ಶಿವಮೊಗ್ಗ: ಗ್ರಾಹಕರು ನೇರವಾಗಿ ವ್ಯಾಪಾರ ವಹಿವಾಟು ನಡೆಸಿದಾಗ ಉತ್ತಮ ಬಾಂಧವ್ಯ ವೃದ್ಧಿ ಆಗುವ ಜತೆಯಲ್ಲಿ ವ್ಯಾಪಾರಸ್ಥರು ಒಳ್ಳೆಯ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.


ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶ್ರೀನಿಧಿ ಸಿಲ್ಕ್ ಮತ್ತು ಟೆಕ್ಸ ಟೈಲ್ಸ್ಲ್ಸ್ ವತಿಯಿಂದ ಅಭಿಯಂತರು, ಗುತ್ತಿಗೆದಾರರು ಹಾಗೂ ಕಾರ್ಮಿಕರಿಗೆ ಆಯೋಜಿಸಿದ್ದ ರಿಯಾಯಿತಿ ಮೇಳ ಉದ್ಘಾಟಿಸಿ ಮಾತನಾಡಿದರು.


ತಂತ್ರಜ್ಞಾನ ಯುಗದಲ್ಲಿ ಆನ್‌ಲೈನ್ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಹೆಚ್ಚು ನಡೆಯುತ್ತಿದ್ದು, ಆದರೆ ಗುಣಮಟ್ಟದ ಬಗ್ಗೆ ಸರಿಯಾಗಿ ಗ್ರಾಹಕರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಫ್ ಲೈನ್‌ನಲ್ಲಿ ಗ್ರಾಹಕರು ನೇರ ಖರೀದಿಗೆ ಮುಂದಾದಗ ಗುಣಮಟ್ಟದ ಖಾತ್ರಿ ಸಿಗುತ್ತದೆ ಎಂದು ತಿಳಿಸಿದರು.


ಶ್ರೀನಿಧಿ ಸಿಲ್ಕ್ ಮತ್ತು ಟೆಕ್ಸ್ ಟೈಲ್ಸ್ ಸಂಸ್ಥೆಯು ಸುದೀರ್ಘ ದಶಕಗಳ ಅವಧಿಯಿಂದ ವ್ಯಾಪಾರ ವಹಿವಾಟು ನಡೆಸಿಕೊಂಡು ಬಂದಿದ್ದು, ಉದ್ಯಮದ ಜತೆಯಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ವಿಶೇಷವಾಗಿ ಆಯೋಜಿಸಿಕೊಂಡು ಬರುತ್ತಿದೆ. ವಿಶೇಷ ರಿಯಾಯಿತಿ ಮೇಳ ಎಲ್ಲರಿಗೂ ಉಪಯೋಗ ಆಗಲಿ ಎಂದರು.


ಶ್ರೀನಿಧಿ ಸಿಲ್ಕ್ ಮತ್ತು ಟೆಕ್ಸ್ ಟೈಲ್ಸ್ ಸಂಸ್ಥೆಯ ಟಿ.ಆರ್.ಅಶ್ವತ್ಥ್ ನಾರಾಯಣಶೆಟ್ಟಿ ಮಾತನಾಡಿ, ಗ್ರಾಹಕರು ಆನ್‌ಲೈನ್‌ನಲ್ಲಿ ಖರೀದಿಸುವಾಗ ಬಟ್ಟೆಯ ಬಣ್ಣ, ಗುಣಮಟ್ಟ ತಿಳಿಯುವುದಿಲ್ಲ. ಆರ್ಡರ್ ತಲುಪಿದಾಗಲೇ ತಿಳಿಯುತ್ತದೆ. ಆದರೆ.    ಸ್ಥಳೀಯವಾಗಿ ನೇರವಾಗಿ ಅಂಗಡಿಗಳಿಗೆ ಭೇಟಿ ಮಾಡಿ ಖರೀದಿ ಮಾಡಿದರೆ ಒಳ್ಳೆಯ ಉತ್ಪನ್ನಗಳು ನಮ್ಮದಾಗುತ್ತವೆ ಎಂದು ಹೇಳಿದರು.


ಶ್ರೀನಿಧಿ ಸಂಸ್ಥೆಯು ದಶಕಗಳಿಂದ ಶಿವಮೊಗ್ಗ ನಗರದಲ್ಲಿ ಉದ್ಯಮ ನಡೆಸುತ್ತಿದ್ದು, ವಿಶೇಷವಾಗಿ ಹಬ್ಬದ ಸಂದರ್ಭದಲ್ಲಿ ರಿ ಯಾಯತಿ ಮೇಳ ಹಮ್ಮಿಕೊಂಡಿದ್ದು, ಅಭಿಯಂತರು, ಗುತ್ತಿಗೆದಾರರು ಹಾಗೂ ಕಾರ್ಮಿಕರಿಗೆ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಗುತ್ತಿಗೆದಾರ ಮಂಜುನಾಥ್ ಅವರು ಶ್ರೀನಿಧಿ ಸಿಲ್ಕ್ ಮತ್ತು ಟೆ ಕ್ಸ್ ಟೈಲ್ಸ್ ಸಂಸ್ಥೆಯು ಆಯೋಜಿಸಿರುವ ರಿಯಾಯತಿ ಮೇಳಕ್ಕೆ ಶುಭಹಾರೈಸಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಶ್ರೀನಿಧಿ ಸಂಸ್ಥೆಯ ವೆಂಕಟೇಶ್, ರಾಮಪ್ರಸಾದ್, ಚೇತನ್, ಬದ್ರೀನಾಥ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!