್ಲ. ಆ ಸಂಸ್ಕಾರ ನಮಗೆ ಇಲ್ಲ. ನಮ್ಮ ತರಳಬಾಳು ಜಗದ್ಗುರುಗಳು ಸಹ ಭಕ್ತರ ಪಾಲಿಗೆ ತಂದೆಯ ಸಮಾನವಾಗಿದ್ದಾರೆ. ಇದನ್ನು ತಿರುಚಿ ಬರೆಯುವ ಹೀನ ಬುದ್ದಿ ಮತ್ತು ಕೈಗಳು ಇವೆಯೆಂದು ನಮಗೂ ಗೊತ್ತು. ಇಂತಹ ಕೀಳತನ ನಮಗೆ ಇಲ್ಲ. ಒಂದು ಪತ್ರಿಕೆಯ ಸಂಪಾದಕರಾಗಿ ಬುದ್ದಿ ಪದದ ಅರ್ಥ ಗೊತ್ತಿಲ್ಲವೆಂದರೆ ನಮಗೂ ನಗು ಬರುತ್ತದೆ.


ಬುದ್ದಿ ಎಂದರೆ ಬದ್ದತೆ ಎಂದರ್ಥ ತಮ್ಮದೇ ತತ್ವ ಸಿದ್ಧಾಂತ ಆದರ್ಶಗಳನ್ನು ಅಳವಡಿಸಿಕೊಂಡು, ಸರ್ವ ಜನಾಂಗದ ಬಾಳಿಗೆ ಬೆಳಕಾಗುವ ವ್ಯಕ್ತಿಗಳನ್ನು ಬುದ್ಧಿಯೆಂದು ಕರೆಯುತ್ತಾರೆ. ಆ ಬದ್ದತೆ ನಮ್ಮ ತರಳಬಾಳು ಜಗದ್ಗುರು ಶಾಖಾಮಠ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳಲ್ಲಿ ಅತಿ ಚಿಕ್ಕ ವಯಸ್ಸಿನಿಂದ ಬಲ್ಲೆನು. ತುಂಬಾ ಹತ್ತಿರದಿಂದ ನೋಡಿದವಳು, ಆದರೆ ಅಂತಹ ಆತ್ಮೀಯತೆ ಇರಲಿಲ್ಲ, ಕಾರಣ ತರಳಬಾಳು ಜಗದ್ಗುರುಗಳ ಮುಂದೆ ನಿಂತು ಮಾತಾಡುವಷ್ಟು ಪ್ರಬುದ್ಧತೆ, ಮತ್ತು ಧೈರ್ಯ ನಮ್ಮಲ್ಲಿ ಇರಲಿಲ್ಲ, ಆದರೆ ವಿನಯ ಪೂರ್ವಕವಾದ ಭಕ್ತಿ, ಸದಾ ಎದೆಯಲ್ಲಿ ತುಂಬಿತ್ತು, ಸಿರಿಗೆರೆಯಲ್ಲಿ ಪದವಿ ಓದುವಾಗ ಶರಣಧಾರಿತ ನಾಟಕಗಳನ್ನು ಕಲಿಸುತ್ತಿದ್ದರು, ಅವುಗಳ ಹಿಂದೆ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ಮಾರ್ಗದರ್ಶನವಿತ್ತು, ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಆರ್ಶೀವಾದವಿತ್ತು. ಶೂನ್ಯಸಂಪಾದನೆ, ವಿಶ್ವಬಂಧು ಮರಳಸಿದ್ದರು, ಕಲ್ಯಾಣ ಕ್ರಾಂತಿ, ಉರಿಲಿಂಗಪೆದ್ದಿ ಮುಂತಾದ ನಾಟಕಗಳು ಪ್ರತಿ ವಿದ್ಯಾರ್ಥಿಗಳ ಮನದಲ್ಲಿ ಶರಣತತ್ವವನ್ನು ಬಿತ್ತುತ್ತಿದ್ಜವು. ಇವುಗಳನ್ನು ನೋಡಿದ ಯಾವ ವಿದ್ಯಾರ್ಥಿಯೂ ಜಾತಿ ಬೇಧ ಮಾಡುತ್ತಿರಲಿಲ್ಲ. ಇಂದಿಗೂ ನನ್ನ ಎಲ್ಲಾ ವರ್ಗದ ಸ್ನೇಹಿತರು ತರಳಬಾಳು ಜಗದ್ಗುರುಳೆಂದರೆ ದೇವರಂತೆ ಪೂಜಿಸುತ್ತಾರೆ. ವರ್ಗ ಬೇಧ ಇಲ್ಲದೆ ಎಲ್ಲರನ್ನೂ ಪ್ರೀತಿಸುವ, ಆಶ್ರಯ ನೀಡುವ ಗುಣ ಪೂಜ್ಯ ಡಾ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳವರದ್ದು. ತರಳಬಾಳು ಮಠದ ಭಕ್ತರಲ್ಲಿನ ಒಗ್ಗಟ್ಟು ಪ್ರಪಂಚದ ಯಾವ ದೇಶದ ಸೈನಿಕರಲ್ಲೂ ಇಲ್ಲ. ಆ ಪರಂಪರೆಯು ಅಷ್ಟು ಶ್ರೇಷ್ಠವಾಗಿದೆ.


ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ನೇರ ನಿಷ್ಠುರ ನಿಖರವಾಗಿರುತ್ತಾರೆ. ಎಷ್ಟೋ ಬಾರಿ ನಾವು ಪದವಿ ಓದುವಾಗ ನೇರವಾಗಿ ನೋಡಿದ ದೃಶ್ಯಗಳು ಇವೆ. ವಿಶ್ವೇಶ್ವರ ಭಟ್ ರವರು ತರಳಬಾಳು ಜಗದ್ಗುರುಗಳ ಬಗ್ಗೆ ಬರೆಯುವಷ್ಟು ಅರ್ಹತೆ ಇಲ್ಲ, ಕಾರಣ ಡಾ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ದಲಿತರಿಗೆ ಲಿಂಗದೀಕ್ಷೆ, ತಂದೆ ತಾಯಿ ಒಪ್ಪಿಗೆಯ ಜೊತೆ ಅಂತರ್ಜಾತಿ ವಿವಾಹ, ಬಡ ಮಕ್ಕಳಿಗೆ ಶಿಕ್ಷಣ, ಮುಂತಾದ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದವರು, ಸಾಮಾಜಿಕ ಕ್ರಾಂತಿಯ ಹರಿಕಾರ ಎಂದರೆ ತಪ್ಪಾಗಲಾರದು. ಈ ರೀತಿಯ ಬದಲಾವಣೆಯ ಕಾರ್ಯಗಳನ್ನು ಯಾವ ಸಂಘಟನೆಗಳು, ಮಠದ ಗುರುಗಳು ಮಾಡಿದ್ದಾರ ಹೇಳಿ? ಊರಿಗೆಲ್ಲ ಬುದ್ದಿ ಹೇಳುವವರು ತಮ್ಮನ್ನು ತಾವು ಒಮ್ಮೆ ಅವಲೋಕಿಸಿ ಕೊಳ್ಳಿ. ನೀವೆಷ್ಟು ಈ ಸಮಾಜದಲ್ಲಿ ಬದಲಾವಣೆ ತಂದಿದ್ದರೆಂದು! ನಮ್ಮ ಶ್ರೇಷ್ಠ ತರಳಬಾಳು ಪರಂಪರೆ ಬಗ್ಗೆ ಮಾತಾಡಲು ಯೋಗ್ಯತೆ ಅರ್ಹತೆ ಬೇಕು. ನಮ್ಮಲ್ಲಿ ಸಾವಿರ ಸಮಸ್ಯೆ ಇರಬಹುದು ಆದರೆ ಕೋಟಿ ಮನಸು ಗುರು ಪರಂಪರೆ ಪರ ನಿಲ್ಲುತ್ತದೆ. ನೀವು ಇದನ್ನು ಬಳಕೆ ಮಾಡಿಕೊಂಡು ತರಳಬಾಳು ಪರಂಪರೆ ಅವಹೇಳನ ಮಾಡಿದರೆ ನಾವೇನು ಉತ್ತರ ಕೊಡುವ ಅಗತ್ಯವಿಲ್ಲ ಎಕೆಂದರೆ ನಿಮ್ಮಂತಹ ಎಷ್ಟೋ ಜನ ನಮ್ಮ ಮಠದಲ್ಲಿ ಪುಕ್ಕಟೆ ತಿಂದು, ಶಿಕ್ಷಣ ಪಡೆದು ಹೋಗಿದ್ದಾರೆ. ನಿಮ್ಮಂತವರಗೆ ಉದ್ಯೋಗ ನೀಡಿದ್ದಾರೆ.


ಇನ್ನು ಆಧುನಿಕ ಮಾಧ್ಯಮಗಳ ಕಾಲದಲ್ಲಿ ನಶಿಸುತ್ತಿರುವ ರಂಗಭೂಮಿ ಕಲೆಯನ್ನು ಪೋಷಿಸಿ, ರಂಗಭೂಮಿ ಕಲಾವಿದರಿಗೆ ಭವಿಷ್ಯ ರೂಪಿಸಿಕೊಡುವ ಶಿವಸಂಚಾರ ಕಲಾಸಂಘದ ಬಗ್ಗೆ ಹೇಳುವಷ್ಟು ನೀವೇನು ಸಾಧನೆ ಮಾಡಿಲ್ಲ. ಈ ಸಾಧನೆಗೆ ಅವರಿಗೆ 2004 ರಲ್ಲೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದರು. ಯಾವ ಪಕ್ಷದ ಪರ ಮಾತಾಡಿ ಪ್ರಶಸ್ತಿ ಪಡೆಯುವ ಆ ಆಸೆ ನಮ್ಮ ಗುರುಗಳಿಗೆ ಇಲ್ಲ. ಎಕೆಂದರೆ ತರಳಬಾಳು ಜಗದ್ಗುರು ಪರಂಪರಯ ಎಲ್ಲಾ ಗುರುಗಳು ‘ಭಕ್ತರ ಪಾಲಿಗೆ ಶಾಶ್ವತ ಹೃದಯಸಿಂಹಾದೀಶನ’ರು ಈ ಪ್ರಶಸ್ತಿ ನಾವು ಅವರಿಗೆ ನೀಡಿದ್ದೇವೆ. ಬುದ್ದಿ ಪದಕ್ಕೆ ಆರ್ಥ ಗರ್ಭಿತವಾಗಿ ಸಮಾಜಕ್ಕೆ ಬೆಳಕಾಗಿದ್ದಾರೆ. ನಿಮ್ಮ ಯಾವ ಪಕ್ಷ ಇಂತಹ ಪ್ರಶಸ್ತಿ ನೀಡಲು ಸಾಧ್ಯ? ನಿಮಗೆ ತಿಳಿದಿರಲಿ ತರಳಬಾಳು ಪರಂಪರೆಯ ಎಲ್ಲಾ ಸಂತರ ಅತಿ ಒರಟಾಗಿ ಹೇಳವುದಾದರೆ ಕೈ, ಬಾಯಿ, ಕಚ್ಚೆ ಈ ಮೂರು ಪರಿಶುದ್ಧವಾಗಿದೆ. ಇದನ್ನು ನೇರವಾಗಿ ಹೇಳುವ ಆ ಧೈರ್ಯ ನಮ್ಮಲ್ಲಿ ಇದೆ. ನಿಮ್ಮ ಯಾವ ಮಹಾನ್ ಧರ್ಮ ರಕ್ಷಕರ ಮಠದಲ್ಲಿ ಎಲ್ಲಾ ಜಾತಿಯ ಜನರಿಗೆ ಸಹ ಪಂಕ್ತಿ ಭೋಜನ ಇದೆ ? ಎಲ್ಲಾ ಜಾತಿಯ ಮಕ್ಕಳಿಗೆ ಸಮಾನತೆಯ ಶಿಕ್ಷಣ ಇದೆ ? ಹೋಗಲಿ ; ಗರ್ಭ ಗುಡಿಯ ಪೂಜೆಗೆ ಅವಕಾಶ ಇದೆ ? ಆದರೆ ನಮ್ಮ ತರಳಬಾಳು ಮಠ ಮತ್ತು ಶಾಖಾ ಮಠಗಳಲ್ಲಿ ಇದೆಲ್ಲಾ ಇದೆ. ಎಲ್ಲಾ ಜಾತಿಯ ಜನರಿಗೆ ಶಿಕ್ಷಣ ಅನ್ನ ದಾಸೋಹ, ಐಕ್ಯಮಂಟಪದಲ್ಲಿ ಪೂಜೆ ಮಾಡುವ ಅಧಿಕಾರ, ಜಾನಪ ಕಲೆಗಳ ಉಳಿಸುವಿಕೆ , ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಗರವೇ ಇದೆ. ಹೇಳುತ್ತಾ ಹೋದರೆ ಮುಗಿಯುವುದಿಲ್ಲ, ಈ ನಮ್ಮ ತರಳಬಾಳು ಪರಂಪರೆಯ ಎಲ್ಲಾ ಗುರುಗಳು ಸಾವನ್ನು ಲೆಕ್ಕಿಸದೇ ಸಮಾಜದಲ್ಲಿ ಬದಲಾವಣೆ ತರಲು ನಿಂತ ನಾಯಕರು. ಅಷ್ಟು ಸುಲಭವಲ್ಲ ಎಂ. ಎಂ. ಕಲ್ಬುರ್ಗಿ ಅವರ ತರಹ ಸಂಚು ರೂಪಿಸಿ ಕೂಲೆ ಮಾಡುವಷ್ಟು, ನಮ್ಮ ಮಠದ ಪರಂಪರೆಯ ಯಾವುದೇ ಗುರುವನ್ನು ಮುಟ್ಟಿದರು; ಇಲ್ಲಿ ಬಳೆಗಳು ಸಹ ಖಡ್ಗ ಹಿಡಿದು ನಿಲ್ಲುತ್ತವೆ. ಆ ರೀತಿಯ ಒಗ್ಗಟ್ಟು ಆಭಿಮಾನ ನಮ್ಮಲ್ಲಿ ರಕ್ತಗತವಾಗಿ ಬಂದಿದೆ. ಸಂವಿಧಾನ ಪ್ರಶ್ನೆ ಮಾಡುವ ಹಕ್ಕು, ಮತ್ತು ಟೀಕೆ ಮಾಡುವ ಹಕ್ಕು ನೀಡಿದೆ. ಇವು ನಾಗರಿಕ ಹಕ್ಕುಗಳಾಗಿವೆ. ಯಾವುದೇ ಧರ್ಮವನ್ನು ಪ್ರಶ್ನೆ ಮಾಡುವ, ಅನುಸರಣೆ ಮಾಡುವ, ಗೌರವಿಸವ ಎಲ್ಲಾ ಹಕ್ಕುಗಳು ದೇಶದ ಜನರಿಗೆ ಇದೆ ಹಾಗಾಗಿ ತಮ್ಮ ಅನುಯಾಯಿಗಳಿಗೆ ಕೋಟಿ ಮಾತುಗಳನ್ನು ಹೇಳುವ ಅಧಿಕಾರ ನಮ್ಮ ಗುರುಗಳಿಗೆ ಇದೆ. ನಿಮ್ಮ ಆಚಾರ ವಿಚಾರ ಸಂಸ್ಕೃತಿ ಬಗ್ಗೆ ಬೇರೆಯವರು ಪ್ರಶ್ನೆ ಮಾಡಿದರೆ ನೀವು ಹೇಗೆ ಇದು ನಮ್ಮ ಸಂಪ್ರದಾಯವೆಂದು!! ಬೊಬ್ಬೆ ಹೊಡೆಯುತ್ತಿರೋ! ಹಾಗೆ ; ನಮ್ಮ ಗುರುಗಳು ನಮಗೆ ತಮ್ಮದೇ ಆದಂತಹ ಹಿತನುಡಿ ಮತ್ತು ‘ಬಸವ ತತ್ವ’ ಹೇಳುತ್ತಾರೆ. ಪರಿಪಾಲನೆ ನಮಗೆ ಬಿಟ್ಟಿದ್ದು, ಮಸಿ ಬಳಿಯುವ ಕೈಗಳ ವ್ಯಕ್ತಿತ್ವ ಸಹ ಅತ್ಯಂತ ದೊಡ್ಡ ಮಸಿ ಜೀವನ ನೆಡೆಸಿರುತ್ತಾರೆ. ಇನ್ನೂಬ್ಬರಿಗೆ ಬುದ್ದಿ ಹೇಳುವಷ್ಟುಯೇನು ಬದ್ದತೆ ಮತ್ತು ಯೋಗ್ಯವಾದ ಜೀವನ , ಚರಿತ್ರೆ ಇರುವುದಿಲ್ಲ. ಇದು ಮನಗಂಡರೆ ಉತ್ತಮ; ಇಲ್ಲದೇ ಹೋದರೆ ತಮ್ಮ ಮಸಿಯ ಜೀವನವು ಹೊರಗಿನ ಪ್ರಪಂಚಕ್ಕೆ ತಿಳಿಯುವಂತೆ ಆಗುತ್ತದೆ.


ಒಟ್ಟಿನಲ್ಲಿ ಸಮಾಜದಲ್ಲಿ ನಿಂದಕರು ಇರಬೇಕು, ನಿಂದನೆ ಇಲ್ಲದೇ ಧರ್ಮ ಗೆಲ್ಲಲು ಸಾಧ್ಯವಿಲ್ಲ. ಬಸವಣ್ಣನಿಗೆ ಬಿಡದ ನಿಂದನೆ ನಾವೆಲ್ಲರೂ ಯಾವ ಲೆಕ್ಕ ನೀವೇ ಹೇಳಿ? ಧರ್ಮ ರಕ್ಷಕರು ಬಸವಣ್ಣ ಅವರ ಸಮಾನತೆಯ ತತ್ವವನ್ನೇ ಒಪ್ಪಿಕೊಳ್ಳುವುದಿಲ್ಲವೆಂದ ಮೇಲೆ ಯಾವ ಧರ್ಮ ರಕ್ಷಣೆ ಮಾಡಿ ಎನು ಪ್ರಯೋಜನ? ಅದೆಷ್ಟೋ ಧರ್ಮ ರಕ್ಷಕರು ತಮ್ಮ ಮನೆಗಳಲ್ಲಿ ಇಂದಿಗೂ ದಲಿತರಿಗೆ ಪ್ರವೇಶ ನೀಡಿಲ್ಲ! ಇವರಿಂದ ಯಾವ ಧರ್ಮ ರಕ್ಷಣೆ ಸಾಧ್ಯ? ಗಣಪತಿಯನ್ನು ಕುಡಿದು ತೂರಾಡುತ್ತಾ ; ದೇವರನ್ನು ಪೂಜಿಸುವವರಿಂದ ಯಾವ ಧರ್ಮ ರಕ್ಷಣೆ ಸಾಧ್ಯ? ದೇವರ ಒಲುಮೆ ದಿವ್ಯವಾದ ಭಕ್ತಿ ಸಾಕು ಇದು ಅದೆಷ್ಟು ಧರ್ಮ ರಕ್ಷಕರಿಗೆ ಗೊತ್ತು? ಎಲ್ಲವನ್ನೂ ಪ್ರಶ್ನಿಸಬಾರದು ಮಾಡಿದರೆ ಧರ್ಮ ದ್ರೋಹಿ ಪಟ್ಟ ಕಟ್ಟುತ್ತಾರೆ. ಈಗ ನಮ್ಮ ಗುರುಗಳಿಗೆ ಧರ್ಮ ದ್ರೋಹಿ ಪಟ್ಟ ಕಟ್ಟಿದ್ದಾರೆ. ಆದರೆ ಧರ್ಮ ರಕ್ಷಕರು ಇಂದಿಗೂ ಜಾತಿ ಪದ್ಧತಿ, ದೇವದಾಸಿ ಪದ್ಧತಿ, ದೇವರ ಹೆಸರಿನಲ್ಲಿ ಪ್ರಾಣಿ, ಪಕ್ಷಿ ಬಲಿ, ಅತ್ಯಾಚಾರ ವಿರುದ್ಧ ಹೋರಾಟ ಮಾಡಲೇ ಇಲ್ಲ. ಇದನ್ನೇ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ತಮ್ಮ ಭಕ್ತರಿಗೆ ನೂರಾರು ದೇವರ ಪೂಜೆಗಿಂತ ಸರ್ವರನ್ನು ಗೌರವಿಸಿ, ಪ್ರೀತಿಸಿದಾಗ ದೇವರು ತಾಾಗೇ ಒಲಿಯುತ್ತಾನೆಂದರು. ಅವರು ಗಣಪತಿ ವಿರೋಧ ಮಾಡಲಿಲ್ಲ, ಗಣಪತಿ ಹೆಸರಿನಲ್ಲಿ ಮಾಡುವ ಕಂದಾಚಾರ ವಿರೋಧ ಮಾಡಿದರು. ಇದರ ಬದಲು ವೀರಗಾಸೆ ಭಜನೆ, ಯಕ್ಷಗಾನ, ಜಾನಪದ ಕಲೆಗಳ ಮೇಳ ಮಾಡಿಯೆಂದು ಯಾವ ಧರ್ಮ ರಕ್ಷಕರು ಹೇಳುವುದಿಲ್ಲ, ಮೋಜು ಮಸ್ತಿ ಮಾಡಲು ಇರುವುದು ಇದೊಂದೇ ಹಬ್ಬ. ಇದರಿಂದ ದೇವರ ಒಲುಮೆ ಹೇಗೆ ಸಾಧ್ಯ ಎಂದರು. ಇದನ್ನು ಅರ್ಥ ಮಾಡಿಕೊಳ್ಳವ ಯೋಗ್ಯತೆ ಇಲ್ಲದವರು ‘ತೋಚಿದ್ದು ಗೀಚಿ’ ಸಮಾಜದಲ್ಲಿ ಅಶಾಂತಿ ಉಂಟು ಮಾಡಿ, ನಾವು ಧರ್ಮ ರಕ್ಷಕರೆಂದು ಬಿಂಬಿಸಿಕೊಂಡರು. ಆದರೇನು ತರಳಬಾಳು ಪರಂಪರೆಯ ಗುರುಳಿಗೆ ಎಷ್ಟೇ ಮಸಿ ಬಳಿಯುವ ಕೆಲಸ ಯತ್ನ ಮಾಡಿದರು ಅವರು ತಮ್ಮ ಸೇವೆ ನಿಲ್ಲಿಸುವುದಿಲ್ಲ.
‘ಶರಣರು ನಾಳೆ ಬರುವುದು; ಇಂದೇ ಬರಲಿ’ ಎಂಬ ತತ್ವದಡಿ ಸಾಗುತ್ತಿದ್ದಾರೆ. ಇವರಿಗೆ ಸಾವಿನ ಭಯವಿಲ್ಲ ಎಕೆಂದರೆ 12 ನೇ ಶತಮಾನದಿಂದಲೇ ಸಾವನ್ನು ಗೆಲ್ಲುತ್ತಾ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಾ ಬಂದವರು ಅಂತವರಲ್ಲಿ ನಮ್ಮ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಒಬ್ಬರು. ಕೊಳಕು ಹೀನ ಮನಸು ಮತ್ತು ಮಸಿ ಕೈಗಳು ಅವರನ್ನು ಅಳೆಯಲು ಸಾಧ್ಯವಿಲ್ಲ. ರೇಪಿಸ್ಟ್ ಸ್ವಾಮೀಜಿ ಪರ ಧ್ವನಿ ಎತ್ತದ ಧರ್ಮ ರಕ್ಷಕರು ಈಗ ಧ್ವನಿ ಎತ್ತುತ್ತಾರೆ ಎಂದರೆ ಅವರ ನಿಜವಾದ ಧರ್ಮ ರಕ್ಷಣೆ ಇಲ್ಲಿಯೇ ಕಾಣುತ್ತದೆ.


ಈ ಲೇಖನ ಬರೆಯಲು ಕಾರಣ ತರಳಬಾಳು ಪರಂಪರೆಯ ಮಗಳಾಗಿ ನಾನೆಂದೂ ನನ್ನ ಮಠದ ಗುರುಗಳ ಪರ ನಿಲ್ಲುತ್ತೆನೆ. ಕಾರಣ ಹುಟ್ಟಿನಿಂದ ನೋಡಿದ್ದೇನೆ ಈ ಮಠದ ಪರಂಪರೆಯ ಗುರುಗಳ ಚಾರಿತ್ರಿಕ ನಡವಳಿಕೆ ಪರಿಶುದ್ಧವಾಗಿದೆ. ಸ್ವಾಂತಂತ್ರ್ಯ ಪೂರ್ವದಲ್ಲೇ ಹೆಣ್ಣು ಮಕ್ಕಳಿಗೆ ಶಿಕ್ಷಣ ಅನ್ನ ದಾಸೋಹ ಮಾಡಿದ್ದಾರೆ. ಆ ಶಿಕ್ಷಣ, ಅನ್ನ ದಾಸೋಹ ಪಡೆದವರಲ್ಲಿ ನಾನು ಒಬ್ಬಳು. ಪ್ರತಿ ರಾಜಕಾರಣಿಗಳು ಇದೇ ಗುರುವಿನ ಆಶೀರ್ವಾದಕ್ಕೆ ಮುಂದಿರುತ್ತಾರೆ. ಇದು ನಿಮ್ಮ ಧರ್ಮ ರಕ್ಷಕರಿಗೆ ಇನ್ನೂ ಆರ್ಥ ಆಗಿಲ್ಲ ಎಂಬುದೇ ನಿಮ್ಮ ದಡ್ಡತನ.
ನಿಮ್ಮ ಲೇಖನಿ ಸಮಾಜದಲ್ಲಿ ಗಲಭೆ ಹಬ್ಬಿಸಬಹುದು ಅಷ್ಟೇ. ಆದರೆ ನಮ್ಮ ಮಠದ ಗುರು ಪರಪರೆಯ ಮೇಲಿನ ಭಕ್ತಿ ಯುದ್ಧವನ್ನೇ ಮಾಡಬಹುದು. ಸಾವಿಗೂ ಹೆದರದ ಸರ್ವ ಜನಾಂಗದ ಸಮುದಾಯವಿದು. ತಲೆಯಲ್ಲಿ ಬದ್ದಿ ಇಲ್ಲದವರಿಗೆ ತರಳಬಾಳು ಆರ್ಥಗುವುದಿಲ್ಲ.

“ಚಿರಮಭಿವರ್ದತಾಮ್ ತರಳಬಾಳು ಸಂತಾನ ಶ್ರೀಃ”

By admin

ನಿಮ್ಮದೊಂದು ಉತ್ತರ

You missed

error: Content is protected !!