ಶಿವಮೊಗ್ಗ, ಅ.೧೮:
ಪ್ರಕರಣಗಳನ್ನು ಬೇಧಿಸಿ ಅಪರಾಧಿಗಳನ್ನು ಹಿಡಿದು ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಅಪರಾಧ ಕೃತ್ಯಗಳನ್ನು ತಡೆಗಟ್ಟುವಲ್ಲಿ ಪೊಲೀಸರ ಪಾತ್ರ ಬಹಳ ಮುಖ್ಯ.

ಶಿವಮೊಗ್ಗ ನಗರದ ಕೆಲವು ಪೊಲೀಸರು ಅಕ್ರಮಗಳಿಗೆ ಸಾಥ್ ನೀಡುವ ಜೊತೆಗೆ ಅವರೊಂದಿಗೆ ಒಳ ವ್ಯವ ಹಾರಗಳು ನಡೆಸುತ್ತಿದ್ದಾರೆ ಎಂದು ಸಾರ್ವಜ ನಿಕರು ಆರೋಪಿಸಿದ್ದಾರೆ.


ನಗರದಲ್ಲಿ ನಡೆಯುತ್ತಿರುವ ಓಸಿ, ಮರಳು, ಅಕ್ರಮ ಮದ್ಯಮಾರಾಟ ಸೇರಿದಂತೆ ಕೆಲವು ಕಾನೂನು ಬಾಹಿರ ಅಕ್ರಮಗಳಲ್ಲಿ ಪಾಲ್ಗೊಳ್ಳು ವವರನ್ನು ಹಿಡಿಯಬೇಕಾದ ಪೊಲೀಸರೇ ಅವರ ಕೃತ್ಯಕ್ಕೆ ಸಾಥ್ ನೀಡುತ್ತಿದ್ದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ.


ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಆರಕ್ಷಕರು ಇರುತ್ತಾರೆ. ಸ್ಥಳೀಯವಾಗಿ ನಡೆಯುವ ಸಾವಿರಾರು ಪ್ರಕರಣಗಳನ್ನು ಬೇಧಿಸಿ ಅಪರಾಧಿಗಳನ್ನು ಹಿಡಿದು ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿ ತನಿಖೆ ನಡೆಯುವಾಗ ಅ ಪ್ರಕರಣಕ್ಕೆ ಸಂಬಂಧಿ ಸಿದಂತೆ ಸೂಕ್ತವಾದ ಸಾಕ್ಷಿಗಳನ್ನು ಒದಗಿಸಿ

ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡುವುದರಲ್ಲಿ ಪೋಲಿಸರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅದೆಷ್ಟೋ ಪ್ರಕರಣಗಳನ್ನು ನ್ಯಾಯಾಲಯದ ವರೆಗೂ ಬಾರದಂತೆ ಸ್ಥಳೀಯವಾಗಿಯೇ ಪೋಲಿಸರು ಬಗೆಹರಿಸುವ ಕಾರಣ ನಮ್ಮ ಸಮಾಜದಲ್ಲಿ ಪೋಲಿಸರಿಗೆ ಅಪಾರವಾದ ಗೌರವ ಇದೆ ಎಂದರೆ ತಪ್ಪಾಗಲಾರದು.


ಕರ್ನಾಟಕದ ಪೋಲಿಸರೆಂದರೆ ದಕ್ಷತೆ ಮತ್ತು ಪ್ರಾಮಣಿಕತೆಗೆ ಇಡೀ ದೇಶದಲ್ಲೇ ಹೆಸರುವಾಸಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಪರಾಧಿಗಳನ್ನು ಹಿಡಿದು ಅವರಿಗೆ ಶಿಕ್ಷೆಯಾಗುವಂತೆ

ನೋಡಿಕೊಳ್ಳಬೇಕಾದಂತಹ ಕೆಲ ಪೋಲೀಸರೇ ಈ ರೀತಿಯ ಅಂದರೆ ಲಂಚ ಹೀಗೆ ಅನೇಕ ಅಪರಾಧಗಳಲ್ಲಿ ಭಾಗಿಯಾಗುತ್ತಿ ರುವುದು ದುರಂತ.


ವಿಷಯ ವಿವರ ಶಿವಮೊಗ್ಗ ನಗರ ಹಾಗೇ ಹೊರವಲಯದ ಭಾಗದಲ್ಲಿ ಹತ್ತಾರು ಸಿಬ್ಬಂದಿಗಳ ಜೂಜಾಟವೆಂದು ಹೇಳುತ್ತಿದ್ದು, ಓದುಗರು ನೀಡುವ ದಾಖಲೆಗಳ ಸಹಿತದ ಆರೋಪ ಸಾರ್ವಜನಿಕ ಚರ್ಚೆಗೆ ಬಿಡುವುದಷ್ಡೆ ನಮ್ಮ ಕೆಲಸ.

By admin

ನಿಮ್ಮದೊಂದು ಉತ್ತರ

error: Content is protected !!