ಮಲೆನಾಡು ಮಳೆಕಾಡು ವನ್ಯಜೀವಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದಲ್ಲಿರುವ ಮಾವುತ ಹಾಗೂ ಕಾವಾಡಿಗಳಿಗೆ ಗುರುವಾರ ದಸರಾ ಹಬ್ಬದ ಪ್ರಯುಕ್ತ ಬಟ್ಟೆಗಳನ್ನು ವಿತರಿಸಲಾಯಿತು.
ಆನೆಗಳ ತರಬೇತಿ ಕ್ಯಾಂಪ್‌ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎಂಆರ್‌ಆರ್‌ಎಸ್ ಸಂಸ್ಥೆಯ ಅಂಗಸಂಸ್ಥೆ ಸಕ್ರೆಬೈಲು ವೈಲ್ಡ್ ಟಸ್ಕರ್ ಗೌರವಾಧ್ಯಕ್ಷ ಎಂ .ಶ್ರೀಕಾಂತ್, ಆನೆ ಬಿಡಾರದ ೮೦ ಮಾವುತರು, ಕಾವಾಡಿಗಳು ಮತ್ತು ಗಾಜನೂರು ವನ್ಯಜೀವಿ ವಿಭಾ ಗದ ಡಿಸಿಪಿ ವಾಚರ್ಸ್ ಮತ್ತು ನಿವೃತ್ತ ಜಮೇದಾರ್ ಗಳಿಗೆ ಬಟ್ಟೆ ವಿತರಿಸಿದರು.
ಈ ವೇಳೆ ಮಾತನಾಡಿದ ಎಂ.ಶ್ರೀಕಾಂತ್, ವೈಲ್ಡ್ ಟಸ್ಕರ್ ಸಂಸ್ಥೆ ಕೊರೊನಾ ಸಂದರ್ಭದಲ್ಲಿ ಜನ್ಮತಾಳಿದೆ. ಆಗ ಮಾವುತ ಹಾಗು ಕಾವಾಡಿಗಳಿಗೆ ಉಚಿತ ಆಹಾರದ ಕಿಟ್‌ಗಳನ್ನ ವಿತರಣೆ ಮಾಡಲಾಗಿತ್ತು.
ಮಾವುತ, ಕಾವಾಡಿಗಳ ಸಂಕಷ್ಟಕ್ಕೆ ಯಾವತ್ತು ಸಹ ಸಂಸ್ಥೆ ಸರ್ಕಾರದ ಗಮನ ಸೆಳೆಯುವಂತಹ ಕಾರ್ಯ ಮಾಡಲಿದೆ ಎಂದರು.
ವನ್ಯಜೀವಿ ಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಮಾತನಾಡಿ ಮಾವುತ ಕಾವಾಡಿಗಳ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವ ಸಂಸ್ಥೆಯ ಉದ್ದೇಶವನ್ನು ಶ್ಲಾಘಿಸಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿ, ವೈಲ್ಡ್ ಟಸ್ಕರ್ ಸಕ್ರೆಬೈಲು ಸಂಸ್ಥೆ ಸಾಂಪ್ರದಾಯಕವಾಗಿ ಮಾವುತ, ಕಾವಾಡಿಗಳ ಬದುಕಿನ ಶೈಲಿ ಆನೆಗಳ ಜೀವನ ಶೈಲಿ ದಾಖಲಿಸುತ್ತಿರು ವುದು ಉತ್ತಮ ಕಾರ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಜೇಸುದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ನಾಗರಾಜ್ ನೇರಿಗೆ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ವನ್ಯಜೀವಿ ವಿಭಾಗದ ವೈದ್ಯ ಡಾ.ವಿನಯ್, ಡಿಆರ್‌ಎಫ್‌ಒ ಮಲ್ಲಿಕಾರ್ಜುನ್ ಸೇರಿದಂತೆ ಬಿಡಾರದ ಸಿಬ್ಬಂದಿ, ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು.