ಶಿವಮೊಗ್ಗ, ನ.೦೮:
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯವನ್ನು ಮೇಲ್ದರ್ಜೆಗೇರಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಪರಿ ವರ್ತಿಸಲು ಸಾಧ್ಯವಿರುವ ಎಲ್ಲಾ ಕ್ರಮಗ ಳನ್ನು ಕೈಗೊಂಡು ಜನಸಾಮಾನ್ಯರಿಗೆ ಅತ್ಯಂತ ಕಡಿಮೆ ದರದ ಹಾಗೂ ಗುಣಮ ಟ್ಟದ ಚಿಕಿತ್ಸಾ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಸಿಮ್ಸ್‌ನ ಸಭಾಂಗಣ ದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀ ಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅಲ್ಲಿನ ಆಡಳಿತಾಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡುತ್ತಿದ್ದರು. ಹೃದಯ, ಕಿಡ್ನಿ, ಮೆದುಳು ಮುಂತಾದ ಗಂಭೀರ ಸ್ವರೂಪದ ಕಾಯಿಲೆಗಳಿಗೆ ಜನಸಾಮಾನ್ಯರು ಖರ್ಚುಗ ಳಿಗೆ ಹೆದರಿ ಚಿಕಿತ್ಸೆ ತೆಗೆದುಕೊಳ್ಳದೇ ನರಳಾ ಡುತ್ತಿದ್ದಾರೆ. ಅಂತಹವರಿಗೆ ಸುಲಭವಾಗಿ ಚಿಕಿತ್ಸೆ ದೊರೆಯುವಂತಾಗಬೇಕು ಎಂದರು.
ಸಿಮ್ಸ್‌ಗೆ ಅಗತ್ಯವಿರುವ ಬಹುತೇಕ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾ ಗಿದೆ. ಅಗತ್ಯವಿರುವ ಇನ್ನಷ್ಟು ಭೌತಿಕ ಕಟ್ಟಡ ಗಳು, ಮಾನವ ಸಂಪನ್ಮೂಲ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಇನ್ನಷ್ಟು ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಿ, ಜನಸಾಮಾನ್ಯರಿಗೆ ಉತ್ತಮ ದರ್ಜೆಯ ಹಾಗೂ ಗುಣಮಟ್ಟದ ಸೇವೆಗ ಳನ್ನು ಒದಗಿಸುವಂತೆ ಮಾಡುವ ಆಶಯ ತಮ್ಮದಾಗಿದೆ. ಆದ್ದರಿಂದ ಸಿಮ್ಸ್‌ನ ಆಡಳಿ ತಾಧಿಕಾರಿಗಳು ಅಗತ್ಯವಿರುವ ಕಟ್ಟಡಗಳು, ಮಾನವ ಸಂಪನ್ಮೂಲ ಹಾಗೂ ಯಂತ್ರಗ ಳನ್ನು ಕಲ್ಪಿಸಿಕೊಳ್ಳಲು ಕ್ರಿಯಾಯೋಜ ನೆಯನ್ನು ರೂಪಿಸಿ, ಸರ್ಕಾರಕ್ಕೆ ಸಲ್ಲಿಸುವಂತೆ ಅವರು ಸೂಚಿಸಿದರು.
ಸಿಮ್ಸ್‌ನಲ್ಲಿ ಚಿಕಿತ್ಸೆಗೆ ಆಗಮಿಸುವ ವಿವಿಧ ಕಾಯಿಲೆಗಳನ್ನು ಗುರುತಿಸುವ ಅನೇಕ ಯಂತ್ರಗಳು, ಪರೀಕ್ಞಾ ಲ್ಯಾಬ್‌ಗ ಳನ್ನು ಇನ್ನಷ್ಟು ಉನ್ನತೀಕರಿಸುವುದರ ಜೊತೆಗೆ ಸಿಬ್ಬಂಧಿಗಳನ್ನು ನಿಯೋಜಿಸ ಬೇಕಾದ ಅಗತ್ಯವಿದೆ ಎಂದ ಅವರು, ಕೊರೋನ ಮಾದರಿಯಲ್ಲಿಯೇ ಕೆ.ಎಫ್. ಡಿ.ಯಂತಹ ಮಾರಣಾಂತಿಕ ಕಾಯಿಲೆಗಳ ಪ್ರಾಥಮಿಕ ಸಂಶೋಧನೆಗಳು ಇಲ್ಲಿಯೇ ನಡೆಯುವಂತಾಗಬೇಕು. ಮುಂದಿನ ೨೦ ವರ್ಷಗಳ ದೂರದೃಷ್ಠಿಯನ್ನು ಇಟ್ಟು ಕೊಂಡು ಕಾರ್ಯಯೋಜನೆ ರೂಪಿಸು ವಂತೆ ಅವರು ಸಲಹೆ ನೀಡಿದರರು.
ಪ್ರಸ್ತುತ ಸಿಮ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳು, ಪ್ರಶಿಕ್ಷಣಾರ್ಥಿಗಳು, ಆರೋಗ್ಯ
ಸಿಬ್ಬಂಧಿಗಳಿಗೆ ಇನ್ನಷ್ಟು ವಸತಿ ಗೃಹಗಳ ಅಗತ್ಯವಿದೆ. ಅದಕ್ಕಾಗಿ ಹೊಸ ದೊಂದು ವಸತಿ ಸಮುಚ್ಛಯ ನಿರ್ಮಿಸುವ ಅಗತ್ಯವಿದೆ. ಇನ್ನೂ ಹಲವು ವೈದ್ಯಕೀಯ ವಿಭಾಗಗಳಿಗೆ ಪ್ರತ್ಯೇಕ ಹಾಗೂ ಹೆಚ್ಚುವರಿ ಕಟ್ಟಡಗಳ ಅಗತ್ಯವಿದೆ. ಡಿ.ಗ್ರೂಪ್ ನೌಕರರ ಸೇವೆ ತುರ್ತಾಗಿ ಬೇಕಾಗಿದೆ ಎಂದು ಸಿಮ್ಸ್ ಆಡಳಿತಾಧಿಕಾರಿಗಳು ಸಭೆಯಲ್ಲಿ ಸಚಿವರ ಗಮನಸೆಳೆದರು. ಆಗ ಈ ಎಲ್ಲ ಸೌಲಭ್ಯ ವನ್ನು ಆದ್ಯತೆಯ ಮೇರೆಗೆ ಒದಗಿಸಲು ಕ್ರಮ ವಹಿಸುವುದಾಗಿ ಹೇಳಿದರು.
ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಪ್ರಸ್ತಾವನೆ ಜೊತೆಗೆ ತುರ್ತು ಹಾಗೂ ತೀವ್ರ ನಿಗಾ ಘಟಕದ ಸ್ಥಾಪನೆಗೂ ಕ್ರಿಯಾಯೋಜ ನೆಯನ್ನು ರೂಪಿಸಿ ಸಲ್ಲಿಸುವಂತೆ ಅವರು ಸಿಮ್ಸ್ ಆಡಳಿತಾಧಿಕಾರಿಗಳಿಗೆ ಸೂಚಿಸಿದರು.
ಮೆಗಾನ್‌ನಲ್ಲಿ ದಾಖಲಾಗುವ ಸಿಬ್ಬಂಧಿಗಳ ಜೊತೆಗೆ ಆರೈಕೆಗೆಂದು ಬರುವವರಿಗಾಗಿ ಅತ್ಯಂತ ಕಡಿಮೆ ಹಾಗೂ ಸುಸಜ್ಜಿತ ವಸತಿ ಸೌಲಭ್ಯವನ್ನು ಒದಗಿಸಲು ಪ್ರತ್ಯೇಕ ಕೊಠಡಿಗಳ ಅಗತ್ಯವಿರುವುದನ್ನು ತಿಳಿದಿದ್ದು, ಅದಕ್ಕಾಗಿ ತಾತ್ಕಾಲಿಕ ವ್ಯವಸ್ಥೆ ಒದಗಿಸಲು ಹಾಗೂ ಜನರ ಅನುಕೂಲ ಕ್ಕಾಗಿ ಗ್ರಂಥಾಲಯ ಸೌಲಭ್ಯವನ್ನು ಕಲ್ಪಿಸಲು ಸೂಚಿಸಿರುವುದಾಗಿ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ, ಸಿಮ್ಸ್‌ನ ನಿರ್ದೇಶಕ ಡಾ||.ವಿರೂಪಾಕ್ಷಪ್ಪ, ಮೆಗ್ಗಾನ್‌ನ ಜಿಲ್ಲಾ ಅಧೀಕ್ಷಕ ತಿಮ್ಮಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ ಸೇರಿದಂತೆ ಸಿಮ್ಸ್‌ನ ವಿವಿಧ ವಿಭಾಗಗಳ ವೈದ್ಯಾಧಿ ಕಾರಿಗಳು, ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.