ಶಿವಮೊಗ್ಗ: ಬಡವರಿಗೆ ನಿವೇಶನ ನೀಡುವವರೆಗೂ ಖಾಸಗಿಯವರಿಗೆ ಲೇಔಟ್ ನಿರ್ಮಿಸಲು ಅನುಮತಿ ನೀಡಬಾರದು ಎಂದು ನಗರಾಭಿವೃದ್ಧಿ

ಸಚಿವ ಬೈರತಿ ಸುರೇಶ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿರುವುದಕ್ಕೆ ನಾಗರಿಕರ ಪರವಾಗಿ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಶೀಘ್ರವೇ ನಗರದಲ್ಲಿ ಸರ್ಕಾರಿ ಲೇಔಟ್ ಸಿದ್ದಪಡಿಸಿ, ಬಡವರು, ಮಧ್ಯಮ ವರ್ಗದವರಿಗೆ ನಿವೇಶನ ನೀಡಬೇಕು, ಅಲ್ಲಿಯವರೆಗೆ ಖಾಸಗಿ ಲೇಔಟ್ ಗಳಿಗೆ ಯಾವುದೇ ಅನುಮತಿ ನೀಡಬಾರದು ಎಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.


ಈಗಾಗಲೇ ಸೂಡಾದಿಂದ ನಿವೇಶನ ಕೋರಿ ೩೦೦೦ ಜನರು ಅರ್ಜಿ ಹಾಕಿದ್ದಾರೆ, ಕೂಡಲೇ ಸ್ಥಳೀಯ ಶಾಸಕರು, ಸಂಸದರು, ಜನಪ್ರತಿನಿಧಿಗಳು ಮತ್ತು ಡಿಸಿ, ಅವರೊಂದಿಗೆ ಸೂಡಾ ಆಯುಕ್ತರು ಚರ್ಚಿಸಿ ೨೫೦ ರಿಂದ ೩೦೦ ಎಕರೆ ಜಾಗ ಗುರುತಿಸಿ ಸರ್ಕಾರಿ ಲೇಔಟ್

ಅಭಿವೃದ್ಧಿಪಡಿಸಿ, ಬಡವರು ಮಧ್ಯಮ ವರ್ಗದವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವುದರ ಮುಖಾಂತರ ಭೂ ಮಾಫಿಯಾಗಳಿಗೆ ಕಡಿವಾಣ ಹಾಕಬೇಕೆಂದು ಎಂದಿದ್ದಾರೆ. ಸಚಿವರ ಈ ಸೂಚನೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ಕೈಗೆಟುಕುವ ದರದಲ್ಲಿ ನಿವೇಶನ ಖರೀದಿಸಿ, ಮನೆ ಕಟ್ಟುವ ಕನಸಿಗೆ ಪುಷ್ಟಿ ಸಿಕ್ಕಂತಾಗಿದೆ. ಇದಕ್ಕಾಗಿ ಜಿಲ್ಲೆಯ ನಾಗರಿಕರ ಪರವಾಗಿ ಸಚಿವರಿಗೆ ಅಭಿನಂದಿಸಿದ್ದಾರೆ

By admin

ನಿಮ್ಮದೊಂದು ಉತ್ತರ

error: Content is protected !!