ಸಾಗರ : ಇಲ್ಲಿನ ಗಾಂಧಿನಗರದ ಅಗ್ರಹಾರ ಸರ್ಕಲ್‌ನಲ್ಲಿ ಬೈಕ್ ಮತ್ತು ಕೆ.ಎಸ್.ಆರ್.ಟಿ.ಸಿ. ಬಸ್ ನಡುವೆ ಡಿಕ್ಕಿ ಸಂಭವಿಸಿ ಮೂವರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ

.
ಲ್ಯಾವಿಗೆರೆ ಗ್ರಾಮದ ಗುರುಮೂರ್ತಿ, ಮಧುಕುಮಾರ್, ಜಂಬಾನಿ ಗ್ರಾಮದ ಅಮಯ್ ಎಂಬುವವರು ಬೈಕ್‌ನಲ್ಲಿ ಹೋಗುತ್ತಿದ್ದಾಗ

ಕೆ.ಎಸ್.ಆರ್.ಟಿ.ಸಿ. ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ಗಂಭೀರವಾಗಿ

ಗಾಯಗೊಂಡ ಮೂವರು ಯುವಕರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಬಸ್ ಚಾಲಕ ನಗರ ಠಾಣೆಗೆ ದೂರು ನೀಡಿದ್ದಾರೆ.