ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ಆಶ್ವಾಸನೆಗಳೆಲ್ಲ ಹುಸಿಯಾಗಿದ್ದು, ಆಡಳಿತದ ಚಕ್ರದಲ್ಲಿ ಗಾಳಿಯೇ ಇಲ್ಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.


ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರಚನೆ ಆಗಿ, ಆರು ತಿಂಗಳು ಕಳೆದಿವೆ. ಅವರು ಕೊಟ್ಟ ಭರವಸೆಗಳೆಲ್ಲ ಹುಸಿಯಾಗಿವೆ. ಗ್ಯಾರಂಟಿಯ ಯಾವ ಆಶ್ವಾಸನೆಗಳೂ ಈಡೇರಿಲ್ಲ. ಅವರದೇ ಪಕ್ಷದ ಸಚಿವರು ಮತ್ತು ಶಾಸಕರ ಮೇಲೆ ಹಿಡಿತವಿಲ್ಲ. ಉಚಿತ ಬಸ್ ಪ್ರಯಾಣ ಹೊರತುಪಡಿಸಿ ಬೇರೆ ಯಾವ ಗ್ಯಾರಂಟಿಗಳೂ ಸಿಗುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯಂತೂ ಅರ್ಧದಷ್ಟು ಮಹಿಳೆಯರನ್ನು ತಲುಪಿಲ್ಲ. ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಣಗಾಡುತ್ತಿದ್ದಾರೆ ಎಂದರು.


ರಾಜ್ಯದ ಅಭಿವೃದ್ಧಿಗಳೆಲ್ಲ ಸ್ಥಗಿತಗೊಂಡಿವೆ. ಉಚಿತ ವಿದ್ಯುತ್ ಇರಲಿ, ಹಣ ಕೊಟ್ಟರೂ ವಿದ್ಯುತ್ ಸಿಗುತ್ತಿಲ್ಲ. ವಿದ್ಯುತ್ ದರ ಏರಿಕೆಯಾಗಿದೆ. ಬರಪೀಡಿದ ಪ್ರದೇಶಗಳಿಗೆ ಯಾರೊಬ್ಬ ಸಚಿವರೂ ಭೇಟಿ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಇದು ಬೇಕಾಗಿಲ್ಲ. ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಅಸಡ್ಡೆ ತೋರಿಸುತ್ತಿದ್ದಾರೆ. ವಾಸ್ತವಿಕ ಅಂಶಗಳನ್ನು ತಿಳಿದುಕೊಂಡಿಲ್ಲ. ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಟೀಕಿಸಿದರು.


ಶಾಸಕರಿಗೆ ೫ ಕೋಟಿ ಅನುದಾನ ಬಿಡುಗಡೆ ಮಾಡಬೇಕಿತ್ತು ಆದರೆ ಕೇವಲ ೨೦ ಲಕ್ಷ ರೂ. ಮಾತ್ರ ಬಿಡುಗಡೆ ಮಾಡಿದ್ದಾರೆ. ಪರಿಶಿಷ್ಟರ ಯೋಜನೆಗಳೆಲ್ಲ ವಿಫಲವಾಗಿವೆ. ಯಾವ ನಿಗಮಗಳಿಗೂ ಹಣ ಬಿಡುಗಡೆ ಮಾಡಿಲ್ಲ. ರೈತ ಸಂಕಷ್ಟದಲ್ಲಿದ್ದಾನೆ. ಆತನ ನೆರವಿಗೆ ಸರ್ಕಾರ ಬಂದಿಲ್ಲ. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡುತ್ತಿಲ್ಲ. ರೈತನೇ ವಿದ್ಯುತ್ ಬಿಲ್ ಕಟ್ಟಬೇಕು ಎಂಬ ಆದೇಶ ಹೊರಡಿಸಿದೆ.


ದೆಹಲಿ ಕಾಂಗ್ರೆಸ್ ಪಾಲಿಗೆ ರಾಜ್ಯ ಕಾಂಗ್ರೆಸ್ ಎಟಿಎಂ ಆಗಿದೆ. ಇಲ್ಲಿಂದ ಹಣ ಸಂಗ್ರಹಣೆ ಮಾಡಿ ಕಳುಹಿಸಲಾಗುತ್ತಿದೆ. ಅನಗತ್ಯವಾಗಿ ಪ್ರಧಾನಿ ಮೋದಿಯವರು ಕಾಂಗ್ರೆಸ್ ಮುಖಂಡರು ಟೀಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಚಾಳಿಯೇ ಮೋದಿಯವರನ್ನು ಟೀಕೆ ಮಾಢುವುದಾಘಿದೆ. ಕೇಂದ್ರ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಮಾಢುತ್ತಿದೆ. ಬಹುಶಃ ಸಿದ್ದರಾಮಯ್ಯನವರಿಗೆ ಈ ಬಗ್ಗೆ ಮಾಹಿತಿ ಕೊರತೆ ಇದೆ. ಆದ್ದರಿಂದ ಕೇಂದ್ರ ಮೇಲೆ ಗೂಬೆ ಕೂರಿಸುತ್ತಾರೆ ಎಂದು ಆರೋಪಿಸಿದರು. ಕಳೆದ ೯ ವರ್ಷಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ೧೨,೭೮೪ ಕೋಟಿ ರೂ. ಹಣ ನೀಡಿದೆ. ಎಸ್‌ಡಿಆರ್‌ಎಫ್‌ನಲ್ಲಿ ಕಳೆದ ೯ ವರ್ಷದಲ್ಲಿ ೫.೩ ಲಕ್ಷ ಕೋಟಿ ಅನುದಾನ ನೀಡಿದೆ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!