ಶಿವಮೊಗ್ಗ: ಶಿವಮೊಗ್ಗ ದಸರಾದ ವಿಜಯ ದಶಮಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವಿಯ ಅಂಬಾರಿ ಹೊರುವ ಸಕ್ರೆಬೈಲು
ಆನೆ ಬಿಡಾರದ ಆನೆಗಳಾದ ಸಾಗರ, ನೇತ್ರಾವತಿ ಮತ್ತು ಹೇಮಾವತಿಗೆ ಇಂದು ಪಾಲಿಕೆ ಮೇಯರ್ ನೇತೃತ್ವದಲ್ಲಿ ಆನೆ ಬಿಡಾರಕ್ಕೆ ತೆರಳಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ದಸರಾ ಉತ್ಸವ ಸಮಿತಿಯ ಅಧಿಕಾರಿಗಳು, ಪಾಲಿಕೆ ಸದಸ್ಯರು, ಮತ್ತು ನಗರ ವಿಧಾನ ಸಭಾ ಕ್ಷೇತ್ರದ ಸದಸ್ಯರಾದ ಎಸ್.ಎನ್. ಚನ್ನಬಸಪ್ಪನವರು ಆನೆಬಿಡಾರದಲ್ಲಿ
ಮೂರೂ ಆನೆಗಳಿಗೆ ಬಾಳೆಹಣ್ಣು, ಕಬ್ಬು ಹಾಗೂ ಸಿಹಿ ತಿನ್ನಿಸಿ ಅಲಂಕಾರ ಮಾಡಿ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿ ಪೂಜೆ ಸಲ್ಲಿಸಿದರು.
ಇದಕ್ಕೂ ಮುನ್ನ ಮಹಿಳಾ ಸದಸ್ಯರು ಎಲ್ಲಾ ಆನೆಗಳಿಗೆ ಅರಿಶಿಣ ಕುಂಕುಮ ಹಚ್ಚಿ ಪುಷ್ಪನಮನ ಸಲ್ಲಿಸಿದರು. ಆನೆಗಳು ಕೂಡ ಸಂಭ್ರಮದಿಂದ
ಚನ್ನಬಸಪ್ಪ ಮತ್ತು ಮೇಯರ್ ಶಿವಕುಮಾರ್ ಹಾಗೂ ಎಲ್ಲಾ ಪಾಲಿಕೆ ಸದಸ್ಯರಿಗೆ ಸೊಂಡಿಲು ಎತ್ತಿ ಗೌರವ ಸಲ್ಲಿಸಿತು. ಅಧಿಕೃತವಾಗಿ ಮೆರವಣಿಗೆಗೆ ಪಾಲಿಕೆ ವತಿಯಿಂದ ಆನೆಗಳಿಗೆ ಮತ್ತು ಕಾವಾಡಿಗರಿಗೆ ಹಾಗೂ ಅರಣ್ಯ ಇಲಾಖೆಗೆ ಆಮಂತ್ರಣವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್, ಜ್ಞಾನೇಶ್ವರ್, ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಪಟೆಗಾರ್, ವೈದ್ಯರಾದ ಡಾ.
ವಿನಯ್, ಆರ್‌ಎಫ್‌ಒ ವಿನಯ್ ಹಾಗೂ ಪಾಲಿಕೆ ಉತ್ಸವ ಸಮಿತಿಯ ಅಧ್ಯಕ್ಷ ಯು.ಹೆಚ್.ವಿಶ್ವನಾಥ್ ಹಾಗೂ ಸದಸ್ಯರಾದ ಮಂಜುನಾಥ್, ಸುವರ್ಣಾ ಶಂಕರ್
, ಸುನೀತಾ ಅಣ್ಣಪ್ಪ, ಕಲ್ಪನಾ ರಾಮು, ಭಾನುಮತಿ ವಿನೋದ್ ಶೇಟ್, ಇ ವಿಶ್ವಾಸ್, ಯಮುನಾ ರಂಗೇಗೌಡ, ರೇಖಾರಂಗನಾಥ್, ಪ್ರಭು, ಆರತಿ ಆ.ಮಾ. ಪ್ರಕಾಶ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು